ಚಿನ್ನದ ದರದಲ್ಲಿ ಮಹಾ ಸ್ಫೋಟ: ಗಗನಕ್ಕೇರಿದ ಹಳದಿ ಲೋಹದ ಬೆಲೆ, ಬೆಳ್ಳಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! Gold-Silver Price

ಚಿನ್ನದ ದರದಲ್ಲಿ ಮಹಾ ಸ್ಫೋಟ: ಗಗನಕ್ಕೇರಿದ ಹಳದಿ ಲೋಹದ ಬೆಲೆ, ಬೆಳ್ಳಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಚಿನ್ನದ ದರದಲ್ಲಿ ಮಹಾ ಸ್ಫೋಟ: ಗಗನಕ್ಕೇರಿದ ಹಳದಿ ಲೋಹದ ಬೆಲೆ, ಬೆಳ್ಳಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
Published on
ನವದೆಹಲಿ: ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಯುದ್ಧದ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ(Gold-Silver Price) ದರ ಅಕ್ಷರಶಃ ಬೆಂಕಿಯಂತಾಗಿದೆ. ಗುರುವಾರ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಹೂಡಿಕೆದಾರರಲ್ಲಿ ಸಂಚಲನ ಮೂಡಿಸಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ ಸುಮಾರು $5,000 (ಸುಮಾರು 4.15 ಲಕ್ಷ ರೂ.) ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.

ಬೆಲೆ ಏರಿಕೆಗೆ ಕಾರಣವಾದ 'ಮಹಾ ಯುದ್ಧ'ದ ಭೀತಿ!

ಹೆಚ್‌ಡಿಎಫ್‌ಸಿ ಸೆಕ್ಯೂರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಅವರ ಪ್ರಕಾರ, ಈ ದಿಢೀರ್ ಏರಿಕೆಗೆ ಮುಖ್ಯ ಕಾರಣಗಳು ಇಲ್ಲಿವೆ.
ಇರಾನ್ ಮೇಲೆ ಅಮೆರಿಕ ದಾಳಿಯ ಆತಂಕ: ಇರಾನ್ ವಿರುದ್ಧ ಅಮೆರಿಕ ಸೇನಾ ಕಾರ್ಯಾಚರಣೆ ನಡೆಸಬಹುದು ಎಂಬ ವರದಿಗಳು ಹರಡುತ್ತಿದ್ದಂತೆಯೇ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡಿದ್ದಾರೆ.
ರಷ್ಯಾ-ಯುಕ್ರೇನ್ ಮಾತುಕತೆ ವೈಫಲ್ಯ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿದ್ದ ಸಂಧಾನ ಮಾತುಕತೆಗಳು ಹಠಾತ್ತನೆ ಸ್ಥಗಿತಗೊಂಡಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ.
ಷೇರು ಮಾರುಕಟ್ಟೆಯಿಂದ ಪಲಾಯನ: ರಿಸ್ಕ್ ಇರುವ ಷೇರು ಮಾರುಕಟ್ಟೆಯಿಂದ ಹಣವನ್ನು ಹಿಂತೆಗೆದುಕೊಳ್ಳುತ್ತಿರುವ ಹೂಡಿಕೆದಾರರು, ಅತಿ ಹೆಚ್ಚು ನಂಬಿಕಸ್ತವಾದ ಚಿನ್ನದ ಮೇಲೆ ಹಣ ಸುರಿಯುತ್ತಿದ್ದಾರೆ.
ಚಿನ್ನ (24 ಕ್ಯಾರೆಟ್)- ₹1,58,650 (ಪ್ರತಿ 10 ಗ್ರಾಂ) ಏರಿಕೆ -₹1,950 ರೂ.
ಬೆಳ್ಳಿ - ₹2,64,000 (ಪ್ರತಿ ಕೆಜಿ)- ಏರಿಕೆ ₹18,000 ರೂ.
ಬೆಳ್ಳಿ ದರವು ಕೇವಲ ಒಂದೇ ದಿನದಲ್ಲಿ ₹18,000 ಏರಿಕೆಯಾಗಿ ₹2.6 ಲಕ್ಷದ ಗಡಿ ದಾಟಿರುವುದು ಸಾಮಾನ್ಯ ಜನರನ್ನು ಕಂಗಾಲಾಗಿಸಿದೆ.

ಭವಿಷ್ಯದ ಮುನ್ಸೂಚನೆ: ಬೆಲೆ ಇನ್ನೂ ಏರುತ್ತಾ..?

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವುದರಿಂದ ಮತ್ತು ಅಮೆರಿಕ-ಇರಾನ್ ನಡುವೆ ಸಂಘರ್ಷ ತಾರಕಕ್ಕೇರಿರುವುದರಿಂದ ಚಿನ್ನದ ದರ ಶೀಘ್ರದಲ್ಲೇ ಪ್ರತಿ 10 ಗ್ರಾಂಗೆ ₹1.70 ಲಕ್ಷ ದಾಟಿದರೂ ಅಚ್ಚರಿಯಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮದುವೆ ಸೀಸನ್ ಆರಂಭವಾಗುತ್ತಿರುವುದರಿಂದ ಭಾರತೀಯ ಗ್ರಾಹಕರಿಗೆ ಈ ಬೆಲೆ ಏರಿಕೆ ದೊಡ್ಡ ಹೊಡೆತ ನೀಡಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net