ಚಿನ್ನದ ಬೆಲೆ ₹3,200 ಇಳಿಕೆ

Gold price
Gold price
Published on
ನವದೆಹಲಿ:
ಅಖಿಲ ಭಾರತ ಸರಾಫ ಸಂಘದ ಮಾಹಿತಿ ಪ್ರಕಾರ, ಶೇ. 99.9 ಶುದ್ಧತೆಯ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹3,200ರಷ್ಟು ಇಳಿಕೆಯಾಗಿ ₹1,62,800ಕ್ಕೆ ತಲುಪಿದೆ. ಗುರುವಾರ ಇದು ₹1,66,000ರ ದಾಖಲೆಯ ಮಟ್ಟದಲ್ಲಿತ್ತು. ಬೆಳ್ಳಿಯ ದರದಲ್ಲೂ ಭಾರಿ ಇಳಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ ಬರೋಬ್ಬರಿ ₹21,600ರಷ್ಟು ಪತನಗೊಂಡಿದೆ. ಇದರಿಂದಾಗಿ ಬೆಳ್ಳಿ ಬೆಲೆ ₹2,75,000ಕ್ಕೆ ಇಳಿಕೆಯಾಗಿದೆ. ಗುರುವಾರದ ವಹಿವಾಟಿನಲ್ಲಿ ಬೆಳ್ಳಿ ₹2,96,600ರಲ್ಲಿ ಸ್ಥಿರವಾಗಿತ್ತು. ಅಮೆರಿಕನ್ ಡಾಲರ್ ಮತ್ತು ಬಾಂಡ್ ಇಳುವರಿ ಪ್ರಬಲಗೊಂಡಿರುವುದು ಹಾಗೂ ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಡಾಲರ್‌ನತ್ತ ಮುಖ ಮಾಡಿರುವುದು ಈ ಭಾರಿ ಕುಸಿತಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net