ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಚಿನ್ನದ ಬೆಲೆ 10 ಗ್ರಾಂಗೆ ₹2,500 ಜಿಗಿದು ₹1,59,400ಕ್ಕೆ ತಲುಪಿದೆ. ಬೆಳ್ಳಿ ದರವೂ ಕೆಜಿಗೆ ₹5,000 ಏರಿಕೆಯಾಗಿ ₹2,60,700ರ ಗಡಿ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಔನ್ಸ್ಗೆ 4,340 ಡಾಲರ್ಗೆ ಏರಿಕೆಯಾಗಿದೆ. ತೈಲ ದರ ಕುಸಿತ ಹಾಗೂ ಡಾಲರ್ ಸೂಚ್ಯಂಕ ದುರ್ಬಲಗೊಂಡಿರುವುದು ಈ ಏರಿಕೆಗೆ ಕಾರಣ ಎಂದು ವಿಶ್ಲೇಷಕರು ತಿಳಿಸಿದ್ದಾರೆ.