_1778691512136.webp?w=480&auto=format%2Ccompress&fit=max)
_1778691512136.webp?w=480&auto=format%2Ccompress&fit=max)
ಅಖಿಲ ಭಾರತ ಸರಾಫ ಸಂಘದ ಮಾಹಿತಿ ಪ್ರಕಾರ, ಶೇ. 99.9 ಶುದ್ಧತೆಯ ಚಿನ್ನದ ಬೆಲೆ ಶೇ. 5ಕ್ಕಿಂತ ಹೆಚ್ಚು ಏರಿಕೆಯಾಗಿ ಪ್ರತಿ 10 ಗ್ರಾಂಗೆ ₹1,65,350ಕ್ಕೆ ತಲುಪಿದೆ. ಮಂಗಳವಾರ ಇದರ ಬೆಲೆ ₹1,56,800ರಷ್ಟಿತ್ತು. ಇತ್ತ ಬೆಳ್ಳಿ ಬೆಲೆ ಪ್ರತಿ ಕೆಜಿಗೆ ₹2,77,000ರಿಂದ ₹2,97,500ರ ಮಟ್ಟಕ್ಕೆ ಜಿಗಿದಿದೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ವೆಚ್ಚವನ್ನು ತಗ್ಗಿಸಲು ಮತ್ತು ಅನಗತ್ಯ ಆಮದುಗಳಿಗೆ ಬ್ರೇಕ್ ಹಾಕಲು ಸರ್ಕಾರ ಚಿನ್ನ, ಬೆಳ್ಳಿ, ಪ್ಲಾಟಿನಂ ಆಮದು ಸುಂಕ ಏರಿಕೆ ಕ್ರಮ ಕೈಗೊಂಡಿದ್ದು, ನೂತನ ದರಗಳು ಬುಧವಾರದಿಂದಲೇ ಜಾರಿಗೆ ಬಂದಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ರೂಪಾಯಿ ಮೌಲ್ಯದ ಕುಸಿತವೂ ಚಿನ್ನ, ಬೆಳ್ಳಿಯ ಈ ಬೆಲೆ ಏರಿಕೆಗೆ ಕಾರಣವಾಗಿವೆ.