ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಏರಿಕೆ

ಚಿನ್ನ-ಬೆಳ್ಳಿ ದರ
ಚಿನ್ನ-ಬೆಳ್ಳಿ ದರ
Published on

ನವದೆಹಲಿ: ಜಾಗತಿಕ ಮಾರುಕಟ್ಟೆಯ ಪ್ರಬಲ ಪ್ರವೃತ್ತಿ ಮತ್ತು ಸುರಕ್ಷಿತ ಹೂಡಿಕೆಯ ಮೇಲಿನ ಸತತ ಆಸಕ್ತಿಯಿಂದಾಗಿ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನ-ಬೆಳ್ಳಿ ಬೆಲೆ ಶೇಕಡ 2ರಷ್ಟು ಏರಿಕೆಯಾಗಿದೆ.

ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2.77 ಲಕ್ಷ ರೂ.ಗೆ ಏರಿದ್ದರೆ, ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1.64 ಲಕ್ಷ ರೂ.ಗೆ ತಲುಪಿದೆ. ಅಖಿಲ ಭಾರತ ಸರಾಫ ಅಸೋಸಿಯೇಷನ್ ನೀಡಿರುವ ಮಾಹಿತಿ ಪ್ರಕಾರ, ಬೆಳ್ಳಿಯ ಬೆಲೆ ಮಂಗಳವಾರ ಇದ್ದ 2,72,000 ರೂ.ನಿಂದ 5,900 ರೂ. ಜಿಗಿತ ಕಂಡು, ಪ್ರತಿ ಕೆಜಿಗೆ 2,77,900 ರೂ.ಗೆ ತಲುಪಿದೆ.

ಸತತ ಐದನೇ ದಿನವೂ ತನ್ನ ಏರಿಕೆ ಮುಂದುವರಿಸಿರುವ ಶೇ. 99.9 ಶುದ್ಧತೆಯ ಚಿನ್ನದ ಬೆಲೆ 1,000 ರೂ. ಏರಿಕೆಯಾಗಿ, ಪ್ರತಿ 10 ಗ್ರಾಂಗೆ 1,64,200 ರೂ.ಗೆ ತಲುಪಿದೆ. ಮಂಗಳವಾರ ಚಿನ್ನದ ಬೆಲೆ 10 ಗ್ರಾಂಗೆ 1,63,200 ರೂ. ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net