ಚಿನ್ನ, ಬೆಳ್ಳಿ ಮತ್ತಷ್ಟು ದುಬಾರಿ

Gold and silver
Gold and silver
Published on
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡ ಬೆನ್ನಲ್ಲೇ, ರಾಷ್ಟ್ರ ರಾಜಧಾನಿಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಭಾರಿ ಏರಿಕೆ ಕಂಡಿದೆ.
ಮಂಗಳವಾರ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 1,500 ರೂಪಾಯಿ ಏರಿಕೆಯಾಗಿ 1.56 ಲಕ್ಷ ರೂಪಾಯಿ ದಾಟಿದರೆ, ಬೆಳ್ಳಿ ಬೆಲೆಯು ಶೇ.4ಕ್ಕಿಂತ ಹೆಚ್ಚು ಜಿಗಿದು ಪ್ರತಿ ಕೆಜಿಗೆ 2.77 ಲಕ್ಷ ರೂಪಾಯಿಗೆ ತಲುಪಿದೆ. 99.9 ಪ್ರತಿಶತ ಶುದ್ಧತೆಯ ಚಿನ್ನದ ಬೆಲೆ ಶೇ.1ರಷ್ಟು ಏರಿಕೆಯಾಗಿ 1,56,800 ರೂಪಾಯಿ ತಲುಪಿದೆ. ಸೋಮವಾರ ಇದು 1,55,300 ರೂ. ಇತ್ತು. ಬೆಳ್ಳಿ ಬೆಲೆಯು ಬರೋಬ್ಬರಿ 12,000 ರೂಪಾಯಿಗಳಷ್ಟು (ಶೇ.4.53) ಏರಿಕೆಯಾಗಿ ಪ್ರತಿ ಕೆಜಿಗೆ 2,77,000 ರೂಪಾಯಿಗೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ. ಇರಾನ್ ಕದನ ವಿರಾಮ ಒಪ್ಪಂದವು ಅತಂತ್ರ ಸ್ಥಿತಿಯಲ್ಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯು ಭೌಗೋಳಿಕ ರಾಜಕೀಯ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಜಾಗತಿಕ ಅನಿಶ್ಚಿತತೆ ಮತ್ತು ಹಣದುಬ್ಬರದ ಭೀತಿಯಿಂದಾಗಿ ಹೂಡಿಕೆದಾರರು ಸುರಕ್ಷಿತ ಆಯ್ಕೆಯಾಗಿ ಚಿನ್ನದತ್ತ ಮುಖ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net