ಇನ್ನು ಇದಕ್ಕೂ ಮುಂಚೆ ಕೋಲ್ಕತ್ತಾದಲ್ಲಿ ಅವರೊಂದಿಗೆ ಮೀಟ್-ಅಂಡ್-ಗ್ರೀಟ್ ಸೆಷನ್ ಆಯೋಜನೆ ಮಾಡಲಾಗಿದೆ. ಈ ಸೆಷನ್‌ನಲ್ಲಿ ಮೆಸ್ಸಿ ಜೊತೆ ಒಂದು ಸೆಲ್ಫಿ ಅಥವಾ ಫೋಟೋಗೆ 9.95 ಲಕ್ಷ (ಪ್ಲಸ್ GST) ಖರ್ಚು ಮಾಡಬೇಕು ಕೇವಲ 100 ಸ್ಲಾಟ್‌ಗಳು(100 ಜನರಿಗೆ ಮಾತ್ರ ಅವಕಾಶ) ಮಾತ್ರ ಲಭ್ಯ ಎಂದು ಹೇಳಲಾಗುತ್ತಿದೆ. ಹಲವರಿಗೆ, ಇದು ತಮ್ಮ ಕ್ರೀಡಾ ನಾಯಕನೊಂದಿಗೆ ಅವರು ಪಡೆಯುವ ಅತ್ಯಂತ ಹತ್ತಿರದ ಕ್ಷಣವಾಗಿದೆ. ಇನ್ನು ಕೆಲವರಿಗೆ, ಇದು ಕೈಗೆಟುಕದ ಅವಕಾಶವಾಗಿದೆ.