Global air pollution : ಭಾರತವೂ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ. ಸ್ಟಾರ್ಟ್ಅಪ್ಗಳು, ಮೆಟ್ರೋ ನಗರಿಗಳು, ಹೆದ್ದಾರಿ, ಡಿಜಿಟಲ್ ಪಾವತಿ ಸೇರಿದಂತೆ ನಾನಾ ವಿಚಾರದಲ್ಲಿ ಭಾರತ ಈಗ ಯಾವುದಕ್ಕೂ ಕಮ್ಮಿ ಇಲ್ಲ. ಅಭಿವೃಧ್ಧಿಯ ಪಥದಲ್ಲಿ ಸಾಗುತ್ತಿರುವ ಭಾರತ ತನ್ನ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಡುವುದರಲ್ಲಿ ಯಾಮಾರುತ್ತಿದೆ. ಇದಕ್ಕೆ ಉದಾಹರಣೆಯೆಂದರೆ, ಸ್ವಿಟ್ಜರ್ಲೆಂಡ್ ಮೂಲದ ಐಕ್ಯೂಏರ್ ಸಂಸ್ಥೆಯು '2025ರ ವಿಶ್ವ ವಾಯು ಗುಣಮಟ್ಟ ವರದಿಯಲ್ಲಿ ಸಿಕ್ಕಿರುವ ಗಂಭೀರ ಮಾಹಿತಿ.