ಪತಿಯ ವಾದ: ಸುರೇಶ್ ಚಂದ್ರ ಅವರ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿ, "ಅರ್ಜಿದಾರರು ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕರಾಗಿದ್ದು, ಅವರ ಆದಾಯವೇ ಅತ್ಯಲ್ಪವಾಗಿದೆ. ಈಗಾಗಲೇ ಆರು ಬಾರಿ ಜೀವನಾಂಶದ ಮೊತ್ತವನ್ನು ಹೆಚ್ಚಿಸಲಾಗಿದ್ದು, ಈಗಿನ 3,000 ರೂ.ಗಳ ಮೊತ್ತವು ಅವರ ಶಕ್ತಿಗೆ ಮೀರಿದ್ದಾಗಿದೆ. ನ್ಯಾಯಾಲಯವು ಪತಿಯ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸದೆ ಈ ಆದೇಶ ನೀಡಿದೆ" ಎಂದು ವಾದಿಸಿದ್ದರು.