ಕತ್ತು ಸೀಳುವುದಾಗಿ ಗೆಳೆಯನಿಗೆ ಬೆದರಿಕೆ ಹಾಕಿದ ಗೆಳತಿ, ಮನನೊಂದ ಯುವಕ ಆತ್ಮಹತ್ಯೆ!

Girlfriend
Girlfriend
Published on

ಪ್ರಮುಖ ಮುಖ್ಯಾಂಶಗಳು

  • ಗೆಳತಿಯೊಬ್ಬಳು ಗೆಳೆಯನಿಗೆ ಕತ್ತು ಸೀಳುವುದಾಗಿ ಬೆದರಿಕೆ
  • ಮನನೊಂದ 22 ಯುವಕ ಆತ್ಮಹತ್ಯೆಗೆ ಶರಣು
ಮಧ್ಯಪ್ರದೇಶ:ಗೆಳತಿಯೊಬ್ಬಳು ಗೆಳೆಯನಿಗೆ ಕತ್ತು ಸೀಳುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆ ಆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಇತ್ತೀಚಿಗೆ ನಡೆದಿದೆ.
ಇಂದೋರ್‌ನ ಶಿವಾಜಿ ನಗರದಲ್ಲಿ ಈ ಘಟನೆ ನಡೆದಿದ್ದು, ನವೆಂಬರ್ 14ರ ಸಂಜೆ ಅಭಿಷೇಕ್ ಪರಿವಾರ್ ಎಂಬ ಯುವಕ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಆದರೆ, ಯುವಕ ಸಾಯುವ ಮುನ್ನ ಸೆರೆ ಹಿಡಿದಿದ್ದ ವಿಡಿಯೋವೊಂದು ಪೊಲೀಸರಿಗೆ ಸಿಕ್ಕಿದೆ. ಈ ವಿಡಿಯೋದಲ್ಲಿ ಅಭಿಷೇಕ್ ಪರಿವಾರ್ ಗೆಳತಿ ಖುಷಿ ಆತನ ಕುತ್ತಿಗೆ ಕತ್ತಿ ಹಿಡಿದು ನನ್ನಿಂದ ದೂರ ಆಗು ಎಂದು ಬೆದರಿಕೆ ಹಾಕುತ್ತಿರುವ ದೃಶ್ಯಗಳು ಸೆರೆಯಾಗಿದೆ. ಹೀಗಾಗಿ, ಇದು ಈ ಪ್ರಕರಣ ಪ್ರೇಮ ಪ್ರಕರಣದಂತೆ ಕಾಣುತ್ತಿದ್ದು, ತನಿಕೆ ಮಂದುವರೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಅಲ್ಲ ಇದು ಕೊಲೆ!

ತಮ್ಮ ಮಗ ಸಾಯುವ ಮುನ್ನ ತನ್ನ ಗೆಳತಿ ಖುಷಿ ಜೊತೆ ಮಾತನಾಡುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ. ಇದು ಆತ್ಮಹತ್ಯೆಯಲ್ಲ, ಉದ್ದೇಶಪೂರ್ವಕ ಕೊಲೆ ಎಂದು ಆರೋಪಿಸಿದ ಯುವಕನ ತಂದೆ ರಾಮಹಿತ್ ಪ್ರಜಾಪತ್, ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹುಡುಗಿ ಅವನನ್ನು ಸಾಯುವಂತೆ ಮಾಡಿದ್ದಾಳೆ. ಅಭಿಷೇಕ್ ಹೇಗಾದರೂ ತನ್ನ ಜೀವನದಿಂದ ದೂರ ಹೋಗಬೇಕೆಂದು ಅವಳು ಬಯಸಿದ್ದಳು. ಈ ಮಾನಸಿಕ ಒತ್ತಡದಿಂದಾಗಿ, ಮಗ ಅಂತಹ ಹೆಜ್ಜೆ ಇಟ್ಟಿದ್ದಾನೆ. ಖುಷಿ ಮತ್ತು ಅಭಿಷೇಕ್ ಬಹಳ ದಿನಗಳಿಂದ ಸಂಬಂಧದಲ್ಲಿದ್ದರು, ಆದರೆ ಖುಷಿಯ ಕುಟುಂಬಕ್ಕೆ ಇದರಿಂದ ಸಂತೋಷವಾಗಿರಲಿಲ್ಲ. ಅಷ್ಟೇ ಅಲ್ಲ, ಅವರು ಅಭಿಷೇಕ್ ಅವರನ್ನು ಹೊಡೆದು ಬೇರೆಯಾಗುವಂತೆ ಒತ್ತಾಯಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net