ದರೋಡೆಗೆ ಬಂದ ಕಳ್ಳನಿಗೆ ಲಾಲಿಪಾಪ್​ ಕೊಟ್ಟ ಅಂಗಡಿ ಮಾಲೀಕನ ಮಗಳು! ಮುಂದೇನಾಯ್ತ ಗೊತ್ತಾ? | lollipop

 lollipop
lollipop
Published on

ಪ್ರಮುಖ ಮುಖ್ಯಾಂಶಗಳು

  • ತನ್ನ ಅಂಗಡಿಗೆ ದರೋಡೆಗೆ ಬಂದ ಕಳ್ಳನಿಗೆ ಲಾಲಿಪಾಪ್​ ಕೊಟ್ಟ ಹುಡುಗಿ
  • ಹುಡುಗಿಯ ಮುಗ್ಧತೆಗೆ ಮನಸೋತು ಕಳ್ಳ ಮಾಡಿದ್ದೇನು? ಗೊತ್ತೇ?
ಬೆಂಗಳೂರು: ದಿನಂಪ್ರತಿ ಇಂಟರ್ನೆಟ್​ನಲ್ಲಿ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತವೆ. ಇದರಲ್ಲಿ ಕೆಲ ವಿಡಿಯೋಗಳು ಭಯಾನಕ ಇದ್ರೆ, ಇನ್ನು ಕೆಲ ವಿಡಿಯೋಗಳು ಹೃದಯವನ್ನು ಸ್ಪರ್ಶಿಸುವ ಮತ್ತು ಮಾನವಿಯತೆಗೆ ಸಾಕ್ಷಿ ಆಗುವ ಉದಾಹರಣೆಗಳನ್ನು ಪ್ರಸ್ತುತ ಪಡಿಸುತ್ತದೆ. ಆದಾಗ್ಯೂ, ಇಂತದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ವಿಡಿಯೋದಲ್ಲಿ ಪುಟ್ಟ ಹುಡುಗಿಯ ಮುಗ್ಧತೆ ಕಳ್ಳನ ಕಲ್ಲಿನಂತ ಹೃದಯವನ್ನು ಕರಗಿಸಿದೆ. ಸಾಮಾನ್ಯವಾಗಿ, "ಕಳ್ಳ" ಎಂಬ ಪದವು ಭಯ, ಕೋಪ ಅಥವಾ ದ್ವೇಷವನ್ನು ಹುಟ್ಟುಹಾಕುತ್ತದೆ, ಆದರೆ ಈ ವಿಡಿಯೋದಲ್ಲಿ ಏನಾಯಿತು ಎಂಬುದು ಕೆಲವರು ನಿರೀಕ್ಷಿಸದ ಮಾನವೀಯತೆಯ ರೂಪವನ್ನು ಬಹಿರಂಗಪಡಿಸುತ್ತದೆ. ಈ ವಿಡಿಯೋವನ್ನು ಪೋಸ್ಟ್​ ಮಾಡಿದ ಕೆಲ ಗಂಟೆಗಳಲ್ಲೇ ಲಕ್ಷಾಂತರ ಜನರು ವಿಕ್ಷೀಸಿದ್ದಾರೆ. ಅಲ್ಲದೆ, ವಿಡಿಯೋ ನೋಡಿದ ಪ್ರತಿಯೊಬ್ಬರು ಹುಡುಗಿನ ಮುಗ್ಧತೆಯನ್ನು ಹೊಗಳಿದ್ದಾರೆ.

ವಿಡಿಯೋದಲ್ಲೇನಿದೆ..?

ಈ ಘಟನೆ ಒಂದು ಅಂಗಡಿಯಲ್ಲಿ ನಡೆದಿದೆ. ಒಂದು ಪುಟ್ಟ ಮಗು ಅವರ ತಂದೆ ಜೊತೆ ಅಂಗಡಿಯಲ್ಲಿ ಕೂತಿದೆ. ಏಕಾಏಕಿ ಬಂದ ಕಳ್ಳ ಅಂಗಡಿ ಮಾಲೀಕನನ್ನು ಹೊಡೆಬಡೆ ಮಾಡಿ ಕೌಂಟರ್​ನಲ್ಲಿದ್ದ ದುಡ್ಡಿಗೆ ಕೈ ಹಾಕಿದ್ದಾನೆ. ಭಯಭೀತಿಯಲ್ಲಿ ಮಗುವಿನ ತಂದೆ ಕಳ್ಳನಿಗೆ ದುಡ್ಡು ಕೊಟ್ಟಿದ್ದಾನೆ. ಇದನ್ನು ಮಗು ಗಮನಿಸಿದೆ. ಭಯದಲ್ಲಿದ್ದ ಮಗು ಏನು ಮಾಡಲು ತೋಚದೆ ತನ್ನ ಕೈಯಲ್ಲಿ ಲಾಲಿಪಾಪ್​ ಕಳ್ಳನಿಗೆ ನೀಡಲು ಮುಂದಾಗಿದೆ. ಇದನ್ನು ಗಮನಿಸಿದ ಕಳ್ಳನ ಮನಸ್ಸು ಕರಗಿದೆ. ಕೌಂಟರ್​ನಿಂದ ತಗೆದಿದ್ದ ಎಲ್ಲಾ ಹಣವನ್ನು ಹಿಂತಿರುಗಿಸಿ, ಅವಳನ್ನು ನೋಡುತ್ತಾನೆ ಮತ್ತು ಏನನ್ನೂ ತೆಗೆದುಕೊಳ್ಳದೆ ಸದ್ದಿಲ್ಲದೆ ಅಂಗಡಿಯಿಂದ ಹೊರಡುತ್ತಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹುಗುಗಿಯ ಮುಗ್ಧತೆಗೆ ನೆಟ್ಟಿಗರು ಫಿದಾ!

ವಿಡಿಯೋ ವೈರಲ್​ ಆದ ತಕ್ಷಣ ನೋಡುಗರ ಮನ ಕಲುಕಿದೆ. ಅಲ್ಲದೆ, ನೂರಾರು ಪ್ರತಿಕ್ರಿಯೆಗಳು ಬಂದಿದೆ. ಈ ಮುಗ್ಧತೆ ಮತ್ತು ಕಳ್ಳತನ ನೋಡಿ ಕಣ್ಣಿನಲ್ಲಿ ನೀರು ಬಂದು ಎಂದಿದ್ದಾರೆ. ಇನ್ನು ಕೆಲವರು ಕಳ್ಳನಿಗೂ ಹೃದಯವಿದೆ ಎಂದಿದ್ದಾರೆ(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net