ಅಂದಹಾಗೆ, 36 ವರ್ಷದ ಶರಣ್ಯ ಓರ್ವ ಐಟಿ ಉದ್ಯೋಗಿ. ಈಕೆ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನಾಡಪುರಂ ನಿವಾಸಿ. ಕೊಡಗಿನಲ್ಲಿರುವ ಅತಿ ಎತ್ತರದ ತಡಿಯಾಂಡಮೋಲ್ ಶಿಖರಕ್ಕೆ ಚಾರಣಕ್ಕೆಂದು ಏಪ್ರಿಲ್ 2ರಂದು ತೆರಳಿದ್ದಳು. ಶಿಖರದ ತುತ್ತ ತುದಿಯನ್ನು ಏರಿ, ವಾಪಸ್ ಕೆಳಗೆ ಇಳಿಯುವಾಗ ಚಾರಣಕ್ಕೆ ಬಂದಿದ್ದ ಗುಂಪಿನಿಂದ ಬೇರ್ಪಟ್ಟು, ದಾರಿತಪ್ಪಿದ್ದಳು. ಮರಳಿ ತನ್ನ ದಾರಿಯನ್ನು ಕಂಡುಕೊಂಡು ತನ್ನ ಚಾರಣ ಗುಂಪನ್ನು ಸೇರಲು ಸಾಕಷ್ಟು ಪ್ರಯತ್ನ ಮಾಡಿದಳು. ಆದರೆ, ಆ ಪ್ರಯತ್ನ ವಿಫಲವಾಯಿತು. ಅಂತಿಮವಾಗಿ ಕಾಡಿನಲ್ಲಿ ದಾರಿತಪ್ಪಿದ ಶರಣ್ಯ ಸುಮಾರು ನಾಲ್ಕು ದಿನಗಳ ಕಾಲ ಕಾಡಿನಲ್ಲಿ ಸಿಲುಕಿದಳು. ಆ ನಾಲ್ಕು ದಿನ ಕೇವಲ ಒಂದು ನೀರಿನ ಬಾಟಲಿನ ಸಹಾಯದಿಂದ ಬದುಕುಳಿದಳು. ಸಹಾಯಕ್ಕಾಗಿ ಸಂಪರ್ಕಿಸೋಣ ಅಂದರೆ ಮೊಬೈಲ್ ಬ್ಯಾಟರಿ ಕೂಡ ಡೆಡ್ ಆಗಿತ್ತು. ವಿಧಿ ಇಲ್ಲದೇ ರಕ್ಷಣೆ ಮಾಡುತ್ತಾರೆ ಅನ್ನೋ ಭರವಸೆಯಲ್ಲೇ ಆಕೆ ಕಾಡಿನಲ್ಲೇ ಕಾಲ ಕಳೆದಳು. ಸುಮಾರು ನಾಲ್ಕು ದಿನಗಳ ಬಳಿಕ ಆಕೆ ಪತ್ತೆಯಾದಳು. ಇದೀಗ ಕೇರಳ ಮೂಲದ ಮತ್ತೊಬ್ಬ ಹುಡುಗಿ ಕಾಣೆಯಾಗಿದ್ದಾಳೆ.