ಅಹಮದಾಬಾದ್‌ನಲ್ಲಿ ಗಿಲ್ ಅಬ್ಬರ; ಕೆಕೆಆರ್​ ವಿರುದ್ಧ ಗುಜರಾತ್ ಟೈಟನ್ಸ್‌ಗೆ 5 ವಿಕೆಟ್‌ಗಳ ಭರ್ಜರಿ ಜಯ! | KKRVsGT

KKRVsGT | ಶುಭಮನ್ ಗಿಲ್
KKRVsGT | ಶುಭಮನ್ ಗಿಲ್
Published on
KKRVsGT: ಇಂದು ( ಶುಕ್ರವಾರ ಏ.17) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಜಿಟಿ ತಂಡ 5 ವಿಕೆಟ್​ಗಳ ಜಯ ಸಾಧಿಸಿದೆ.
ಟಾಸ್ ಗೆದ್ದ ಕೆಕೆಆರ್​ ಮೊದಲು ಬ್ಯಾಟಿಂಗ್​ ಮಾಡಲು ನಿರ್ಧರಿಸಿತು, ಅದರಂತೆ ನಿಗದಿತ 20 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡ​ 180 ರನ್​ ಗಳಿಸಿತು. ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಗುಜರಾತ್​ ತಂಡಕ್ಕೆ ನಾಯಕ ಶುಭಮನ್ ಗಿಲ್ ಭರ್ಜರಿ ಆರಂಭ ಒದಗಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಗಿಲ್, ಕೇವಲ 50 ಎಸೆತಗಳಲ್ಲಿ 86 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳೊಂದಿಗೆ ಇನ್ನಿಂಗ್ಸ್ ಕಟ್ಟಿದ ಗಿಲ್​, ತಂಡವನ್ನು ಜಯದತ್ತ ಕೊಂಡೊಯ್ದರು. ಕೆಕೆಆರ್ ಪರ ವರುಣ್​ ಚಕ್ರವರ್ತಿ 2 ವಿಕೆಟ್​ ಪಡೆದು ಮಿಂಚಿದರು.

ಕೆಕೆಆರ್​​ ಪರ ಗ್ರೀನ್​ ಧಮಾಕಾ

ನರೇಂದ್ರ ಮೋದಿ ಕ್ರೀಡಾಂಗಣ ಬ್ಯಾಟಿಂಗ್‌ಗೆ ಪೂರಕವಾಗಿರಲಿದೆ ಎಂಬ ಕೆಕೆಆರ್​ ನಾಯಕನ ಲೆಕ್ಕಾಚಾರ ಆರಂಭದಲ್ಲಿ ತಲೆಕೆಳಗಾದಂತೆ ಕಂಡಿತು. ತಂಡದ ಮೊತ್ತ ಕೇವಲ 32 ರನ್ ಆಗುವಷ್ಟರಲ್ಲಿ ಕೆಕೆಆರ್ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಸಂಕಷ್ಟದ ಸಮಯದಲ್ಲಿ ಕ್ರೀಸ್‌ಗೆ ಬಂದ ಕ್ಯಾಮರೂನ್ ಗ್ರೀನ್, ಹರಾಜಿನಲ್ಲಿ ತಮಗೆ ನೀಡಿದ ದುಬಾರಿ ಬೆಲೆಗೆ ತಕ್ಕಂತೆ ಆಟವಾಡಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಎದೆಗುಂದದ ಇನ್ನಿಂಗ್ಸ್ ಕಟ್ಟಿದ ಗ್ರೀನ್, ಗುಜರಾತ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ವಿಶೇಷವಾಗಿ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಗ್ರೀನ್, ಕೇವಲ 55 ಎಸೆತಗಳಲ್ಲಿ 79 ರನ್ ಸಿಡಿಸಿದರು ಅಂತಿಮ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು(ಏಜೆನ್ಸೀಸ್​).
ಸಂಕ್ಷಿಪ್ತ ಸ್ಕೋರ್:
ಕೋಲ್ಕತ್ತಾ ನೈಟ್ ರೈಡರ್ಸ್: 180/10 (20 ಓವರ್) - ಕ್ಯಾಮರೂನ್ ಗ್ರೀನ್ 79 (55), ರೋವ್ಮನ್ ಪೊವೆಲ್ 27. ಬೌಲಿಂಗ್: ಕಗಿಸೊ ರಬಾಡ 3/29, ಮೊಹಮ್ಮದ್ ಸಿರಾಜ್ 2/23.
ಗುಜರಾತ್ ಟೈಟಾನ್ಸ್: 181/5 (19.4) - ಶುಭಮನ್ ಗಿಲ್ 86 (50).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net