ಇದಲ್ಲದೆ, ಪರಿಷ್ಕೃತ ವಿತರಣಾ ದರಗಳು ಮತ್ತು ಇಂಧನ ಪರಿಹಾರವನ್ನು ಒತ್ತಾಯಿಸಿ ಸರ್ಕಾರ ಮತ್ತು ಪ್ರಮುಖ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಜ್ಞಾಪಕ ಪತ್ರಗಳನ್ನು ಸಲ್ಲಿಸಲಾಗಿದೆ. ಆದಾಗ್ಯೂ, ಸಾರ್ವಜನಿಕರಿಗೆ ಅನಾನುಕೂಲ ಮಾಡುವುದು ತಮ್ಮ ಉದ್ದೇಶವಲ್ಲ, ಬದಲಿಗೆ ದೇಶಾದ್ಯಂತ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರು ದಿನನಿತ್ಯ ಎದುರಿಸುತ್ತಿರುವ ತೀವ್ರತರವಾದ 'ಜೀವನೋಪಾಯದ ಬಿಕ್ಕಟ್ಟಿನತ್ತ' ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯುವುದು ಈ ಬಂದ್‌ನ ಮುಖ್ಯ ಗುರಿಯಾಗಿದೆ ಎಂದು ಸಂಘಟನೆ ಸ್ಪಷ್ಟಪಡಿಸಿದೆ (ಏಜೆನ್ಸೀಸ್).