ಅದರ ಬದಲು ಸಾಯೋದೇ ಮೇಲೂ... ಗಾಜಿಯಬಾದ್ ಸಹೋದರಿಯರ ಸಾವಿನ ರಹಸ್ಯ ಡೈರಿಯಲ್ಲಿ ಪತ್ತೆ! | Ghaziabad Sisters

ಗಾಜಿಯಾಬಾದ್​ನ ಮೂವರು​ ಸಹೋದರಿಯರ ದುರಂತ ಅಂತ್ಯ
ಗಾಜಿಯಾಬಾದ್​ನ ಮೂವರು​ ಸಹೋದರಿಯರ ದುರಂತ ಅಂತ್ಯ
Published on

ಪ್ರಮುಖ ಮುಖ್ಯಾಂಶಗಳು

  • ಆನ್​​ಲೈನ್​ ಗೇಮ್​ ಚಟಕ್ಕೆ ಸಿಲುಕಿ ಉತ್ತರ ಪ್ರದೇಶದ ಗಾಜಿಯಬಾದ್​ ಮೂಲದ ಮೂವರು ಸಹೋದರಿಯರು ಸಾವು
  • ವಾಸವಿದ್ದ ಅಪಾರ್ಟ್​ಮೆಂಟ್​ನ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣು
  • ಸಹೋದರಿಯರು ಬರೆದಿಟ್ಟ ಡೈರಿಯಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ
ಲಖನೌ: ಆನ್​​ಲೈನ್​ ಗೇಮ್​ಗೆ ವಿಪರೀತ ಅಡಿಕ್ಟ್​ ಆಗಿದ್ದ ಉತ್ತರ ಪ್ರದೇಶದ ಗಾಜಿಯಬಾದ್​ ಮೂಲದ ಮೂವರು ಸಹೋದರಿಯರು (Ghaziabad Sisters ) ತೀರ ಮನನೊಂದು ತಾವು ವಾಸವಿದ್ದ ಅಪಾರ್ಟ್​ಮೆಂಟ್​ನ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಸದ್ಯ ಇಡೀ ದೇಶವನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ.

ಶಾಕಿಂಗ್​ ಸಂಗತಿಗಳು ಬಯಲು

11, 14 ಮತ್ತು 16 ವರ್ಷ ಬಾಲಕೀಯರ ಸಾವಿನ ಪ್ರಕರಣ ಇದೀಗ ದೇಶದಲ್ಲಿ ಭಾರೀ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ತಂದೆಯಿಂದ ವಶಕ್ಕೆ ಪಡೆದ ಮೃತ ಸಹೋದರಿಯರ ಮೊಬೈಲ್​ನಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದು, ಮೂವರು ಸಹೋದರಿಯವರು ಸಂಪೂರ್ಣವಾಗಿ ಕೊರಿಯನ್​ ಸಂಸ್ಕೃತಿಗೆ ಮಾರು ಹೋಗಿದ್ದರು ಎಂಬ ಸ್ಫೋಟಕ ವಿಚಾರ ಬಯಲಾಗಿದೆ. ನಾವು ಭಾರತೀಯರಲ್ಲ, ಕೊರಿಯನ್ನರು ಎಂದಿರುವ ಬಾಲಕಿಯರು, ಸಾಯುವ ಮುನ್ನ ಡೈರಿಯಲ್ಲಿ ಹಲವು ಶಾಕಿಂಗ್​ ವಿಚಾರಗಳನ್ನು ಬರೆದಿಟ್ಟಿರುವುದು ಸದ್ಯ ಪೊಲೀಸರನ್ನೇ ಚಿಂತಿಸುವಂತೆ ಮಾಡಿದೆ.
ಮೂಲಗಳ ಪ್ರಕಾರ, ಮೃತಪಟ್ಟ ಸಹೋದರಿಯರನ್ನು ನಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಎಂದು ಗುರುತಿಸಲಾಗಿದೆ. ಈ ಮೂವರು, ಕೊರಿಯನ್​ ಹೆಸರಿನಲ್ಲಿ ಸೋಶಿಯಲ್​ ಮೀಡಿಯಾ ಅಕೌಂಟ್​ಗಳನ್ನು ಸಹ ಹೊಂದಿದ್ದರು. ಆ ಅಕೌಂಟ್​ಗಳಲ್ಲಿ ಭಾರಿ ಸಂಖ್ಯೆಯಲ್ಲಿ ಫಾಲೋವರ್ಸ್​ ಕೂಡ ಇದ್ದರು. ಕೊರಿಯನ್​ ಹೆಸರಿನಲ್ಲಿ ತಮ್ಮನ್ನು ತಾವು ಮರಿಯಾ, ಅಲಿಝಾ ಮತ್ತು ಸಿಂಡಿ ಎಂದು ಪರಿಚಯಿಸಿಕೊಂಡಿದ್ದು ದುರಂತ.
ಸುಮಾರು 10 ದಿನಗಳ ಹಿಂದೆ ಸಹೋದರಿಯರ ತಂದೆಗೆ ಈ ಸೋಶಿಯಲ್​ ಮೀಡಿಯಾ ಖಾತೆಗಳ ಬಗ್ಗೆ ಗೊತ್ತಾಯಿತು. ತಕ್ಷಣವೇ ಅವುಗಳನ್ನು ಡಿಲೀಟ್​ ಮಾಡಿ, ತಮ್ಮ ಮಕ್ಕಳಿಂದ ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಸುಮಾರು 2 ಕೋಟಿ ರೂ.ವರೆಗೂ ಸಾಲವನ್ನು ಹೊಂದಿದ್ದ ತಂದೆ ಚೇತನ್​​ ಕುಮಾರ್​, ವಿದ್ಯುತ್​ ಬಿಲ್​ ಕಟ್ಟಲು ಫೋನ್​ಗಳನ್ನು ಮಾರಾಟ ಮಾಡಿದ್ದಲ್ಲದೆ, ತನ್ನ ಮಕ್ಕಳಿಗೆ ಮದುವೆ ಮಾಡಿಬಿಡುವುದಾಗಿಯೂ ಬೆದರಿಕೆ ಹಾಕಿದ್ದ. ಇದೆಲ್ಲವೂ, ಆ ಹೆಣ್ಣು ಮಕ್ಕಳ ಸಾವಿಗೆ ಬಹುಮುಖ್ಯ ಕಾರಣವಾಯಿತು ಎಂಬುದು ಬರೆದಿಟ್ಟ ಡೈರಿಯಿಂದ ಸ್ಪಷ್ಟವಾಗಿದೆ.

ಡೈರಿಯಲ್ಲಿ ಬರೆದಿದ್ದೇನು?

ತಮ್ಮ ಡೈರಿಯಲ್ಲಿ ತಂದೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಸಹೋದರಿಯರು, ನಮ್ಮ ಅಪ್ಪ ಫೋನ್​ ಕಸಿದುಕೊಂಡಿರುವುದು ನಮಗೆ ತೀರ ನೋವುಂಟು ಮಾಡಿದೆ. ನಾವು ಭಾರತೀಯರಲ್ಲ, ಕೊರಿಯನ್ನರು. ಮೂವರಿಗೂ ಕೊರಿಯನ್​ ಎಂದರೆ ಅತೀವ ಪ್ರೀತಿ. ಕೊರಿಯನ್​ ಮತ್ತು ಕೆ-ಪಾಪ್​ ನಮ್ಮ ಬದುಕು. ನಾವು ನಮ್ಮ ಸಹೋದರನಿಗೂ ಕೊರಿಯನ್​ ಸಂಸ್ಕೃತಿ ಬಗ್ಗೆ ಹೇಳಿಕೊಡುತ್ತಿದ್ದೆವು. ಆದರೆ, ಅಮ್ಮ ಬಂದು ಅವನಿಗೆ ಏನೂ ಹೇಳಿಕೊಡಬಾರದು ಎನ್ನುತ್ತಿದ್ದರು. ಇದು ತುಂಬ ಬೇಸರ ತಂದಿತು. ಇದೇ ಕಾರಣಕ್ಕೆ ನಾವು ಅವನನ್ನು ವೈರಿಯಾಗಿ ಕಾಣಲು ಪ್ರಾರಂಭಿಸಿದೆವು ಎಂದಿದ್ದಾರೆ.

ಮದುವೆ ಆಗುವ ಬದಲು ಸಾಯುವುದೇ ಮೇಲೂ

ಕೊರಿಯನ್ ಭಾಷೆ ನಮ್ಮ ಜೀವನವಾಗಿತ್ತು. ಹೀಗಿರುವಾಗ ನೀವು ನಮ್ಮ ಜೀವನವನ್ನು ಕಸಿದುಕೊಳ್ಳಲು ಎಷ್ಟು ಧೈರ್ಯ ಮಾಡುತ್ತೀರಿ? ಈ ಡೈರಿ ಓದಿದ ಮೇಲೆ ನಿಮಗೆ ಗೊತ್ತಾಗುತ್ತದೆ. ನಾವು ಕೊರಿಯನ್ ನಟ, ಕಲಾವಿದರು ಮತ್ತು ಕೆ-ಪಾಪ್ ಗ್ರೂಪ್​ ಅನ್ನು ಪ್ರೀತಿಸಿದಷ್ಟು ನಿಮ್ಮನ್ನು ಮತ್ತು ಕುಟುಂಬವನ್ನು ಪ್ರೀತಿಸಲಿಲ್ಲ. ಕೊರಿಯನ್ ಭಾಷೆಯೇ ನಮ್ಮ ಜೀವನವಾಗಿತ್ತು. ನಿಮ್ಮ ಬೈಗುಳದಿಂದ ನಮಗೆ ಸಾಕಾಗಿ ಹೋಗಿತ್ತು. ಮದುವೆ ಅನ್ನೋ ವಿಷಯಂತು ತುಂಬ ಭಯಪಡಿಸಿತು. ಅದರಲ್ಲೂ, ಒಬ್ಬ ಭಾರತೀಯ ವ್ಯಕ್ತಿಯನ್ನು ಮದುವೆ ಆಗುವ ಬದಲು ಸಾಯುವುದೇ ಮೇಲೂ ಅನಿಸಿತು ಎಂದು ಬರೆದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net