ನಾವು ಭಾರತೀಯರಲ್ಲ ಕೊರಿಯನ್ನರು... ಗಾಜಿಯಬಾದ್ ಸಹೋದರಿಯರ ಸಾವಿನ ರಹಸ್ಯ ಮೊಬೈಲ್​ನಿಂದ ಬಯಲು! Ghaziabad Sisters

ಉತ್ತರ ಪ್ರದೇಶದ ಗಾಜಿಯಬಾದ್ ಸಹೋದರಿಯರು ( Ghaziabad Sisters )
ಉತ್ತರ ಪ್ರದೇಶದ ಗಾಜಿಯಬಾದ್ ಸಹೋದರಿಯರು ( Ghaziabad Sisters )
Published on

ಪ್ರಮುಖ ಮುಖ್ಯಾಂಶಗಳು

  • ಆನ್​​ಲೈನ್​ ಗೇಮ್​ ಚಟಕ್ಕೆ ಸಿಲುಕಿ ಉತ್ತರ ಪ್ರದೇಶದ ಗಾಜಿಯಬಾದ್​ ಮೂಲದ ಮೂವರು ಸಹೋದರಿಯರು ಸಾವು
  • ತಂದೆಯಿಂದ ವಶಕ್ಕೆ ಪಡೆದ ಮೃತ ಸಹೋದರಿಯರ ಮೊಬೈಲ್​ನಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ
  • ಮೂವರು ಸಹೋದರಿಯವರು ಸಂಪೂರ್ಣವಾಗಿ ಕೊರಿಯನ್​ ಸಂಸ್ಕೃತಿಗೆ ಮಾರು ಹೋಗಿದ್ದರು
ಲಖನೌ: ಆನ್​​ಲೈನ್​ ಗೇಮ್​ ಚಟಕ್ಕೆ ಸಿಲುಕಿ ಉತ್ತರ ಪ್ರದೇಶದ ಗಾಜಿಯಬಾದ್​ ಮೂಲದ 12, 14 ಮತ್ತು 16 ವರ್ಷದ ಮೂವರು ಸಹೋದರಿಯರು ( Ghaziabad Sisters ) ತಾವು ವಾಸವಿದ್ದ ಅಪಾರ್ಟ್​ಮೆಂಟ್​ನ 9ನೇ ಮಹಡಿಯಿಂದ ಜಿಗಿದು ಸಾವಿಗೆ ( Ghaziabad Sisters Death Case ) ಶರಣಾದ ಪ್ರಕರಣ ಇದೀಗ ದೇಶದಲ್ಲಿ ಚರ್ಚೆಯ ಬಿರುಗಾಳಿ ಎಬ್ಬಿಸಿದೆ. ತಂದೆಯಿಂದ ವಶಕ್ಕೆ ಪಡೆದ ಮೃತ ಸಹೋದರಿಯರ ಮೊಬೈಲ್​ನಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಮೂವರು ಸಹೋದರಿಯವರು ಸಂಪೂರ್ಣವಾಗಿ ಕೊರಿಯನ್​ ಸಂಸ್ಕೃತಿಗೆ ಮಾರು ಹೋಗಿದ್ದರು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ಮೃತಪಟ್ಟ ಸಹೋದರಿಯನ್ನು ನಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಎಂದು ಗುರುತಿಸಲಾಗಿದೆ. ಈ ಮೂವರು, ಕೊರಿಯನ್​ ಹೆಸರಿನಲ್ಲಿ ಸೋಶಿಯಲ್​ ಮೀಡಿಯಾ ಅಕೌಂಟ್​ಗಳನ್ನು ಸಹ ಹೊಂದಿದ್ದರು. ಆ ಅಕೌಂಟ್​ಗಳಲ್ಲಿ ಭಾರಿ ಸಂಖ್ಯೆಯಲ್ಲಿ ಫಾಲೋವರ್ಸ್​ ಕೂಡ ಇದ್ದರು. ಕೊರಿಯನ್​ ಹೆಸರಿನಲ್ಲಿ ತಮ್ಮನ್ನು ತಾವು ಮರಿಯಾ, ಅಲಿಝಾ ಮತ್ತು ಸಿಂಡಿ ಎಂದು ಪರಿಚಯಿಸಿಕೊಂಡಿದ್ದರು.
ಸುಮಾರು 10 ದಿನಗಳ ಹಿಂದೆ ಸಹೋದರಿಯರ ತಂದೆಗೆ ಈ ಸೋಶಿಯಲ್​ ಮೀಡಿಯಾ ಅಕೌಂಟ್​ಗಳ ಬಗ್ಗೆ ಗೊತ್ತಾಗಿತ್ತು. ಕೂಡಲೇ ಅವುಗಳನ್ನು ಡಿಲೀಟ್​ ಮಾಡಿ, ತಮ್ಮ ಮಕ್ಕಳಿಂದ ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಸುಮಾರು 2 ಕೋಟಿ ರೂ.ವರೆಗೂ ಸಾಲವನ್ನು ಹೊಂದಿದ್ದ ತಂದೆ ಚೇತನ್​​ ಕುಮಾರ್​, ವಿದ್ಯುತ್​ ಬಿಲ್​ ಕಟ್ಟಲು ಫೋನ್​ಗಳನ್ನು ಮಾರಾಟ ಮಾಡಿದ್ದ. ಅಲ್ಲದೆ, ತನ್ನ ಮಕ್ಕಳಿಗೆ ಮದುವೆ ಮಾಡಿಬಿಡುವುದಾಗಿ ಬೆದರಿಕೆ ಹಾಕಿದ್ದ. ಆದರೆ, ತಂದೆಯ ಬೆದರಿಕೆಗೆ ಪ್ರತಿಕ್ರಿಯಿಸಿದ್ದ ಮಕ್ಕಳು, ನಾವು ಮದುವೆ ಆಗಲು ಸಾಧ್ಯವಿಲ್ಲ ಏಕೆಂದರೆ, ನಾವು ಭಾರತೀಯರಲ್ಲ, ಕೊರಿಯನ್ನರು ಎಂದು ಹೇಳಿದ್ದರು ಅಂತಾ ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು?

ಮೂವರು ಸಹೋದರಿಯರು ಕೊರಿಯನ್​ ಲವ್​ ಗೇಮ್​ ಎಂಬ ಆನ್​ಲೈನ್​ ಗೇಮ್ ಗೀಳನ್ನು ಹೊಂದಿದ್ದರು. ಆರಂಭದಲ್ಲಿ​ ಟಾಸ್ಕ್ ಆಧಾರಿತ ಕೊರಿಯನ್ ಆಟವನ್ನು ಆಡುತ್ತಿದ್ದರು ಮತ್ತು ಕೊನೆಯ ಟಾಸ್ಕ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿತ್ತು. ಮಂಗಳವಾರ ಸಂಜೆಯ ಹೊತ್ತಿಗೆ ಮೂವರು ಹುಡುಗಿಯರು ಸಂಪೂರ್ಣ ಕೊರಿಯನ್ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿದ್ದರು. ಆದರೆ, ಆ ಗೇಮ್​ ಒಂದೇ ಅವರನ್ನು ಸಾವಿಗೆ ದೂಡುವ ಏಕೈಕ ಪ್ರಚೋದನೆಯಾಗಿರಲಿಲ್ಲ ಎಂಬುದು ಪೊಲೀಸರ ಹೇಳಿಕೆ.
ಸಹೋದರಿಯರ ಕುಟುಂಬ ಭಾರಿ ಆರ್ಥಿಕ ತೊಂದರೆಯನ್ನು ಎದುರಿಸುತ್ತಿತ್ತು. ಕಳೆದ ಎರಡು ವರ್ಷಗಳಿಂದ ಸಹೋದರಿಯರು ಶಾಲೆಗೂ ಹೋಗಿರಲಿಲ್ಲ. ತಂದೆಯ ಭಾರಿ ಸಾಲದ ಹೊರೆಯಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಲು ಆಗುತ್ತಿಲ್ಲವಲ್ಲ ಅನ್ನೋ ನೋವು ಕೂಡ ತಂದೆಗೆ ಇರಲಿಲ್ಲ. ತಮ್ಮ ಮಕ್ಕಳನ್ನು ತಂದೆ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದ.

ಡೈರಿಯಲ್ಲೂ ಕೊರಿಯನ್​ ಗೀಳು ಬಯಲು

ಹುಡುಗಿಯರು ಡೆತ್​ನೋಟ್​ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಡೆತ್​ನೋಟ್​ನಲ್ಲಿ ಈ ಡೈರಿಯಲ್ಲಿ ಬರೆದಿರುವ ಎಲ್ಲವನ್ನೂ ಓದಿ ಏಕೆಂದರೆ ಇದೆಲ್ಲವೂ ನಿಜ. ಈಗ ಓದಿ. ನಮ್ಮನ್ನು ನಿಜವಾಗಿಯೂ ಕ್ಷಮಿಸಿ. ಕ್ಷಮಿಸಿ, ಅಪ್ಪಾ ಎಂದು ಬರೆದಿದ್ದಾರೆ. ಕೈಯಿಂದ ಬಿಡಿಸಿದ ಅಳುವ ಎಮೋಜಿಯೊಂದಿಗೆ ಡೆತ್​ನೋಟ್​ ಕೊನೆಗೊಂಡಿದೆ. ಎಂಟು ಪುಟಗಳ ಪಾಕೆಟ್ ಡೈರಿಯಲ್ಲಿ ತಮ್ಮ ಗೇಮಿಂಗ್ ಮತ್ತು ಮೊಬೈಲ್ ಚಟುವಟಿಕೆಗಳನ್ನು ಸಹೋದರಿಯರು ವಿವರಿಸಿದ್ದಾರೆ. ತಮ್ಮ ತಂದೆ ಫೋನ್ ಕಸಿದುಕೊಂಡಿದ್ದರಿಂದ ಕೊರಿಯನ್ ಕಾರ್ಯಕ್ರಮಗಳನ್ನು ನೋಡಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ಮನನೊಂದಿರಬಹುದೆಂದು ತಿಳಿದುಬಂದಿದೆ.

ಕೊರಿಯನ್ ಭಾಷೆಯೇ ನಮ್ಮ ಜೀವನ

ಕೊರಿಯನ್ ಭಾಷೆ ನಮ್ಮ ಜೀವನವಾಗಿತ್ತು. ಹೀಗಿರುವಾಗ ನೀವು ನಮ್ಮ ಜೀವನವನ್ನು ಕಸಿದುಕೊಳ್ಳಲು ಎಷ್ಟು ಧೈರ್ಯ ಮಾಡುತ್ತೀರಿ? ಎಂದು ಹುಡುಗಿಯರು ತಮ್ಮ ತಂದೆಯನ್ನು ಪ್ರಶ್ನೆ ಮಾಡಿದ್ದಾರೆ. ನಾವು ಕೊರಿಯನ್ನರನ್ನು ಎಷ್ಟು ಪ್ರೀತಿಸುತ್ತಿದ್ದೆವು ಎಂಬುದು ನಿಮಗೆ ತಿಳಿದಿರಲಿಲ್ಲ. ಈ ಡೈರಿ ಓದಿದ ಮೇಲೆ ನಿಮಗೆ ಗೊತ್ತಾಗುತ್ತದೆ. ಕೊರಿಯನ್ ಮತ್ತು ಕೆ-ಪಾಪ್ ನಮ್ಮ ಜೀವನ ಎಂಬುದನ್ನು ನಮಗೆ ಮನವರಿಕೆಯಾಗಿದೆ. ನಾವು ಕೊರಿಯನ್ ನಟ ಮತ್ತು ಕೆ-ಪಾಪ್ ಗ್ರೂಪ್​ ಅನ್ನು ಪ್ರೀತಿಸಿದಷ್ಟು ನಿಮ್ಮನ್ನು ಮತ್ತು ಕುಟುಂಬವನ್ನು ಪ್ರೀತಿಸಲಿಲ್ಲ. ಕೊರಿಯನ್ ಭಾಷೆಯೇ ನಮ್ಮ ಜೀವನವಾಗಿತ್ತು ಎಂದು ಮೂವರು ಸಹೋದರಿಯರು ಡೈರಿಯಲ್ಲಿ ಬರೆದಿದ್ದಾರೆ.
ಸುಮಾರು ಎಂಟು ಪುಟಗಳ ಸೂಸೈಡ್ ನೋಟ್‌ನಲ್ಲಿ, ನಾವು ಕೊರಿಯನ್ನರನ್ನು ಪ್ರೀತಿಸುತ್ತಿದ್ದರೂ, ಭಾರತೀಯನೊಂದಿಗೆ ಮದುವೆ ಮಾಡುವುದಾಗಿ ನಮ್ಮ ತಂದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾವು ಹೀಗೆಲ್ಲಾ ನಿರೀಕ್ಷೆ ಮಾಡಿರಲಿಲ್ಲ. ಅದಕ್ಕಾಗಿಯೇ ನಾವು ಸಾವಿಗೆ ಶರಣಾಗುತ್ತಿದ್ದೇವೆ. ಕ್ಷಮಿಸಿ ಅಪ್ಪಾ ಎಂದು ಡೆತ್​ನೋಟ್​ನಲ್ಲಿ ಬರೆಯಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net