Shoots partner | ಪ್ರೇಯಸಿಯನ್ನು ಗುಂಡಿಕ್ಕಿ ಕೊಂದ ಪ್ರೇಮಿ; ಕೃತ್ಯಕ್ಕೆ ಇದೇ ಕಾರಣ..!

Crime
Crime
Published on
ಗಾಜೀಯಾಬಾದ್: ತಾನು ಪ್ರೀತಿಸಿದ ಹುಡುಗಿ ಬೇರೊಬ್ಬನನ್ನು ಮದುವೆಯಾಗುತ್ತಿದ್ದಾಳೆ ಎಂಬ ಸುದ್ದಿ ತಿಳಿದ ಪ್ರಿಯಕರ, ಆಕೆಯನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದ ಗಾಜೀಯಾಬಾದ ಜಿಲ್ಲೆಯ ನಂಗ್ಲಾಬಾರ್​ನಲ್ಲಿ ನಡೆದಿದೆ.
28 ವರ್ಷದ ಪ್ರದೀಪ್ ಕುಮಾರ ಎಂಬಾತ, 22 ವರ್ಷದ ಯುವತಿಯನ್ನು ಕಳೆದ 5 ವರ್ಷದಿಂದ ಪ್ರೀತಿಸುತ್ತಿದ್ದ, ಆದರೆ ಆಕೆಯ ಮದುವೆ ಬೇರೊಬ್ಬನೊಂದಿಗೆ ನಿಶ್ಚಯವಾಗಿದೆ ಎಂದು ತಿಳಿದ ಪ್ರೇಮಿ ಪ್ರದೀಪ್,​ ಅವಳ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ದಾಳಿಗೊಳಗಾದ ಯುವತಿ ಕುಸಿದು ಬಿದ್ದಿದ್ದಾಳೆ, ಅವಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೀರತ್​​ಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಯುವತಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.
ಆಕೆಯ ಪ್ರಿಯಕರ ಹಾರಿಸಿದ ಗುಂಡು ನೇರವಾಗಿ ಯುವತಿಯ ತಲೆಗೆ ತಗುಲಿದ್ದರಿಂದ ಮರಣ ಹೊಂದಿದ್ದಾಳೆ ಎಂದು ವೈಧ್ಯಕೀಯ ಮೂಲಗಳು ತಳಿಸಿದ್ದು, ಯುವತಿಯು ಎಂಎಸ್​ಸಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದು ಮದುವೆ ನಿಶ್ಚಯವಾದ ದಿನದಿಂದ ಪ್ರದೀಪ್​ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದಳು ಎಂದು ತಿಳಿದುಬಂದಿದೆ.

ಪೊಲೀಸರು ಹೇಳಿದ್ದೇನು..?

ಪ್ರಿಯಕರ ಪ್ರದೀಪ್​ ಆಕೆಯ ಮೇಲೆ ತುಂಬಾ ಹಣ ಖರ್ಚು ಮಾಡಿದ್ದು, ಅವಳ ಮನೆಗೆ ಎಸಿ ಸಹ ಕೊಡಿಸಿದ್ದಾನೆ. ಈಗ ಇದ್ದಕ್ಕಿದ್ದ ಹಾಗೇ ತನ್ನ ಪ್ರೇಯಸಿಯ ಮದುವೆ ಬೇರೆಯವನ ಜೊತೆ ನಿಗದಿ ಆಗಿದೆ ಎಂದು ಸ್ನೇಹಿತರು ಚುಚ್ಚು ಮಾತುಗಳನ್ನಾಡಿದ್ದರಿಂದ ತೀವ್ರ ನೊಂದಿದ್ದ ಪ್ರದೀಪ್​ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ ಎಂದು ಪೋಲಿಸ್ ಉಪಆಯುಕ್ತ ಅಮಿತ್ ಸಕ್ಸೆನಾ ತಿಳಿಸಿದ್ದು, ಆರೋಪಿ ಪತ್ತೆ ಮಾಡಲು ಪೋಲಿಸರು ಬಲೆ ಬೀಸಿದ್ದಾರೆ ಎಂದು ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net