ರಾಹುಲ್ ಗಾಂಧಿ ಒಬ್ಬ ಕಪಟಿ: ಆರೆಸ್ಸೆಸ್ ವಿರುದ್ಧದ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಹಾಗೂ ವಿಎಚ್‌ಪಿ ತೀವ್ರ ಆಕ್ರೋಶ! | All-Male Cult Remark

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಮಹಿಳಾ ವಿರೋಧಿ ಮತ್ತು ಸಂವಿಧಾನ ವಿರೋಧಿ ಪಂಥ ಎಂದು ಕರೆದಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ರಾಹುಲ್ ಗಾಂಧಿ ಒಬ್ಬ ಕಪಟಿ: ಬಿಜೆಪಿ
ರಾಹುಲ್ ಗಾಂಧಿ ಒಬ್ಬ ಕಪಟಿ: ಬಿಜೆಪಿ
Published on: 

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಮಹಿಳಾ ವಿರೋಧಿ ಮತ್ತು ಸಂವಿಧಾನ ವಿರೋಧಿ ಪಂಥ ಎಂದು ಕರೆದಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ರಾಹುಲ್ ಗಾಂಧಿ ಅವರದ್ದು ಬೌದ್ಧಿಕ ದಿವಾಳಿತನ ಮತ್ತು ಇಬ್ಬಗೆ ನೀತಿ ಎಂದು ವಾಗ್ದಾಳಿ ನಡೆಸಿರುವ ಬಿಜೆಪಿ ಮತ್ತು ವಿಎಚ್‌ಪಿ ನಾಯಕರು, ಸಂಘ ಪರಿವಾರ ಹಾಗೂ ಮಹಿಳಾ ಹಕ್ಕುಗಳ ಕುರಿತು ಮಾತನಾಡುವ ಮುನ್ನ ನೈಜ ಸತ್ಯಾಂಶಗಳನ್ನು ಅರಿತುಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿಯವರ ನಡವಳಿಕೆಯನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್. ಕೇಶವನ್ ತೀವ್ರವಾಗಿ ಖಂಡಿಸಿದ್ದು, ಅವರೊಬ್ಬ ಕಪಟಿ ಎಂದು ಕಿಡಿಕಾರಿದ್ದಾರೆ. ಇತ್ತೀಚೆಗೆ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಮಹಿಳಾ ಪತ್ರಕರ್ತೆಯರೊಂದಿಗೆ ರಾಹುಲ್ ಗಾಂಧಿ ನಡೆದುಕೊಂಡ ರೀತಿ ಅವರ ಮಾನಸಿಕತೆಯನ್ನು ತೋರಿಸುತ್ತದೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ತಮ್ಮದೇ ಪಕ್ಷದ ಸಂಸದರ ವಿರುದ್ಧ ಕ್ರಮ ಕೈಗೊಳ್ಳದ ಅವರು, ಈಗ ಮಹಿಳಾ ಹಕ್ಕುಗಳ ಬಗ್ಗೆ ಬೋಧನೆ ಮಾಡುತ್ತಿರುವುದು ಅತ್ಯಂತ ಕ್ರೂರ ತಮಾಷೆ ಎಂದು ಟೀಕಿಸಿದರು. 55 ವರ್ಷಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿದರೂ ಕಾಂಗ್ರೆಸ್ ಮಹಿಳಾ ಮೀಸಲಾತಿ ವಿಧೇಯಕವನ್ನು ಅಂಗೀಕರಿಸಲಿಲ್ಲ ಎಂದು ಕೇಶವನ್ ಕುಟುಕಿದ್ದಾರೆ.

ಇದನ್ನೂ ಓದಿ:ಎಲ್ಲರಿಗೂ ಒಂದೇ ನಿಯಮ!...ಮದರಸಾಗಳ ಶುಕ್ರವಾರದ ರಜೆ ರದ್ದುಗೊಳಿಸಿ ಸಿಎಂ ಧಾಮಿ ಐತಿಹಾಸಿಕ ನಿರ್ಧಾರ: ಕಾಂಗ್ರೆಸ್​ ವಿರೋಧ! | Madrasa Friday Holiday

ಮತ್ತೊಂದೆಡೆ, ಬಿಜೆಪಿ ಶಾಸಕ ರಾಮ್ ಕದಮ್ ಮಾತನಾಡಿ, ಕೇವಲ ಮುಖ್ಯಾಂಶಗಳಲ್ಲಿ ಇರಬೇಕೆಂಬ ಕಾರಣಕ್ಕೆ ಅಪೂರ್ಣ ಮಾಹಿತಿಯೊಂದಿಗೆ ಟ್ವೀಟ್ ಮಾಡುವುದು ಹಿರಿಯ ನಾಯಕನಿಗೆ ಶೋಭೆಯಲ್ಲ. ಸಂಘ ಪರಿವಾರದಲ್ಲಿ ಮಹಿಳಾ ವಿಭಾಗವೂ ಇದೆ ಹಾಗೂ ಅವರು ಉನ್ನತ ಸ್ಥಾನಗಳಲ್ಲಿದ್ದಾರೆ ಎಂಬುದನ್ನು ರಾಹುಲ್ ಮೊದಲು ತಿಳಿದುಕೊಳ್ಳಲಿ ಎಂದರು.

ಬೌದ್ಧಿಕ ದಾರಿದ್ರ್ಯ ಎಂದ ವಿಎಚ್‌ಪಿ

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಮಾತನಾಡಿ, ರಾಹುಲ್ ಗಾಂಧಿ ಬೌದ್ಧಿಕವಾಗಿ ದರಿದ್ರರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಪ್ರತಿಯೊಂದು ವಿಷಯದಲ್ಲೂ ರಾಹುಲ್ ವಿರೋಧಿ ಹೇಳಿಕೆ ನೀಡುತ್ತಾರೆ. ರಾಜಕೀಯ ಲಾಭಕ್ಕಾಗಿ ಧರ್ಮ ಮತ್ತು ಶಿವ-ಶಕ್ತಿ ಹೆಸರುಗಳನ್ನು ಬಳಸುವುದು ಅವರ ಇಬ್ಬಗೆ ನೀತಿಯನ್ನು ತೋರಿಸುತ್ತದೆ ಎಂದರು.

ಹಿಂದೂ ಸಂಪ್ರದಾಯಗಳಲ್ಲಿ ಮಹಿಳಾ ಧಾರ್ಮಿಕ ನಾಯಕಿಯರಿಗೆ ಅತ್ಯುನ್ನತ ಗೌರವವಿದೆ ಎಂದು ಸಮರ್ಥಿಸಿಕೊಂಡ ಬನ್ಸಾಲ್, ಹಿಂದೂ ಸಂಸ್ಥೆಗಳ ವಿರುದ್ಧ ಅಪಪ್ರಚಾರ ಮತ್ತು ನಿಂದನೀಯ ಭಾಷೆ ಬಳಸುವುದನ್ನು ರಾಹುಲ್ ಗಾಂಧಿ ತಕ್ಷಣವೇ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.

ರಾಹುಲ್​ ಟ್ವೀಟ್​ ಹೀಗಿತ್ತು!

ಆರೆಸ್ಸೆಸ್‌ನ ಸಂಸ್ಥಾಪನಾ ದಿನದ ಶುಭಸಂದರ್ಭದಲ್ಲೇ ಮಂಗಳವಾರ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ರಾಹುಲ್ ಗಾಂಧಿ, ಶಿವ-ಶಕ್ತಿ ಪರಿಕಲ್ಪನೆಯನ್ನು ಉಲ್ಲೇಖಿಸಿದ್ದರು. ಆರೆಸ್ಸೆಸ್ ಸಂಸ್ಥೆಯು ಮಹಿಳೆಯರನ್ನು ಪುರುಷರ ಆಸ್ತಿ ಎಂದು ಭಾವಿಸುವ, ಕೇವಲ ಪುರುಷರೇ ತುಂಬಿರುವ ಸಂವಿಧಾನ ವಿರೋಧಿ ಪಂಥ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಸಂಘದ ಜೊತೆ ಗುರುತಿಸಿಕೊಂಡಿರುವ ಹಲವು ಮಹಿಳೆಯರು ತಮ್ಮ ರಾಜಕೀಯ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದೂ ಪ್ರತಿಪಾದಿಸಿದ್ದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net