ಒಂದು ಸಾಲಲ್ಲ ಹೆಚ್ಚೆಚ್ಚು ಮಕ್ಕಳನ್ನು ಪಡೆಯಿರಿ: ಹಿಂದೂಗಳಿಗೆ ಕರೆ ಕೊಟ್ಟ ಅಸ್ಸಾಂ ಸಿಎಂ! Himanta Biswa Sarma

Himanta Biswa Sarma
Himanta Biswa Sarma
Published on

ಪ್ರಮುಖ ಮುಖ್ಯಾಂಶಗಳು

  • ಅಲ್ಪಸಂಖ್ಯಾತರ ಪ್ರಾಬಲ್ಯದ ಪ್ರದೇಶಗಳಿಗೆ ಹೋಲಿಸಿದರೆ ಹಿಂದೂಗಳಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿದೆ
  • ಹಿಂದೂಗಳು ಒಂದು ಮಗು ಮಾಡುವುದನ್ನು ನಿಲ್ಲಿಸಿ ಕನಿಷ್ಠ ಎರಡು ಮಕ್ಕಳಿಗೆ ಅಥವಾ ಮೂರು ಮಕ್ಕಳಿಗೆ ಜನ್ಮ ನೀಡಿ
  • ಮುಸ್ಲಿಂಮರು ಏಳರಿಂದ ಎಂಟು ಮಕ್ಕಳಿಗೆ ಜನ್ಮ ನೀಡುವುದನ್ನು ನಿಲ್ಲಿಸಿ
ಅಸ್ಸಾಂ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma), ಧಾರ್ಮಿಕ ಅಲ್ಪಸಂಖ್ಯಾತರ ಪ್ರಾಬಲ್ಯದ ಪ್ರದೇಶಗಳಿಗೆ ಹೋಲಿಸಿದರೆ ಹಿಂದೂಗಳಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿದ್ದು, ರಾಜ್ಯದಲ್ಲಿ ಹಿಂದೂ ದಂಪತಿಗಳು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬೇಕೆಂದು ಒತ್ತಾಯಿಸಿದ್ದಾರೆ.
ಮಂಗಳವಾರ(ಡಿ.30) ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, ಅಲ್ಪಸಂಖ್ಯಾತರ ಪ್ರಾಬಲ್ಯದ ಪ್ರದೇಶಗಳಲ್ಲಿ ಹೆರಿಗೆಯ ಅನುಪಾತ ಹೆಚ್ಚಾಗಿದೆ ಮತ್ತು ಹಿಂದೂಗಳ ಜನನ ಪ್ರಮಾಣ ಕುಸಿಯುತ್ತಿದೆ ಎಂದರು. ಆದ್ದರಿಂದ ನಾವು ಹಿಂದೂ ಜನರನ್ನು ಒಂದು ಮಗು ಮಾಡುವುದನ್ನು ನಿಲ್ಲಿಸಿ ಕನಿಷ್ಠ ಎರಡು ಮಕ್ಕಳಿಗೆ ಅಥವಾ ಮೂರು ಮಕ್ಕಳಿಗೆ ಜನ್ಮ ನೀಡಿ ಎಂದು ಒತ್ತಾಯಿಸುತ್ತಿದ್ದೇವೆ ಎಂದು ಶರ್ಮಾ ಹೇಳಿದರು.
ಹಾಗೆಯೇ ಮುಸ್ಲಿಂ ಜನರು ಏಳರಿಂದ ಎಂಟು ಮಕ್ಕಳಿಗೆ ಜನ್ಮ ನೀಡಬಾರದು ಎಂದು ನಾವು ಕೇಳುತ್ತೇವೆ, ಆದರೆ ಹಿಂದೂಗಳು ಹೆಚ್ಚಿನ ಮಕ್ಕಳನ್ನು ಹೊಂದಬೇಕೆಂದು ನಾವು ಒತ್ತಾಯಿಸುತ್ತೇವೆ. ಇಲ್ಲದಿದ್ದರೆ, ಹಿಂದೂಗಳ ಮನೆಯನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂದು ಹೇಳಿದರು.
ಇದಕ್ಕೂ ಮೊದಲು, ಡಿಸೆಂಬರ್ 27 ರಂದು, ಶರ್ಮಾ ರಾಜ್ಯದ ಜನಸಂಖ್ಯಾ ಪ್ರವೃತ್ತಿಗಳ ಕುರಿತು ಮಾತನಾಡುತ್ತಾ, 2027 ರ ಜನಗಣತಿಯಲ್ಲಿ ಬಾಂಗ್ಲಾದೇಶ ಮೂಲದ ಮಿಯಾ ಮುಸ್ಲಿಮರ ಜನಸಂಖ್ಯೆಯು ಶೇಕಡಾ 40 ಕ್ಕೆ ತಲುಪಬಹುದು ಎಂದು ಹೇಳಿದ್ದರು. ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (AASU) ನೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದಾಗ, ಅವರ ಜನಸಂಖ್ಯೆಯು ಶೇಕಡಾ 21 ರಷ್ಟಿತ್ತು, ಅದು 2011 ರ ಜನಗಣತಿಯಲ್ಲಿ ಶೇಕಡಾ 31 ಕ್ಕೆ ಏರಿತು ಎಂದು ಅವರು ಹೇಳಿದರು.
ಅವರ ಜನಸಂಖ್ಯೆ ಶೇಕಡಾ 40 ಕ್ಕಿಂತ ಹೆಚ್ಚಲಿದೆ. ಅಸ್ಸಾಮಿ ಜನರ ಭವಿಷ್ಯದ ಪೀಳಿಗೆ ತಮ್ಮ ಜನಸಂಖ್ಯೆ ಶೇಕಡಾ 35 ಕ್ಕಿಂತ ಕಡಿಮೆಯಾಗುವುದನ್ನು ನೋಡುವ ದಿನಗಳು ದೂರವಿಲ್ಲ ಎಂದು ಶರ್ಮಾ ಹೇಳಿದ್ದರು. 48 ವಿಧಾನಸಭಾ ಸ್ಥಾನಗಳನ್ನು ಮುಸ್ಲಿಮರಿಗೆ ಮೀಸಲಿಡುವಂತೆ ಕಾಂಗ್ರೆಸ್ ವಕ್ತಾರರು ಇತ್ತೀಚೆಗೆ ಮಾಡಿದ ಬೇಡಿಕೆಯನ್ನು ಮುಖ್ಯಮಂತ್ರಿ ಉಲ್ಲೇಖಿಸಿ, ಪಕ್ಷದಿಂದ ಯಾವುದೇ ವಿರೋಧವಿಲ್ಲ. ನಾವು ಹಿಂದೂ, ಮುಸ್ಲಿಂ ಎಂದು ಲೆಕ್ಕಿಸದೆ ಅಸ್ಸಾಮಿ ಜನರಿಗೆ ಸ್ಥಾನಗಳನ್ನು ಕಾಯ್ದಿರಿಸಲು ಬಿಜೆಪಿ ಒತ್ತಾಯಿಸುತ್ತದೆ ಎಂದರು. ಆದರೆ ಕಾಂಗ್ರೆಸ್ ಮುಸ್ಲಿಮರಿಗೆ ಸ್ಥಾನಗಳನ್ನು ಕಾಯ್ದಿರಿಸುವಂತೆ ಒತ್ತಾಯಿಸುತ್ತದೆ ಎಂದು ಶರ್ಮಾ ಹೇಳಿದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net