_1785655196806.webp?w=480&auto=format%2Ccompress&fit=max)
_1785655196806.webp?w=480&auto=format%2Ccompress&fit=max)
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ್ದ ಬಾಲಕಿಯ ತಾಯಿ (Ruchika Singh Mother), ಪ್ರಧಾನಿಯವರ ಕ್ಷಮಾಪಣೆಯ ನಿರ್ಧಾರದಿಂದಾಗಿ ತಮ್ಮ ಮಗಳಿಗೆ ಇಂದು ಹೊಸ ಜೀವನ ಸಿಕ್ಕಿದೆ ಎಂದಿದ್ದಾರೆ. ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಪ್ರತೀಕಾರದ ಬದಲಿಗೆ ಕ್ಷಮೆಯನ್ನು ಆರಿಸಿಕೊಂಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದು, ಇದನ್ನು ಮಗಳಿಗೆ ಸಿಕ್ಕ ಎರಡನೇ ಅವಕಾಶ ಎಂದು ಬಣ್ಣಿಸಿದ್ದಾರೆ.
ತಮ್ಮ ಭಾವುಕ ಮನವಿಯಲ್ಲಿ, ಬಾಲಕಿಯ ತಾಯಿ ಪ್ರಧಾನಿಯವರ ಬಳಿ ತಮ್ಮ ಮಗಳನ್ನು ದತ್ತು ತೆಗೆದುಕೊಂಡು ಆಕೆಯ ಭವಿಷ್ಯವನ್ನು ಉಜ್ವಲಗೊಳಿಸಲು ನೆರವಾಗುವಂತೆ ಕೋರಿದ್ದಾರೆ. ಮೋದಿ ಜೀ, ದಯವಿಟ್ಟು ಇವಳನ್ನು ದತ್ತು ಪಡೆದು ಆಕೆಯ ಭವಿಷ್ಯವನ್ನು ಬೆಳಗಿಸಿ. ನಮಗೆ ತುಂಬಾ ನಾಚಿಕೆಯಾಗುತ್ತಿದೆ, ನಾವು ಪದೇ ಪದೇ ಕ್ಷಮೆ ಕೋರುತ್ತೇವೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ತಮ್ಮ ಮಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆಕೆಯ ವಯಸ್ಸನ್ನು ತಪ್ಪಾಗಿ ನಮೂದಿಸಲಾಗಿದೆ ಎಂದು ಪ್ರತಿಪಾದಿಸಿರುವ ಅವರು, ಆ ದೂರನ್ನು ಹಿಂಪಡೆಯುವಂತೆ ಮನವಿ ಮಾಡುತ್ತಾ, ತಮ್ಮ ಮಗಳು 15 ವರ್ಷದ ಅಪ್ರಾಪ್ತೆ ಎಂಬುದನ್ನು ಪುನರುಚ್ಚರಿಸಿದ್ದಾರೆ.
ಜುಲೈ 29 ರಂದು ಝೀರೋ ಎಫ್‌ಐಆರ್ ದಾಖಲು
ನನ್ನದು ತಪ್ಪಾಗಿದೆ ಎಂದಿದ್ದ ಬಾಲಕಿ!..