ಮಸೂದೆಯನ್ನು ಪರಿಶೀಲಿಸಿದ ನಂತರ ಮಾತು ಆರಂಭಿಸಿದ ಗೊಗೊಯ್, ಪರೀಕ್ಷಾ ಅಕ್ರಮಗಳನ್ನು ತಡೆಯಲು ಮತ್ತು ಅರ್ಥಪೂರ್ಣ ಬದಲಾವಣೆ ತರಲು ಸರ್ಕಾರಕ್ಕೆ ಮನಸ್ಸಿಲ್ಲ ಎಂಬುದು ಈ ಮಸೂದೆ ಓದಿದಿ ತಕ್ಷಣ ತಿಳಿದುಬಂದಿದ್ದು, ಪ್ರಸ್ತಾವಿತ ತಿದ್ದುಪಡಿಯನ್ನು ಕಣ್ಣೊರೆಸುವ ತಂತ್ರ ಎಂದು ಕರೆದ ಅವರು, ಎರಡು ವರ್ಷಗಳ ಹಿಂದೆ ಮೂಲ ಕಾಯ್ದೆಯನ್ನು ತಂದಾಗ, ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಪೇಪರ್ ಲೀಕ್ ತಡೆಯಲು ಇದು ಐತಿಹಾಸಿಕ ಕ್ರಮ ಎಂದು ಸರ್ಕಾರ ಬಣ್ಣಿಸಿತ್ತು ಎಂಬುದನ್ನು ನೆನಪಿಸಿಕೊಂಡರು.