ನಾಗ್ಪುರದಲ್ಲಿ DRI ಬಿಗ್ ಆಪರೇಷನ್: 2.61 ಕೋಟಿ ಮೌಲ್ಯದ 522 ಕೆಜಿ ಗಾಂಜಾ ಜಫ್ತಿ; ಇಬ್ಬರ ಬಂಧನ! Ganja Seized in Nagpur

ನಾಗ್ಪುರದಲ್ಲಿ  2.61 ಕೋಟಿ ಮೌಲ್ಯದ 522 ಕೆಜಿ ಗಾಂಜಾ ಜಫ್ತಿ
ನಾಗ್ಪುರದಲ್ಲಿ 2.61 ಕೋಟಿ ಮೌಲ್ಯದ 522 ಕೆಜಿ ಗಾಂಜಾ ಜಫ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಮಹಾರಾಷ್ಟ್ರದ ನಾಗ್ಪುರದಲ್ಲಿ DRI ಭರ್ಜರಿ ಬೇಟೆ!
  • ಸೀಕ್ರೆಟ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಅಡಗಿಸಿಟ್ಟಿದ್ದ 2.61 ಕೋಟಿ ಮೌಲ್ಯದ 522 ಕೆಜಿ ಗಾಂಜಾ ಜಫ್ತಿ
  • ಇಬ್ಬರು ಖದೀಮರು ಅರೆಸ್ಟ್, ಟ್ರಕ್​ ಸೀಜ್​
ನಾಗ್ಪುರ್: ಮಹಾರಾಷ್ಟ್ರದ ನಾಗ್ಪುರದಲ್ಲಿ ಇತ್ತೀಚೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 2.61 ಕೋಟಿ ಮೌಲ್ಯದ 522 ಕೆಜಿಗೂ ಮಿಗಿಲಾದ ಗಾಂಜಾವನ್ನು(Ganja Seized in Nagpur) ವಶಪಡಿಸಿಕೊಳ್ಳಲಾಗಿದೆ.

ಟೋಲ್ ಪ್ಲಾಜಾನಲ್ಲಿ ಅರೆಸ್ಟ್​!

ಒಡಿಶಾ-ಆಂಧ್ರಪ್ರದೇಶ ಗಡಿಯಿಂದ ಮಹಾರಾಷ್ಟ್ರದ ಕಡೆಗೆ ಭಾರಿ ಪ್ರಮಾಣದ ಡ್ರಗ್ಸ್ ಸಾಗಣೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಡಿಆರ್‌ಐ ಅಧಿಕಾರಿಗಳಿಗೆ ಸಿಕ್ಕಿತ್ತು. ತಕ್ಷಣ ಅಲರ್ಟ್ ಆದ ನಾಗ್ಪುರ ಪ್ರಾದೇಶಿಕ ಘಟಕದ ಅಧಿಕಾರಿಗಳು, ನಾಗ್ಪುರದ ಮೌಡಾ ಬಳಿಯ ರಾಷ್ಟ್ರೀಯ ಹೆದ್ದಾರಿ 53 ರ ಮಥನಿ ಟೋಲ್ ಪ್ಲಾಜಾ ಹತ್ತಿರ ಹೊಂಚು ಹಾಕಿ ಕುಳಿತಿದ್ದರು.
ಅಲ್ಲಿಗೆ ಬರುತ್ತಿದ್ದಂತೆಯೇ ಟಾಟಾ ಮೋಟಾರ್ಸ್ ಟ್ರಕ್ ಅನ್ನು ಅಧಿಕಾರಿಗಳು ತಡೆದು ನಿಲ್ಲಿಸಿದ್ದಾರೆ. ಮೇಲ್ನೋಟಕ್ಕೆ ಏನೂ ಇಲ್ಲದಂತೆ ಕಂಡ ಆ ಟ್ರಕ್ ಅನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸಿದ ಅಧಿಕಾರಿಗಳೇ ಶಾಕ್​ ಆಗಿದ್ದಾರೆ.

ಟ್ರಕ್ ತುಂಬಾ ಸೀಕ್ರೆಟ್ ಕಂಪಾರ್ಟ್​ಮೆಂಟ್ಸ್​!

ಡ್ರಗ್ಸ್ ಸಾಗಿಸಲು ಈ ಗ್ಯಾಂಗ್ ಹೈಟೆಕ್ ಐಡಿಯಾ ಮಾಡಿತ್ತು. ಟ್ರಕ್‌ನೊಳಗೆ ಯಾರಿಗೂ ಅನುಮಾನ ಬಾರದಂತೆ ವಿಶೇಷ ರಹಸ್ಯ ಕಂಪಾರ್ಟ್​ಮೆಂಟ್​ (Secret Compartments) ಗಳನ್ನು ರೆಡಿ ಮಾಡಲಾಗಿತ್ತು.
ಚಾಲಕನ ಸೀಟಿನ ಹಿಂದೆ, ಡ್ರೈವರ್ ಮತ್ತು ಕ್ಲೀನರ್ ಸೀಟುಗಳ ನಡುವೆ ಮತ್ತೊಂದು ಸೀಕ್ರೆಟ್ ಲಾಕರ್, ಟ್ರಕ್‌ನ ಕೆಳಗೆ ಲಾಕ್ ಮಾಡಲಾಗಿದ್ದ ಟೂಲ್‌ಬಾಕ್ಸ್ ಒಳಗೆ, , ಟ್ರಕ್ ಕ್ಯಾಬಿನ್‌ನ ಛಾವಣಿಯ (Roof) ಮೇಲೂ ಜಾಗ ಮಾಡಿ ಗಾಂಜಾ ಅಡಗಿಸಿಡಲಾಗಿತ್ತು. ಅಧಿಕಾರಿಗಳು ಈ ಎಲ್ಲಾ ರಹಸ್ಯ ಜಾಗಗಳನ್ನು ಜಾಲಾಡಿದಾಗ ಎಂಟು ದೊಡ್ಡ ಚೀಲಗಳಲ್ಲಿ ಪ್ಯಾಕ್ ಮಾಡಲಾಗಿದ್ದ 247 ಪ್ಯಾಕೆಟ್ ಗಾಂಜಾ ಪತ್ತೆಯಾಗಿದೆ.

2.61 ಕೋಟಿ ಮೌಲ್ಯದ ಗಾಂಜಾ, ಇಬ್ಬರು ವಶಕ್ಕೆ

ವಶಪಡಿಸಿಕೊಳ್ಳಲಾದ 522 ಕೆಜಿ ಗಾಂಜಾದ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 2.61 ಕೋಟಿ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಗಾಂಜಾ ಸಾಗಿಸಲು ಬಳಸಿದ್ದ ಸುಮಾರು 8.5 ಲಕ್ಷ ರೂ. ಮೌಲ್ಯದ ಟ್ರಕ್ ಅನ್ನು ಸಹ ಜಪ್ತಿ ಮಾಡಲಾಗಿದೆ. ಕಳ್ಳಸಾಗಣೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಸ್ಥಳದಲ್ಲೇ ಅರೆಸ್ಟ್ ಮಾಡಲಾಗಿದ್ದು, ಇವರ ವಿರುದ್ಧ 1985 ರ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಡ್ರಗ್ಸ್ ನೆಟ್‌ವರ್ಕ್ ಹಿಂದೆಬಿದ್ದ DRI!

ಒಡಿಶಾ-ಮಧ್ಯ ಭಾರತ-ಮಹಾರಾಷ್ಟ್ರದ ಈ ಕಳ್ಳಸಾಗಣೆ ಮಾರ್ಗದಲ್ಲಿ ದೊಡ್ಡ ಜಾಲವೇ ಸಕ್ರಿಯವಾಗಿದೆ. ಇದರ ಬೆನ್ನಟ್ಟಿರುವ ಡಿಆರ್‌ಐ ಸರಣಿ ದಾಳಿಗಳನ್ನು ನಡೆಸುತ್ತಿದೆ. ಇದೇ ವರ್ಷದ ಆರಂಭದಲ್ಲಿ, ಡಿಆರ್‌ಐ ಇಂಥದ್ದೇ ಎರಡು ಪ್ರತ್ಯೇಕ ಆಪರೇಷನ್‌ಗಳನ್ನು ನಡೆಸಿ ಬರೋಬ್ಬರಿ 6.25 ಕೋಟಿ ರೂ. ಮೌಲ್ಯದ 1,250 ಕೆಜಿಗೂ ಹೆಚ್ಚು ಗಾಂಜಾವನ್ನು ವಶಪಡಿಸಿಕೊಂಡಿತ್ತು. ಆ ವೇಳೆ ಈ ಇಡೀ ಜಾಲದ ಕಿಂಗ್‌ಪಿನ್ ಸೇರಿ ನಾಲ್ವರನ್ನು ಜೈಲಿಗಟ್ಟಲಾಗಿತ್ತು. ಈಗ ಮತ್ತೆ ಇಬ್ಬರು ಸಿಕ್ಕಿಬಿದ್ದಿದ್ದು, ಈ ಜಾಲದ ಬೇರು ಎಲ್ಲೆಲ್ಲಿ ಹಬ್ಬಿದೆ ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net