ಗಾಂಧಿ ಪರಿವಾರ v/s ಸಂಘ ಪರಿವಾರ; ಭಾರತದ ಭವಿಷ್ಯಕ್ಕಾಗಿ ಈ ಎರಡು ಪರಿವಾರಗಳ ನಡುವೆ ಹೋರಾಟ: ಸಿಎಂ ರೇವಂತ್ ರೆಡ್ಡಿ | CM Revanth Reddy

ಭಾರತದ ಭವಿಷ್ಯಕ್ಕಾಗಿ ನಡೆಯುತ್ತಿರುವ ರಾಜಕೀಯ ಹೋರಾಟವನ್ನು ಗಾಂಧಿ ಪರಿವಾರ ಮತ್ತು ಸಂಘ ಪರಿವಾರ ನಡುವಿ ಹೋರಾಟ ಎಂದು ಬಣ್ಣಿಸಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವುದೇ ತಮ್ಮ ರಾಜಕೀಯದ ಅಂತಿಮ ಗುರಿ ಎಂದು ಹೇಳಿದ್ದಾರೆ.
CM Revanth Reddy
ತೆಲಂಗಾಣ ಸಿಎಂ ರೇವಂತ್ ರೆಡ್ಡಿ
Published on: 

ತಿರುವನಂತಪುರಂ: ಭಾರತದ ಭವಿಷ್ಯಕ್ಕಾಗಿ ನಡೆಯುತ್ತಿರುವ ರಾಜಕೀಯ ಹೋರಾಟವನ್ನು ಗಾಂಧಿ ಪರಿವಾರ ಮತ್ತು ಸಂಘ ಪರಿವಾರ ನಡುವಿ ಹೋರಾಟ ಎಂದು ಬಣ್ಣಿಸಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವುದೇ ತಮ್ಮ ರಾಜಕೀಯದ ಅಂತಿಮ ಗುರಿ ಎಂದು ಹೇಳಿದ್ದಾರೆ.

ಕೇರಳದ ನಿಲಂಬೂರ್‌ನಲ್ಲಿ ಶುಕ್ರವಾರ(ಸೆ. 25) ಆರ್ಯದನ್ ಮುಹಮ್ಮದ್ – ಅತ್ಯುತ್ತಮ ಸಾರ್ವಜನಿಕ ಸೇವಕ ಪ್ರಶಸ್ತಿ-2026 ಸ್ವೀಕರಿಸಿ ಮಾತನಾಡಿರುವ ಅವರು, ಗಾಂಧಿ ಕುಟುಂಬವು ತ್ಯಾಗದ ಸಂಕೇತವಾಗಿದೆ. ಸಂಘ ಪರಿವಾರವು, ಧರ್ಮ, ಜಾತಿ, ಪ್ರದೇಶ ಮತ್ತು ಭಾಷೆಯ ಆಧಾರದ ಮೇಲೆ ದೇಶವನ್ನು ವಿಭಜಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಗಾಂಧಿ ಪರಿವಾರ ತ್ಯಾಗವನ್ನು ಪ್ರತಿನಿಧಿಸುತ್ತದೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಹುದ್ದೆ, ಅಧಿಕಾರ ಹಾಗೂ ಸ್ಥಾನಮಾನವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದಾರೆ.

Also Read
ವೀರಮಣಿ ಪೋಕ್ಸೊ ಪ್ರಕರಣ; ಸ್ಕ್ರಿಪ್ಟ್ ಚೇಂಜ್​ ಮಾಡಿರಲಿಲ್ಲವೇ? ಸ್ವಲ್ಪ ದಿನ ಪತ್ರಿಕೆಗಳನ್ನು ಓದಿ: ಸಿಎಂ ವಿಜಯ್​ಗೆ ಎಂ.ಕೆ.ಸ್ಟಾಲಿನ್ ಟಾಂಗ್ |M K Stalin
CM Revanth Reddy

ಭಾರತಕ್ಕಾಗಿ ನಡೆಯುತ್ತಿರುವ ಈ ಹೋರಾಟವು ಎರಡು ಪರಿವಾರಗಳ ನಡುವಿನ ಹೋರಾಟ ಎಂದಿರುವ ಅವರು, ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸಲು ಗಾಂಧಿ ಕುಟುಂಬದ ಬೆಂಬಲಕ್ಕೆ ನಿಲ್ಲುವಂತೆ ಜನರಿಗೆ ಕರೆ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಎರಡು ದಶಕಗಳನ್ನು ಕಳೆದ ನಂತರ ತಮಗೆ ಯಾವುದೇ ವೈಯಕ್ತಿಕ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲ. ರಾಹುಲ್ ಗಾಂಧಿ ಅವರನ್ನು ಭಾರತದ ಪ್ರಧಾನಿಯನ್ನಾಗಿ ಮಾಡುವುದೇ ನನ್ನ ಏಕೈಕ ಕನಸು ಎಂದು ತಿಳಿಸಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಹವಾ ಶುರುವಾಗಿದೆ ಎಂದಿದ್ದಾರೆ. ಇದೇ ವೇಳೆ ಕೇಂದ್ರದ ವಿರುದ್ಧ ಕಿಡಿಕಾರಿದ ಅವರು, ವೋಟ್ ಕಿ ಚೋರಿ, ಪಾರ್ಟಿ ಕಿ ಚೋರಿ, ಸಿಂಬಲ್ ಕಿ ಚೋರಿ, ಫಂಡ್ಸ್ ಕಿ ಚೋರಿ ಮೂಲಕ ಭಾರತದ ಯುವಜನರ ಭವಿಷ್ಯವನ್ನು ಕದಿಯುತ್ತಿದ್ದಾರೆ. ಮತದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net