ಐಎಎಸ್ ಅಧಿಕಾರಿ ಮನೆಯಲ್ಲಿ ಜೂಜಾಟ: 18 ಜನರ ಬಂಧನ; 13 ಲಕ್ಷ ಮುಟ್ಟುಗೋಲು ಹಾಕಿದ ಪೊಲೀಸರು| IAS Officer

ಐಎಎಸ್ (IAS Officer) ಅಧಿಕಾರಿ ವಂದನಾ ವೈದ್ಯ ಅವರ ಫಾರ್ಮ್‌ಹೌಸ್ ಮೇಲೆ ಪೊಲೀಸರ ದಾಳಿ
ಐಎಎಸ್ (IAS Officer) ಅಧಿಕಾರಿ ವಂದನಾ ವೈದ್ಯ ಅವರ ಫಾರ್ಮ್‌ಹೌಸ್ ಮೇಲೆ ಪೊಲೀಸರ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಐಎಎಸ್ ಅಧಿಕಾರಿ ವಂದನಾ ವೈದ್ಯ ಅವರ ಫಾರ್ಮ್‌ಹೌಸ್ ಮೇಲೆ ಪೊಲೀಸರ ದಾಳಿ
  • ಜೂಜಾಟದಲ್ಲಿ ತೊಡಗಿದ್ದ 18 ಜನರ ಬಂಧನ; 13.68 ಲಕ್ಷ ರೂಪಾಯಿ ನಗದು ವಶ
  • ಪೊಲೀಸರಿಂದ ಮುಂದುವರಿದ ತನಿಖೆ
ಇಂದೋರ್​: ಐಎಎಸ್ ಅಧಿಕಾರಿ (IAS Officer) ವಂದನಾ ವೈದ್ಯ ಅವರಿಗೆ ಸೇರಿದ್ದ ಫಾರ್ಮಹೌಸ್​ ಮೇಲೆ ದಾಳಿ ನಡೆಸಿದ ಇಂದೋರ್​ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 18 ಜನರನ್ನು ಬಂಧಿಸಿದ ಕುರಿತು ವರದಿಯಾಗಿದೆ.
ಪ್ರಸ್ತುತ ರಾಜ್ಯ ಸರ್ಕಾರದ ಹಣಕಾಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿರುವ ವಂದನಾ ವೈದ್ಯ ಅವರಿಗೆ ಸೇರಿರಿವ ಫಾರ್ಮಹೌಸ್​ ಮೇಲೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಬುಧವಾರ ತಡರಾತ್ರಿ, ನಿಖರ ಮಾಹಿತಿಯ ಮೇರೆಗೆ ಇಂದೋರ್​ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಅವಲಿಪುರ ಗ್ರಾಮದಲ್ಲಿರುವ ಫಾರ್ಮ್‌ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 18 ಜನ ಜೂಜುಕೋರರು ತಗಲಾಕೊಂಡಿದ್ದು, ಇತರ ಆರು ಜನ ಓಡಿಹೋಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಪೊಲೀಸರು ನಡೆಸಿದ ದಾಳಿಯಲ್ಲಿ, ಹತ್ತು ಡೆಕ್​ ಇಸ್ಪೀಟ್ ಎಲೆಗಳು, ಮೂವತ್ತು ಮೊಬೈಲ್​ಗಳು ಹಾಗೂ ಸುಮಾರು 13.68 ಲಕ್ಷ ನಗದನ್ನು ವಶ ಪಡಿಸಿಕೊಂಡಿರುವುದಾಗಿ ಪೋಲಿಸ್​ ಮೂಲಗಳು ತಿಳಿಸಿವೆ.
ದಾಳಿಯ ನಂತರ, ಐಎಎಸ್​ ಅಧಿಕಾರಿ ಅಪರಿಚಿತ ವ್ಯಕ್ತಿಗಳು ತಮ್ಮ ಫಾಮ್​ಹೌಸ್​ಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಮತ್ತು ಕಳ್ಳತನ ಸಹ ನಡೆದಿದೆ ಎಂದು ವಂದನಾ ವೈದ್ಯ ಪೊಲೀಸರಿಗೆ ಪತ್ರ ಬರೆದಿದ್ದಾರೆ.
ಐಎಎಸ್ ಅಧಿಕಾರಿಯ ದೂರಿನ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ವ್ಯಕ್ತಿಗಳು ಫಾರ್ಮ್​ಹೌಸ್​ಗೆ ಹೇಗೆ ಪ್ರವೇಶಿಸಿದರು ಎಂಬುದನ್ನು ನಿರ್ಧರಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಯಾಂಗ್ಚೆನ್ ಡೋಲ್ಕರ್ ಭುಟಿಯಾ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾನ್ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ, ಬೀಟ್‌ನ ಉಸ್ತುವಾರಿ ಸಬ್-ಇನ್‌ಸ್ಪೆಕ್ಟರ್ ಮತ್ತು ಸಹಾಯಕ ಸಬ್-ಇನ್‌ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net