ಉತ್ತರ Vs ದಕ್ಷಿಣ ವಿವಾದಕ್ಕೆ ಫುಲ್ ಸ್ಟಾಪ್? 850 ಸೀಟುಗಳ ಮಹಾಪ್ಲಾನ್: ಲೋಕಸಭೆಯಲ್ಲಿ ದಕ್ಷಿಣ ಭಾರತದ ಧ್ವನಿ ಕುಗ್ಗಲ್ಲ ಎಂದ ಗೃಹ ಸಚಿವ! Amit Shah

ಉತ್ತರ Vs ದಕ್ಷಿಣ ವಿವಾದಕ್ಕೆ ಫುಲ್ ಸ್ಟಾಪ್? 850 ಸೀಟುಗಳ ಮಹಾಪ್ಲಾನ್: ಲೋಕಸಭೆಯಲ್ಲಿ ದಕ್ಷಿಣ ಭಾರತದ ಧ್ವನಿ ಕುಗ್ಗಲ್ಲ ಎಂದ ಗೃಹ ಸಚಿವ!
ಉತ್ತರ Vs ದಕ್ಷಿಣ ವಿವಾದಕ್ಕೆ ಫುಲ್ ಸ್ಟಾಪ್? 850 ಸೀಟುಗಳ ಮಹಾಪ್ಲಾನ್: ಲೋಕಸಭೆಯಲ್ಲಿ ದಕ್ಷಿಣ ಭಾರತದ ಧ್ವನಿ ಕುಗ್ಗಲ್ಲ ಎಂದ ಗೃಹ ಸಚಿವ!
Published on
ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಡಿಲಿಮಿಟೇಶನ್ ಬಿಲ್ 2026 ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಪ್ರಭಾವವನ್ನು ಕುಗ್ಗಿಸಲಿದೆ ಎಂಬ ಆತಂಕದ ನಡುವೆಯೇ, ಗೃಹ ಸಚಿವ ಅಮಿತ್ ಷಾ(Amit Shah) ಸಂಸತ್ತಿನಲ್ಲಿ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ರಾಜ್ಯದ ಸೀಟುಗಳ ಸಂಖ್ಯೆ ಕಡಿಮೆಯಾಗುವುದಿಲ್ಲ, ಬದಲಿಗೆ ಎಲ್ಲ ರಾಜ್ಯಗಳಿಗೂ ಸಮಾನವಾಗಿ ಸೀಟುಗಳು ಹೆಚ್ಚಾಗಲಿವೆ ಎಂದು ಭರವಸೆ ನೀಡಿದ್ದಾರೆ.

ದಕ್ಷಿಣ ಭಾರತದ ಆತಂಕಕ್ಕೆ ಅಮಿತ್ ಷಾ ಉತ್ತರ

ಕ್ಷೇತ್ರ ಮರುವಿಂಗಡಣೆಯು ಕೇವಲ ಜನಸಂಖ್ಯೆಯನ್ನು ಆಧರಿಸಿದ್ದರೆ, ಜನಸಂಖ್ಯಾ ನಿಯಂತ್ರಣದಲ್ಲಿ ಯಶಸ್ವಿಯಾಗಿರುವ ಕರ್ನಾಟಕ, ತಮಿಳುನಾಡು, ಕೇರಳದಂತಹ ರಾಜ್ಯಗಳು ಸಂಸತ್ತಿನಲ್ಲಿ ತಮ್ಮ ಪ್ರಾತಿನಿಧ್ಯ ಕಳೆದುಕೊಳ್ಳಬಹುದು ಎಂಬ ಭೀತಿ ಇತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಷಾ, ಪ್ರಸ್ತುತ ಇರುವ ಸೀಟುಗಳ ಸಂಖ್ಯೆಯನ್ನು ಯಾವುದೇ ರಾಜ್ಯದಲ್ಲಿ ಕಡಿತಗೊಳಿಸುವುದಿಲ್ಲ. ಬದಲಿಗೆ, ಒಟ್ಟು ಸೀಟುಗಳ ಸಂಖ್ಯೆಯನ್ನು 543 ರಿಂದ 850ಕ್ಕೆ ಏರಿಸುವ ಮೂಲಕ ಎಲ್ಲರಿಗೂ ನ್ಯಾಯ ಒದಗಿಸಲಾಗುವುದು ಎಂದು ಅಭಯ ನೀಡಿದ್ದಾರೆ.
ಸಮಾನ ಅನುಪಾತದ ಏರಿಕೆ: ರಾಜ್ಯಗಳ ಪ್ರಸ್ತುತ ಬಲದ ಮೇಲೆ ಅನುಪಾತದಂತೆ ಆಧಾರದಲ್ಲಿ ಸೀಟುಗಳನ್ನು ಹೆಚ್ಚಿಸುವ ಸೂತ್ರವನ್ನು ಸರ್ಕಾರ ಪರಿಗಣಿಸುತ್ತಿದೆ. ಇದರಿಂದ ಉತ್ತರ ಮತ್ತು ದಕ್ಷಿಣದ ನಡುವಿನ ಸಮತೋಲನ ಕಾಯ್ದುಕೊಳ್ಳಬಹುದು ಎಂಬುದು ಕೇಂದ್ರದ ವಾದವಾಗಿದೆ.

ರಾಜ್ಯವಾರು ಸಂಭಾವ್ಯ ಸೀಟುಗಳ ಲೆಕ್ಕಾಚಾರ (ಅಂದಾಜು):

ಒಟ್ಟು ಸೀಟುಗಳ ಸಂಖ್ಯೆ 850ಕ್ಕೆ ಏರಿಕೆಯಾದಾಗ, ಪ್ರಮುಖ ರಾಜ್ಯಗಳ ಸಂಖ್ಯಾಬಲ ಹೀಗೆ ಬದಲಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ:
ರಾಜ್ಯ    ಪ್ರಸ್ತುತ ಸೀಟುಗಳು  ಅಂದಾಜು  ಹೊಸ ಸೀಟುಗಳು
ಕರ್ನಾಟಕ          28                           42
ತಮಿಳುನಾಡು      39                           58
ಕೇರಳ              20                           30
ಆಂಧ್ರಪ್ರದೇಶ     25                           37
ತೆಲಂಗಾಣ           17                           25
ಉತ್ತರ ಪ್ರದೇಶ     80                          120
ಮಹಾರಾಷ್ಟ್ರ        48                               72

ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಶನ್ ಲಿಂಕ್

2023ರಲ್ಲಿ ಅಂಗೀಕಾರವಾಗಿದ್ದ ಮಹಿಳಾ ಮೀಸಲಾತಿ ವಿಧೇಯಕವು ಜಾರಿಯಾಗಲು ಕ್ಷೇತ್ರ ಮರುವಿಂಗಡಣೆ ಅನಿವಾರ್ಯವಾಗಿದೆ.
2029ರ ಗುರಿ: 2026ರ ಮರುವಿಂಗಡಣೆ ಪ್ರಕ್ರಿಯೆ ಮುಗಿದ ನಂತರ, 2029ರ ಲೋಕಸಭಾ ಚುನಾವಣೆಯಲ್ಲಿ ಶೇ. 33ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು.
ಹೆಚ್ಚುವರಿ ಸೀಟುಗಳ ಲಾಭ: ಸೀಟುಗಳ ಸಂಖ್ಯೆ 850ಕ್ಕೆ ಏರುವುದರಿಂದ, ಪುರುಷ ಅಭ್ಯರ್ಥಿಗಳ ಅವಕಾಶಕ್ಕೆ ಧಕ್ಕೆಯಾಗದಂತೆ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಸಾಧ್ಯವಾಗುತ್ತದೆ ಎಂದು ಅಮಿತ್ ಷಾ ವಿವರಿಸಿದ್ದಾರೆ.

ವಿರೋಧ ಪಕ್ಷಗಳ ನಿಲುವು

ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಕೇಂದ್ರದ ಈ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಜನಸಂಖ್ಯೆ ನಿಯಂತ್ರಿಸಿದ ನಮಗೆ ಶಿಕ್ಷೆ ನೀಡುವುದು ಸರಿಯಲ್ಲ ಎಂದು  ವಾದಿಸಿದ್ದಾರೆ. ಆದರೆ, ಅಮಿತ್ ಶಾ ಅವರು ಸಂವಿಧಾನದ 82ನೇ ವಿಧಿಯ ಪ್ರಕಾರ ಮರುವಿಂಗಡಣೆ ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂದು ತಿರುಗೇಟು ನೀಡಿದ್ದಾರೆ.

ಮುಂದಿನ ಹಾದಿ ಏನು..?

ಈ ವಿಧೇಯಕವು ಅಂಗೀಕಾರವಾದ ನಂತರ, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ 'ಡಿಲಿಮಿಟೇಶನ್ ಕಮಿಷನ್' ರಚನೆಯಾಗಲಿದೆ. ಈ ಸಮಿತಿಯು ರಾಜ್ಯಗಳ ಗಡಿ, ಜನಸಂಖ್ಯೆ ಮತ್ತು ಭೌಗೋಳಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಅಂತಿಮ ವರದಿ ನೀಡಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net