ತೈಲ ಅಭಾವದ ವದಂತಿ: ಪೆಟ್ರೋಲ್ ಬಂಕ್‌ಗೆ ನೀರಿನ ಬ್ಯಾರೆಲ್ ತಂದ ಭೂಪ; 82 ಸಾವಿರದ ಡೀಸೆಲ್ ತುಂಬಿಸಿದ ವಿಡಿಯೋ ವೈರಲ್! Viral Video
ನೀರಿನ ಬ್ಯಾರಲ್ ಹಿಡಿದು ಪೆಟ್ರೋಲ್ ಬಂಕ್‌ಗೆ ಬಂದ ವ್ಯಕ್ತಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭಾರತದಲ್ಲಿ ತೈಲ ಅಭಾವದ ವದಂತಿ
ನೀರಿನ ಬ್ಯಾರಲ್ ಹಿಡಿದು ಪೆಟ್ರೋಲ್ ಬಂಕ್‌ಗೆ ಬಂದ ವ್ಯಕ್ತಿ
ಬರೊಬ್ಬರಿ 82 ಸಾವಿರದ ಡೀಸೆಲ್ ತುಂಬಿಸಿದ ವಿಡಿಯೋ ವೈರಲ್
ಮಧ್ಯಪ್ರದೇಶ: ಮಧ್ಯಪ್ರಾಚ್ಯದಲ್ಲಿ ಮುಂದುವರೆಯುತ್ತಿರುವ ಸಂಘರ್ಷದ ಹಿನ್ನಲೆಯಲ್ಲಿ ಭಾರತದಲ್ಲಿ ತೈಲ ಹಾಗೂ ಅನಿಲ (ಗ್ಯಾಸ್ ಸಿಲಿಂಡರ್) ಪೂರೈಕೆಯಲ್ಲಿ ವ್ಯತ್ಯಯವಾಗುವ ವದಂತಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಎಲ್ಲಿ ನೋಡಿದರು ಜನ ಸರತಿ ಸಾಲಲ್ಲಿ ನಿಂತಿರುವ ದೃಶ್ಯಗಳು ವೈರಲ್ (Viral Video) ಆಗುತ್ತಿವೆ.
ನೀರಿನ ಬ್ಯಾರೆಲ್ನಲ್ಲಿ ಡೀಸೆಲ್ ತುಂಬಿಸಿದ ಭೂಪ!
ಇನ್ನೇನು ಕೆಲವೇ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಖಾಲಿಯಾಗಲಿದೆ ಎಂಬ ವದಂತಿಯನ್ನು ನಂಬಿದ ವ್ಯಕ್ತಿಯೊಬ್ಬ, ಸುಮಾರು ಎಂಟು ಸಾವಿರ ಲೀಟರ್ ಸಾಮರ್ಥ್ಯವಿರುವ ನೀರಿನ ಬ್ಯಾರೆಲ್ವೊಂದನ್ನು ಪೆಟ್ರೋಲ್ ಬಂಕ್‌ಗೆ ತೆಗೆದುಕೊಂಡು ಬಂದು ಬರೊಬ್ಬರಿ 82,500 ರೂಪಾಯಿಯ ಡೀಸೆಲ್ ತುಂಬಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕುಕ್ಕರ್, ಬಕೆಟ್ ಹಿಡಿದು ಬಂದ ನಾಗರಿಕರು
ತೈಲ ಪೂರೈಕೆಗಳ ಬಗ್ಗೆ ವದಂತಿಗಳ ಹಾವಳಿ ಯಾವ ರೀತಿಯಲ್ಲಿದೆ ಎಂದರೆ ಜನ ಭಯಭೀತರಾಗಿ ಮನೆಯಲ್ಲಿರುವ ಬಕೆಟ್, ಕುಕ್ಕರ್ಗಳನ್ನು ತೆಗೆದುಕೊಂಡು, ಪೆಟ್ರೋಲ್ ಬಂಕ್‌ಗೆ ಬಂದು ಅದರಲ್ಲಿ ತೈಲವನ್ನು ತುಂಬಿಸಿಕೊಳ್ಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ವದಂತಿಗಳಿಗೆ ಕಿವಿಗೊಡಬೇಡಿ!
ಈ ವದಂತಿಗಳಿಗೆ ಪ್ರತಿಕ್ರಿಯೆ ನೀಡಿರುವ ತೈಲ ಪೂರೈಕೆದಾರ ಕಂಪನಿ ಭಾರತ್ ಪೆಟ್ರೋಲಿಯಂ, ದೇಶದಲ್ಲಿ ತೈಲ ಪೂರೈಕೆಯಲ್ಲಿ ಯಾವುದೇ ಕೊರತೆಗಳಿಲ್ಲ. ಆದರೆ ಜನರು ವದಂತಿಗಳಿಗೆ ಭಯಪಟ್ಟು ಮುಂಗಡವಾಗಿ ಹೇರಳವಾಗಿ ಪೆಟ್ರೋಲ್ ಮತ್ತು ಡೀಸೆಲ್ಗಳನ್ನು ಖರೀದಿ ಮಾಡಿದರೆ ಅಪಾಯ ತಲೆದೂರಲಿದೆ ಎಂದು ಎಚ್ಚರಿಕೆ ನೀಡಿದೆ.
ತಜ್ಞರ ಪ್ರಕಾರ ಹೀಗೆ ಬಕೆಟ್, ಕುಕ್ಕರ್, ಪ್ಲಾಸ್ಟಿಕ್ ಪಾತ್ರೆಗಳಲ್ಲಿ ತೈಲಗಳನ್ನು ಸಂಗ್ರಹಿಸುವುದು ಅಪಾಯಕಾರಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ನ್ನು ಮನೆಯಲ್ಲಿ ಸಂಗ್ರಹಿಸಿಡುವುದರಿಂದ ಬೆಂಕಿ ಅವಗಢ ಸಂಭವಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ,(ಏಜನ್ಸೀಸ್).