ದೇಶದ ಪ್ರಮುಖ ನಾಲ್ಕು ನಗರಗಳಲ್ಲಿ ಇಂಧನ ಬೆಲೆ ಏರಿಕೆ ಶಾಕ್; ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್​ಗೆ 3 ರೂ. ಏರಿಕೆ | Fuel price hike

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ಇರಾನ್-ಅಮೆರಿಕ ಸಂಘರ್ಷ ಮತ್ತು ಹೊರ್ಮುಜ್ ಜಲಸಂಧಿ ನಿರ್ಬಂಧ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ತೈಲದ ಅಭಾವ ತಲೆದೂರಿದ್ದು, ಇಂದು(ಮೇ 15) ಮುಂಜಾನೆ ದೇಶದ ಪ್ರಮುಖ ನಾಲ್ಕು ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಲೀಟರ್​ಗೆ ತಲಾ 3 ರೂ. ಏರಿಕೆಯಾಗಿದೆ(Fuel price hike) ಎಂದು ಪಿಟಿಐ ವರದಿ ಮಾಡಿದೆ.
ಬೆಲೆ ಪರಿಷ್ಕರಣೆಯ ಬಳಿಕ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.77ಯಿಂದ 97.77 ರೂಪಾಯಿಗೆ ಏರಿಕೆಯಾದರೆ, ಡೀಸೆಲ್ ದರ ಲೀಟರ್‌ಗೆ 87.67ರಿಂದ 90.67 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್‌ಗೆ 108.74 ರೂ., ಮುಂಬೈನಲ್ಲಿ 106.68 ರೂ. ಹಾಗೂ ಚೆನ್ನೈನಲ್ಲಿ 103.67 ರೂ. ತಲುಪಿದ್ದು, ಪ್ರತಿ ಲೀಟರ್‌ಗೆ 2.83 ರಿಂದ 3.29 ರೂ.ಗಳವರೆಗೆ ಹೆಚ್ಚಳವಾಗಿದೆ.
ಕೋಲ್ಕತ್ತಾದಲ್ಲಿ ಡೀಸೆಲ್​ ಲೀಟರ್‌ಗೆ 95.13 ರೂ., ಮುಂಬೈನಲ್ಲಿ 93.14 ರೂ. ಮತ್ತು ಚೆನ್ನೈನಲ್ಲಿ 95.25 ರೂ.ಗೆ ಏರಿಕೆಯಾಗಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ಏರುತ್ತಿರುವಾಗ ಮತ್ತು ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದರೂ ಭಾರತದಲ್ಲಿ ಈವರೆಗೂ ಚಿಲ್ಲರೆ ಇಂಧನ ಬೆಲೆ ಏರಿಕೆಯನ್ನು ಮಾಡಿರಲಿಲ್ಲ. 
ಆದಾಗ್ಯೂ, ನಷ್ಟವನ್ನು ಸರಿದೂಗಿಸಲು ತೈಲ ಕಂಪನಿಗಳು ಒಂದು ಭಾಗದ ಹೊರೆಯನ್ನು ತಪ್ಪಿಸಲು ಲೀಟರ್‌ಗೆ 3 ರೂಪಾಯಿಗಳಷ್ಟು ತೈಲ ಕಂಪನಿಗಳು ಹೆಚ್ಚಳ ಮಾಡಿವೆ. ಮಾರ್ಚ್ 2024ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆ ವರ್ಷ ನಡೆದ ಸಾರ್ವತ್ರಿಕ ಚುನಾವಣೆಗಳಿಗೆ ಮೊದಲು ತೈಲ ಕಂಪನಿಗಳು ತಮ್ಮ ಬೆಲೆಗಳನ್ನು ಲೀಟರ್‌ಗೆ 2 ರೂ.ಗಳಷ್ಟು ಕಡಿಮೆ ಮಾಡಿದ್ದವು ಎನ್ನಲಾಗಿದೆ.

ಸಿಎನ್​ಜಿ ಬೆಲೆಯಲ್ಲೂ 2 ರೂ. ಏರಿಕೆ

ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ, ಹಾರ್ಮುಜ್ ದಿಗ್ಬಂಧನದ ನಡುವೆಯೂ ನೈಸರ್ಗಿಕ ಅನಿಲ (ಸಿಎನ್‌ಜಿ) ಬೆಲೆಯನ್ನು 2 ರೂ. ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿ ಪ್ರತಿ ಕೆಜಿಗೆ 2 ರೂ. ಹೆಚ್ಚಿಸಲಾಗಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net