ಬೀದಿ ನಾಯಿ ಕಾಟಕ್ಕೆ ಬೇಸತ್ತ ಜನ; ಪಂಚಾಯತ್ ಅಧಿಕಾರಿಯ ಟೇಬಲ್ ಮೇಲೆಯೇ ಶ್ವಾನದ ಮರಿ ಇಟ್ಟು ವಿನೂತನ ಪ್ರತಿಭಟನೆ!

Frustrated by dog menace, Yuva Sena workers release strays on Nashik official's table
Frustrated by dog menace, Yuva Sena workers release strays on Nashik official's table
Published on: 

ಪ್ರಮುಖ ಮುಖ್ಯಾಂಶಗಳು

  • ನಾಸಿಕ್​ನಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ಸಮಸ್ಯೆ
  • ಪಂಚಾಯತ್​ ಅಧಿಕಾರಿ ಕಚೆರಿಗೆ 2 ನಾಯಿ ನಿಟ್ಟು ಆಕ್ರೋಶ
  • ವಿನೂತನವಾಗಿ ಪ್ರತಿಭಟನೆ ನಡೆಸಿ ಜನರು.
Frustrated by dog menace, Yuva Sena workers release strays on Nashik official's table: ಬೀದಿ ನಾಯಿಗಳ ಕಾಟದಿಂದ ಬೇಸತ್ತ ಹಿನ್ನೆಲೆ, ಮಹಾರಾಷ್ಟ್ರದ ನಾಸಿಕ್​ನಲ್ಲಿನ ಯುವಸೇನಾ ಕಾರ್ಯಕರ್ತರು ಬೀದಿ ನಾಯಿಮರಿಗಳನ್ನು ತಂದು ನಗರ ಪಂಚಾಯತ್​ ಅಧಿಕಾರಿ ಮೇಜಿನ ಮೇಲೆ ಬಿಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿದ ದೃಶ್ಯಗಳು ಸದ್ಯ ಸೋಶಿಯಕಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.
ಶಿವಸೇನೆಯ ಯುವ ಘಟಕವಾದ ಯುವಸೇನೆಯ ಜಿಲ್ಲಾ ಮುಖ್ಯಸ್ಥ ವಿಕ್ರಮ್ ರಾಂಧವೆ, ಗೋಣಿ ಚೀಲದಿಂದ ನಾಯಿಮರಿ ತೆಗೆದು, ನಿಫಡ್‌ನಲ್ಲಿರುವ ನಗರ ಪಂಚಾಯತ್ ಕಚೇರಿಯಲ್ಲಿ ಮುಖ್ಯ ಅಧಿಕಾರಿ ಧೀರಜ್ ಭಮ್ರೆ ಅವರ ಮೇಜಿನ ಮೇಲೆ ಬಿಟ್ಟ ದೃಶ್ಯವು ಸದ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ ಏನಿದೆ?

ನಾಸಿಕ್​ನಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ಸಮಸ್ಯೆ ಬಗ್ಗೆ ಎಷ್ಟು ಬಾರಿ ದೂರು ಕೊಟ್ಟರು ಸಹ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇದರಿಂದ ಜನರಿಗೆ ಸಮಸ್ಯೆಯುಂಟಾಗುತ್ತಿತ್ತು. ಇದರಿಂದ ಬೇಸತ್ತ ಯುವಸೇನಾ ಕಾರ್ಯಕರ್ತರು ನಾಯಿ ಮರಿಯನ್ನೇ ಕಚೇರಿಗೆ ತಂದುಬಿಟ್ಟರು. ಇಷ್ಟೇ ಅಲ್ಲದೇ ನೋಟುಗಳ ಹಾರವನ್ನು ಅವರ ಮುಂದೆ ಇಟ್ಟು, ಸಮಸ್ಯೆ ಬಗ್ಗೆ ವಾಗ್ವಾದ ನಡೆಸುತ್ತಿರುವುದು ವಿಡಿಯೋದಲ್ಲಿ ಇದೆ.
ನೋಟು, ನಾಯಿ ಇಟ್ಟು ಅಸಮಾಧಾನ
ನಿಫಡ್​ ಪ್ರದೇಶದ ಸುತ್ತಮುತ್ತಲಿನ ರಸ್ತೆಯಲ್ಲಿ ಬೀದಿ ನಾಯಿ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ನಿತ್ಯ ನಾಗರಿಕರು ಮತ್ತು ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಭಯದಲ್ಲೇ ಪ್ರಯಾಣಿಸುವಂತಹ ಸಮಸ್ಯೆ ಎದುರಾಗಿದೆ. ನಾಯಿಗಳು ಯಾವ ಸಮಯದಲ್ಲಿ ತಮ್ಮನ್ನು ಅಟ್ಯಾಕ್​ ಮಾಡುತ್ತವೆಯೋ ಎನ್ನುವ ಭಯದಲ್ಲಿ ಕಾಲ ಕಳೆಯುವಂತಾಗಿದೆ. ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.

ಹಲವಾರು ಜನರನ್ನು ಬೀದಿ ನಾಯಿಗಳು ಕಚ್ಚಿವೆ. ನಾಯಿ ಕಾಟದ ಬಗ್ಗೆಆಡಳಿತಕ್ಕೆ ಪದೇ ಪದೇ ದೂರುಗಳನ್ನು ಕೊಟ್ಟರೂ ಸಹ, ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ನಿರ್ದಿಷ್ಟ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸ್ಥಿತಿ ಎಂದು ಕಿಡಿಕಾರಿದರು.
ನಾಯಿ ಮುಖವಾಡ ಧರಿಸಿ ಆಗಮನ
ಕಳೆದ ತಿಂಗಳು ಮಧ್ಯಪ್ರದೇಶದ ಖಾಂಡ್ವಾದಲ್ಲಿ ಯುವಕರು ನಾಯಿ ವೇಷ ಧರಿಸಿ ಬಂದು ಅಧಿಕಾರಿಗಳ ಮುಂದೆ ಸಮಸ್ಯೆ ಮುಂದಿಟ್ಟಿದ್ದರು. ಅಲ್ಲಿ ಪುರಸಭೆಯ ಬೀದಿ ನಾಯಿ ಸಂತಾನಹರಣ ಶಸ್ತ್ರಚಿಕಿತ್ಸೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ನಾಯಿ ಮುಖವಾಡ ಧರಿಸಿದ ವ್ಯಕ್ತಿಯನ್ನು ಸಾರ್ವಜನಿಕ ವಿಚಾರಣೆಗೆ ಕರೆತರಲಾಯಿತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net