ಬದುಕು ಬದಲಿಸಿದ ಇವಿ ಬೈಕ್!...ಕೆಲಸವಿಲ್ಲದೆ ಅಲೆಯುತ್ತಿದ್ದ ಯುವಕನ ತಿಂಗಳ ಗಳಿಕೆ ಈಗ ನಲವತ್ತೈದು ಸಾವಿರ Youth Empowerment

Youth Empowerment  ಚಿತ್ರ Instagram
Youth Empowerment ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿರಬಹುದು
  • ಇವಿ ಕ್ರಾಂತಿ ಎನ್ನುವುದು ಕೇವಲ ಪರಿಸರ ಸಂರಕ್ಷಣೆ ಅಥವಾ ಇಂಧನ ಉಳಿತಾಯಕ್ಕೆ ಮಾತ್ರ ಸೀಮಿತವಾಗಿಲ್ಲ
  • ಭಾರತದ ತಳಮಟ್ಟದ ಆರ್ಥಿಕತೆಯನ್ನು ವಿಶೇಷವಾಗಿ ಗ್ರಾಮೀಣ ಹಿನ್ನಲೆಯ ಯುವಜನರ ಬದುಕನ್ನು ಸಂಪೂರ್ಣವಾಗಿ ಮರುರೂಪಿಸುತ್ತಿದೆ
  • ಈ ಹಿಂದೆ ಮನೆಯಲ್ಲಿ ನಿರುದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬರು ತಿಂಗಳಿಗೆ 45000 ರೂಗಳನ್ನು ಗಳಿಸುತ್ತಿದ್ದಾರೆ
Youth Empowerment: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಇವಿ ಕ್ರಾಂತಿ ಎನ್ನುವುದು ಕೇವಲ ಪರಿಸರ ಸಂರಕ್ಷಣೆ ಅಥವಾ ಇಂಧನ ಉಳಿತಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಭಾರತದ ತಳಮಟ್ಟದ ಆರ್ಥಿಕತೆಯನ್ನು ವಿಶೇಷವಾಗಿ ಗ್ರಾಮೀಣ ಹಿನ್ನಲೆಯ ಯುವಜನರ ಬದುಕನ್ನು ಸಂಪೂರ್ಣವಾಗಿ ಮರುರೂಪಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಭಾರತದ ಪ್ರಮುಖ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯಾದ 'ಜಿಪ್ ಎಲೆಕ್ಟ್ರಿಕ್ ಸಂಸ್ಥಾಪಕ ಆಕಾಶ್ ಗುಪ್ತಾ ಅವರು ಇತ್ತೀಚೆಗೆ ಹಂಚಿಕೊಂಡ ರಸ್ತೆಬದಿಯ ಸಾಂದರ್ಭಿಕ ಸಂಭಾಷಣೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಗುಪ್ತಾ ಇತ್ತೀಚೆಗೆ ನಗರಕ್ಕೆ ವಲಸೆ ಬಂದ ಉತ್ತರ ಪ್ರದೇಶದ ಫಿರೋಜಾಬಾದ್‌ನ ಯುವ ವಿತರಣಾ ಕಾರ್ಯನಿರ್ವಾಹಕರೊಂದಿಗೆ ಮಾತನಾಡಿದ್ದಾರೆ. ಈ ಹಿಂದೆ ಮನೆಯಲ್ಲಿ ನಿರುದ್ಯೋಗಿಯಾಗಿದ್ದ ಅವರು, ಈಗ ಬಾಡಿಗೆ ಎಲೆಕ್ಟ್ರಿಕ್​ ಸ್ಕೂಟರ್​ ಬಳಸಿ ಇ-ಕಾಮರ್ಸ್​ ಪ್ಲಾಟ್​ಫಾರ್ಮ್​ಗಳಿಗೆ ಆರ್ಡರ್​ಗಳನ್ನು ಪೂರೈಸುವ ಮೂಲಕ ದಿನಕ್ಕೆ ಸರಾಸರಿ 1,500 ರೂ. ಗಳಿಸುತ್ತಿದ್ದಾರೆ ಎಂದು ಯುವಕ ತಿಳಿಸಿದ್ದಾರೆ.
ಆದಗ್ಯೂ, ವಿತರಣಾ ಕಾರ್ಯನಿರ್ವಾಹಕರು ವಾರಕ್ಕೆ 2,100 ರೂ. ಬಾಡಿಗೆ ಶುಲ್ಕವನ್ನು ಪಾವತಿಸುತ್ತಾರೆ. ಇದು ದಿನಕ್ಕೆ ಸುಮಾರು 300 ರೂ.ಗಳಷ್ಟಾಗುತ್ತದೆ. ಇದು ಅವರಿಗೆ ದೈನಂದಿನ ಆದಾಯವನ್ನು ನೀಡುತ್ತದೆ. ಒಟ್ಟಾರೆಯಾಗಿ ತಿಂಗಳಿಗೆ ಯುವಕರು 45000 ರೂ. ಹಣವನ್ನು ಗಳಿಸಬಹುದು ಎಂದು ಗುಪ್ತಾ ಉತ್ಸಾಹದಿಂದ ಪ್ರತಿಕ್ರಿಯಿಸಿದ್ದು, ಈ ವ್ಯವಹಾರ ಮಾದರಿಯು ಸೂಪರ್​ ಹಿಟ್​ ಎಂದುಯ ಬಣ್ಣಿಸಿದ್ದಾರೆ. ಬರುವ ಹಣದಿಂದ ಏನು ಮಾಡುತ್ತೀರಿ ಎಂದು ಗುಪ್ತಾ ಪ್ರಶ್ನಿಸಿದಾಗ ಯುವಕ ಮುಗುಳ್ನಗುತ್ತಾ ತನ್ನ ಎಲ್ಲಾ ಗಳಿಕೆಯನ್ನು ಅವರ ಕುಟುಂಬಕ್ಕೆ ಕಳುಹಿಸುವುದಾಗಿ ಹೇಳಿದ್ದಾರೆ.
ಕೈಗೆಟುಕುವ ವಿದ್ಯುತ್ ವಾಹನ ಬಾಡಿಗೆಗಳಿಗೆ ಪರಿವರ್ತನೆಯು ಗಿಗ್​-ಎಕಾನಮಿ ಕೆಲಸಗಾರರಿಗೆ ಪ್ರವೇಶ ತಡೆಗೋಡೆಯನ್ನು ಹೇಗೆ ಕಡಿಮೆ ಮಾಡುತ್ತಿದೆ. ಮತ್ತು ಅವರಿಗೆ ಆರ್ಥಿಕ ಸ್ಥಿರತೆ ಮತ್ತು ಗ್ರಾಮೀಣ ಮನೆಗಳನ್ನು ಬೆಂಬಲಿಸುವ ಮಾರ್ಗವನ್ನು ಹೇಗೆ ನೀಡುತ್ತದೆ ಎಂದು ಈ ವಿಡಿಯೋ ತೋರಿಸುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಶಂಸೆ

ಆಕಾಶ್ ಗುಪ್ತಾ ಅವರು ಹಂಚಿಕೊಂಡ ಈ ವೀಡಿಯೊಗೆ ಇಂಟರ್ನೆಟ್​ನಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ನೂರಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಸಂವಾದವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕಾರ್ಪೊರೇಟ್ ಜಗತ್ತಿನ ಸಿಇಒ ಒಬ್ಬರು ರಸ್ತೆಬದಿಯಲ್ಲಿ ನಿಂತು ತಳಮಟ್ಟದ ಕಾರ್ಮಿಕನ ಯೋಗಕ್ಷೇಮ ವಿಚಾರಿಸಿದ ರೀತಿಯನ್ನು ನೆಟ್ಟಿಗರು ಅತ್ಯಂತ ಚಿಂತನಶೀಲ ಮತ್ತು ಉಲ್ಲಾಸಕರ ಎಂದು ಕರೆದಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net