

ಛತ್ತೀಸ್‌ಗಢ: ಮಾವೋವಾದಿ ಅಥವಾ ನಕ್ಸಲೈಟ್ ಎಂದರೆ ಸಾಕು, ನಮಗೆಲ್ಲಾ ಕಣ್ಣಮುಂದೆ ಬರುವುದೇ ಕೈಯಲ್ಲಿ ಬಂದೂಕು ಹಿಡಿದು, ದಟ್ಟ ಅಡವಿಯಲ್ಲಿ ಅಡಗಿರುವ ಸಶಸ್ತ್ರ ದಂಗೆಕೋರರು. ಆದರೆ, ಹಿಂಸೆಯ ಹಾದಿ ತೊರೆದು ಮುಖ್ಯವಾಹಿನಿಗೆ ಬಂದ ನಂತರ ಅನೇಕ ಮಾವೋವಾದಿಗಳ ಜೀವನ ಸಂಪೂರ್ಣವಾಗಿ ಬದಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನೋತ್ಸವದ (National Handloom Day 2026) ಕಾರ್ಯಕ್ರಮದಲ್ಲಿ ಬಸ್ತಾರ್ ಪ್ರದೇಶದ ಮಾಜಿ ನಕ್ಸಲ್ ಮಹಿಳೆಯರು ಫ್ಯಾಷನ್ ಶೋನಲ್ಲಿ ಕಣ್ಮನ ಸೆಳೆದಿದ್ದಾರೆ.
ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿರುವ ಈ ಮಹಿಳೆಯರೊಂದಿಗೆ ಸಂವಾದ ನಡೆಸಿ ಶುಭ ಕೋರಿದರು.