ಮತ್ತೆ ಭುಗಿಲೆದ್ದ ಆಕ್ರೋಶ! ಸಂಸತ್ತಿನ ರಸ್ತೆಯಲ್ಲಿ ಹಿಂಸಾಚಾರ ಬೆನ್ನಲ್ಲೇ ಇಂಟರ್​ನೆಟ್​ ಕಟ್​, ಓರ್ವ ಪೊಲೀಸ್​ಗೆ ಗಾಯ

ಪ್ರತಿಭಟನೆಯ ದೃಶ್ಯ
ಪ್ರತಿಭಟನೆಯ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಜಂತರ್ ಮಂತರ್​ನಲ್ಲಿ ಮತ್ತೆ ಭುಗಿಲೆದ್ದ ಸಿಜೆಪಿ ಬೆಂಬಲಿಗರ ಆಕ್ರೋಶ
  • ದೆಹಲಿ ಪೊಲೀಸರ ಮೇಲೆ ಬಾಟಲಿ, ಕಲ್ಲು ತೂರಾಟ
ನವದೆಹಲಿ: ಸ್ವಲ್ಪ ಹತೋಟಿಗೆ ಬಂದಿದ್ದ ಪರಿಸ್ಥಿತಿ ಈಗ ಮತ್ತೆ ಕೈಮೀರಿ ಹೋಗಿದ್ದು, ಜಂತರ್​ ಮಂತರ್​ ಬಳಿ ಸಿಜೆಪಿ ಬೆಂಬಲಿಗರು ಏಕಾಏಕಿ ದೆಹಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಬೆನ್ನಲ್ಲೇ ಅಶ್ರುವಾಯು ಶೆಲ್‌ಗಳನ್ನು ಹಾರಿಸಲಾಗಿದೆ. ಇದೇ ವೇಳೆ, ಓರ್ವ ಪೊಲೀಸ್​ ಅಧಿಕಾರಿಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ.
'ದಿ ಸ್ಟೇಟ್ಸ್​ಮನ್'​ ವರದಿ ಪ್ರಕಾರ, ಸ್ಥಳದಲ್ಲಿ ಜಮಾಯಿಸಿದ್ದ ಸಿಜೆಪಿ ಕಾರ್ಯಕರ್ತರು ಎನ್ನಲಾದ ಗುಂಪಿನಿಂದ ಹಿಂಸಾಚಾರ ಭುಗಿಲೆದ್ದಿದೆ. ಪಾರ್ಕ್ ಹೋಟೆಲ್ ಬಳಿ ಪೊಲೀಸರನ್ನು ಬೆನ್ನಟ್ಟಿದ ಯುವಕರು, ಕಲ್ಲುಗಳನ್ನು ತೂರಿ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ, ಇಬ್ಬರು ಪೊಲೀಸರು ಗಾಯಗೊಂಡಿದ್ದಾಗಿ ವರದಿಯಾಗಿದೆ.
ಘಟನೆಯ ಕೆಲವು ವಿಡಿಯೋಗಳು ಹೊರಬಿದ್ದಿದ್ದು, ಪ್ರತಿಭಟನಾಕಾರರು ದೊಣ್ಣೆ, ಕೋಲುಗಳನ್ನು ಹಿಡಿದು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಈ ಮಧ್ಯೆ, ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿಡಿಯೋ ಮುಖಾಂತರ ಯಾವುದೇ ದುಷ್ಕೃತ್ಯ ನಡೆಯದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net