ಅಹಿಂಸೆಯ ಜೊತೆ ಕೆಚ್ಚೆದೆಯ ಹೋರಾಟದಿಂದ ಸ್ವಾತಂತ್ರ್ಯ ಲಭ್ಯ; ಆರ್‌ಎಸ್‌ಎಸ್‌ನ ಮುಕುಂದ್ ಅಭಿಮತ

ಕೇಶವಕೃಪಾದಲ್ಲಿ ಕ್ರಾಂತಿಯ ಕಿಡಿಗಳು ಕೃತಿಯನ್ನು ಆರ್‌ಎಸ್‌ಎಸ್‌ನ ಮುಕುಂದ್ ಬಿಡುಗಡೆ ಮಾಡಿದರು. ಲೇಖಕ  ದು.ಗು.ಲಕ್ಷ್ಮಣ, ರಾಷ್ಟ್ರೋತ್ಥಾನ ಪರಿಷತ್‌ನ ಎಂ.ಪಿ.ಕುಮಾರ್ ಮತ್ತಿತರರಿದ್ದರು.
ಕೇಶವಕೃಪಾದಲ್ಲಿ ಕ್ರಾಂತಿಯ ಕಿಡಿಗಳು ಕೃತಿಯನ್ನು ಆರ್‌ಎಸ್‌ಎಸ್‌ನ ಮುಕುಂದ್ ಬಿಡುಗಡೆ ಮಾಡಿದರು. ಲೇಖಕ ದು.ಗು.ಲಕ್ಷ್ಮಣ, ರಾಷ್ಟ್ರೋತ್ಥಾನ ಪರಿಷತ್‌ನ ಎಂ.ಪಿ.ಕುಮಾರ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಹಿಂಸೆಯ ಜೊತೆ ಕೆಚ್ಚೆದೆಯ ಹೋರಾಟದಿಂದ ಸ್ವಾತಂತ್ರ್ಯ ಲಭ್ಯ
  • ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ಮುಕುಂದ್ ಅಭಿಮತ
  • ರಾಷ್ಟ್ರೋತ್ಥಾನ ಪರಿಷತ್ತಿನ ಕ್ರಾಂತಿಯ ಕಿಡಿಗಳು ಪುಸ್ತಕ ಲೋಕಾರ್ಪಣೆ

ಬೆಂಗಳೂರು: ಕೇವಲಅಹಿಂಸೆಯಿಂದ ನಮಗೆ ಸ್ವಾತಂತ್ರ್ಯಸಿಕ್ಕಿಲ್ಲ.ಬದಲಾಗಿ ಅದೆಷ್ಟೋಕ್ರಾಂತಿಕಾರಿಗಳ ಕೆಚ್ಚೆದೆಯಹೋರಾಟವು ಸ್ವಾತಂತ್ರ್ಯ ಸಂಗ್ರಾಮದಲ್ಲಿಪ್ರಮುಖ ಪಾತ್ರ ವಹಿಸಿದೆ ಎಂದುರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್)ಸಹ ಸರಕಾರ್ಯವಾಹಮುಕುಂದ್ ಅಭಿಪ್ರಾಯಿಸಿದ್ದಾರೆ.

ಚಾಮರಾಜಪೇಟೆಯಕೇಶವಕೃಪಾದಲ್ಲಿ ಹಮ್ಮಿಕೊಂಡಿದ್ದ,ರಾಷ್ಟ್ರೋತ್ಥಾನಪರಿಷತ್ ಪ್ರಕಟಿಸಿದ ‘ಕ್ರಾಂತಿಯಕಿಡಿಗಳು’ ಪುಸ್ತಕ ಬಿಡುಗಡೆಗೊಳಿಸಿಮಾತನಾಡಿದರು.

ಕ್ರಾಂತಿಯಕಿಡಿಗಳು ಪುಸ್ತಕವು ನಮಗೆ ತಿಳಿದಿರದ,ನಾವು ಕೇಳಿರದಹಲವು ಕ್ರಾಂತಿಕಾರಿ ಸ್ವಾತಂತ್ರ್ಯಹೋರಾಟಗಾರರನ್ನು ನಮಗೆ ಪರಿಚಯಿಸುತ್ತದೆ.ಬ್ರಿಟಿಷರ ಬಳಿನಮಗೆ ಸ್ವಾತಂತ್ರ್ಯ ಕೊಡಿ ಎಂದುಪ್ರಾರ್ಥನೆ ಮಾಡುವ ಒಂದು ವರ್ಗವಿದ್ದರೆ,ಸ್ವಾತಂತ್ರ್ಯನಮ್ಮ ಹಕ್ಕು ಎಂದು ಬಲವಾಗಿಪ್ರತಿಪಾದಿಸಿದ್ದು ಇನ್ನೊಂದುವರ್ಗ. ಮೂರನೇವರ್ಗ ಕ್ರಾಂತಿಕಾರಿಗಳದ್ದು.ಇವರು ಬ್ರಿಟಿಷರಿಗೆಬ್ರಿಟಿಷರದ್ದೇ ಮಾರ್ಗದಲ್ಲಿಸಾಗಿ ಬಂದೂಕು,ಮದ್ದುಗುಂಡುಗಳನ್ನುಬಳಸಿ ಉತ್ತರ ನೀಡಿದ್ದರು.ಮತ್ತೊಂದು ವರ್ಗಸಮಾಜ ಸುಧಾರಣೆಯ ಮೂಲಕ ಸ್ವಾತಂತ್ರ್ಯಕ್ಕಾಗಿಹೋರಾಟ ನಡೆಸಿತ್ತು.ಮೊದಲ ಸ್ವಾತಂತ್ರ್ಯಸಂಗ್ರಾಮದಿಂದಲೇ ಕ್ರಾಂತಿಕಾರಿಹೋರಾಟಗಳು ನಡೆದಿದ್ದವು.ಕ್ರಾಂತಿಕಾರಿಗಳಾಗಿಸಶಸ್ತ್ರ ಹೋರಾಟಗಳಲ್ಲಿ ಭಾಗವಹಿಸಿದಹಲವರ ಕುರಿತು ಈ ಪುಸ್ತಕದಲ್ಲಿಉಲ್ಲೇಖವಿದೆ.ಸ್ವಾತಂತ್ರ್ಯೋತ್ಸವದಸಂದರ್ಭದಲ್ಲಿ ಅಂತಹ ಅಜ್ಞಾತವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಲುಇದು ಉತ್ತಮ ಪುಸ್ತಕ ಎಂದು ಮುಕುಂದ್ವಿವರಿಸಿದರು.

ಕಾರ್ಯಕ್ರಮದಲ್ಲಿರಾಷ್ಟ್ರೋತ್ಥಾನ ಪರಿಷತ್‌ನಅಧ್ಯಕ್ಷ ಎಂ.ಪಿ.ಕುಮಾರ್,ಕಾರ್ಯದರ್ಶಿನಾ.ದಿನೇಶ್ಹೆಗ್ಡೆ, ಖಜಾಂಜಿಕೆ.ಎಸ್.ನಾರಾಯಣ ಮತ್ತಿತರರುಉಪಸ್ಥಿತರಿದ್ದರು.

1857ರಲ್ಲಿ ಬಂಧನವಾಗಿ 50 ವರ್ಷ ಅಂಡಮಾನ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಮುಸಾಯ್ ಸಿಂಗ್ ಹೆಸರು ಬಹುತೇಕರಿಗೆ ಗೊತ್ತಿಲ್ಲ. ಆತನ ಫೋಟೊ ಕೂಡಾ ಎಲ್ಲೂ ಸಿಗುತ್ತಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿದ್ದ ಹೇಮೂ ಕಲಾನಿ ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ 19ನೇ ವಯಸ್ಸಿನಲ್ಲಿಯೇ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ. ಕಾಡಿನಲ್ಲಿದ್ದ ಮುರ್ಮು ಸಹೋದರರು ಕಾಡಿನಲ್ಲಿ ವಾಸಿಸುತ್ತಿದ್ದವರನ್ನು ಹೋರಾಟಕ್ಕೆ ಸಂಘಟಿಸಿದ್ದಕ್ಕಾಗಿ ಇಬ್ಬರನ್ನೂ ಬ್ರಿಟಿಷರು ನೇಣುಹಾಕಿ ಸಾಯಿಸಿದರು. ಇಂತಹ 33 ಅನಾಮಿಕ ಹೋರಾಟಗಾರರ ಕಥೆ ಪುಸ್ತಕದಲ್ಲಿದೆ.

— ದು.ಗು.ಲಕ್ಷ್ಮಣ್, ಕೃತಿಯ ಲೇಖಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net