ಗುಣ ಗುಹೆ, ಮಂಜು ಕವಿದ ಕಣಿವೆ ನೋಡ್ಬೇಕಾ?; ಪ್ರವೇಶ ಶುಲ್ಕ ಕೊಡದೆ ಫ್ರೀಯಾಗಿ ಕೊಡೈಕೆನಾಲ್​ ಪ್ರವಾಸ ಮಾಡಿ..Kodaikanal

Free entry Kodaikanal forest sites till May 31
Free entry Kodaikanal forest sites till May 31
Published on

ಪ್ರಮುಖ ಮುಖ್ಯಾಂಶಗಳು

  • ಪ್ರವೇಶ ಶುಲ್ಕ ಕೊಡದೆ ಫ್ರೀಯಾಗಿ ಕೊಡೈಕೆನಾಲ್​ ಪ್ರವಾಸ ಮಾಡುವ ಅವಕಾಶ
  • ಮೇ.31ರವರೆಗೆ ಫೀಸ್​ ಕೊಡದೆ ಗುಣ ಗುಹೆ, ಮುಯಿರ್​​ ಪಾಯಿಂಟ್, ಪಿಲ್ಲರ್​ ರಾಕ್​ ನೋಡುವ ಸುವರ್ಣಾವಕಾಶ.
  • ಮೇ.28ರಿಂದ ಇರುವ ಸರ್ಕಾರಿ ರಜೆ, ವೀಕ್ಲಿ ಆಫ್ ಸದುಪಯೋಗ ಪಡಿಸಿಕೊಳ್ಳಿ​.
Kodaikanal forest sites ನಿತ್ಯ ರೋಬೋಗಳಂತೆ ಕೆಲಸ ಮಾಡುವುದು, ಟ್ರಾಫಿಕ್​​, ಇನ್​ಸ್ಟಾಗ್ರಾಮ್​, ಫೇಸ್​​ಬುಕ್​ಗಳನ್ನು ನೋಡುತ್ತಾ ಕಿರಿಕಿರಿಯಾಗ್ತಿದೆಯಾ? ಒಂಚೂರು ಬ್ರೇಕ್​ ತಗೊಂಡು ಎಲ್ಲಾದ್ರು ದೂರದ ಬೆಟ್ಟ..ಮಂಜಿನಿಂದ ಕೂಡಿದ ಪ್ರದೇಶ, ಸುತ್ತಲು ಇರುವ ಹಸಿರನ್ನು ಕಾಣುತ್ತಾ, ತಾಜಾ ಗಾಳಿ ತೆಗೆದುಕೊಳ್ಳುತ್ತಾ, ಪ್ರಶಾಂತವಾದ ವಾತಾವರಣದಲ್ಲಿ ಬೆರೆಯುತ್ತಾ, ಇಷ್ಟದ ಆಹಾರವನ್ನು ತಿನ್ನುತ್ತಾ ಕಾಲ ಕಳೆಯುವ ಆಸೆ ನಿಮಗಿದೆಯೇ. ಹಾಗಾದ್ರೆ ಇಲ್ಲಿದೆ ಇಲ್ಲಿದೆ ನಿಮ್ಗೊಂದು ಸೂಪರ್​ ಗುಡ್​ನ್ಯೂಸ್. ಹಾಗೆಯೇ ಸಣ್ಣ ಟಿಪ್ಸ್​.

ಹೀಗೆ ಮಾಡಿ..

ಈ ವಾರದ ಕೊನೆಯ ದಿನಗಳಾದ ಮೇ.28ರಂದು ಸರ್ಕಾರಿ ರಜೆ. ಏಕೆಂದರೆ ಅಂದು ಬಕ್ರೀದ್​ ಶುಕ್ರವಾರ ರಜೆಯೊಂದನ್ನು ತೆಗೆದುಕೊಳ್ಳಿ. ಶನಿವಾರ ಮತ್ತು ಭಾನುವಾರ ಮಾಮೂಲಿ ರಜೆ. ಈ 4 ದಿನದ ಸುದೀರ್ಘ ಗ್ಯಾಪ್​ನಲ್ಲಿ ನೀವು ತಮಿಳುನಾಡಿನ ಬೆಟ್ಟಗಳ ರಾಣಿಯಾದ ಕೊಡೈಕೆನಾಲ್​ಗೆ ಹೋಗಲು ಪ್ಲ್ಯಾನ್​ ಮಾಡಿ. ಯಾಕಂದ್ರೆ ಇಲ್ಲಿಗೆ ಭೇಟಿ ನೀಡಲು ನಿಮಗೆ ಹೆಚ್ಚು ಬಜೆಟ್​ ಖರ್ಚಾಗೋದಿಲ್ಲ. ಹಾಗೆಯೇ ಕೆಲವೊಂದು ಆಫರ್​ ಅನ್ನು ದಿಂಡಿಗಲ್ ಜಿಲ್ಲಾಡಳಿತ ನೀಡಿದೆ.
ಹೌದು, ಬೇಸಿಗೆ ಹಿನ್ನೆಲೆ ಪ್ರವಾಸಿಗರ ದಂಡು ಪ್ರಶಾಂತ ಮತ್ತು ತಣ್ಣನೆಯ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆ ದಿಂಡಿಗಲ್​​ ಜಿಲ್ಲಾಡಳಿತವು ಮೇ.31ರವರೆಗೆ ಅವರ ನಿಯಂತ್ರಣದಲ್ಲಿರುವ ಎಲ್ಲ ಪ್ರವಾಸಿ ತಾಣಕ್ಕೆ ಉಚಿತವಾಗಿ ಪ್ರವೇಶಿಸುವ ಅವಕಾಶವನ್ನು ಕೊಟ್ಟಿದೆ. ಹೀಗಾಗಿ ಈ ನಾಲ್ಕು ದಿನದಲ್ಲಿ ಕಡಿಮೆ ಹಣದಲ್ಲಿ ಪ್ರವಾಸ ಕೈಗೊಳ್ಳ ಬಹುದಾಗಿದೆ.  

ಯಾವೆಲ್ಲ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದು?

ಪಿಲ್ಲರ್ ರಾಕ್, ಗುಣಾ ಕೇವ್ಸ್, ಪೈನ್ ಫಾರೆಸ್ಟ್, ಕೋಕರ್ಸ್​ ವಾಕ್​, ಬೆರಿಜಮ್ ಸರೋವರ ಮತ್ತು ಮುಯಿರ್ ಪಾಯಿಂಟ್​ಗಳನ್ನು ನೋಡಬಹುದು ಎನ್ನಲಾಗಿದೆ.  
  • ಪಿಲ್ಲರ್​​ ರಾಕ್​ ಗ್ರಾನೈಟ್​ ರಾಕ್​ ಆಗಿದ್ದು ಇದು 122 ಮೀಟರ್​ ಎತ್ತರ  ಇದೆ. ಇದು ಕಣಿವೆಗಳ ಅದ್ಭುತ ನೋಡ ಮತ್ತು ಮಂಜಿನಿಂದ ಕೂಡಿದ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಪೋಟೋ ಶೂಟ್​ಗೆ ಹೇಳಿ ಮಾಡಿಸಿದ ಸ್ಥಳ ಇದಾಗಿದೆ. ಇದು ಕೊಡೈಕೆನಾಲ್​ ಬಸ್​ ನಿಲ್ದಾಣದಿಂದ 7ರೀಮದ 8 ಕಿ.ಮೀ ದೂರದಲ್ಲಿದೆ.
  • ಗುಣ ಕೇವ್ಸ್ ದಟ್ಟವಾದ ಕಾಡುಗಳು, ಲಂಬವಾದ ಬಂಡೆಗಳು ಮತ್ತು ಆಳವಾದ ಕಂದಕಗಳಿಂದ ಕೂಡಿದೆ.  ಕಮಲ್​ ಹಾಸನ್​ ಸಿನಿಮಾದ ಗುಣಾ ಚಿತ್ರದ ಹಾಡನ್ನು ಇಲ್ಲಿಯೇ ಚಿತ್ರೀಕರಿಸಲಾಗಿತ್ತು.  ಸ್ಥಳಕ್ಕೆ ಬೆಳಿಗ್ಗೆ 9ರೀಂದ ಸಂಜೆ 5:30ರವರೆಗೆ ಭೇಟಿ ನೀಡಬಹುದು.
  • ಕೊಡೈಕೆನಾಲ್​ನ ಮುಖ್ಯ  ಗಿರಿಧಾಮ ಪೈನ್ ಫಾರೆಸ್ಟ್ ಇದು 1906 ರಲ್ಲಿ ಬ್ರಿಟಿಷ್ ಅರಣ್ಯ ಅಧಿಕಾರಿ ಶ್ರೀ ಬ್ರ್ಯಾಂಟ್ ಅವರಿಂದ ನೆಡಲ್ಪಟ್ಟ ಕಾಡು. ಇಲ್ಲಿನ ಅಣಬೆಗಳು ವಿಶೇಷವಾಗಿ ಕಾಣುತ್ತವೆ. ಇಲ್ಲಿ ಟ್ರೆಕ್ಕಿಂಗ್​ ಅವಕಾಶ ಇದೆ.  ಇದು ಕೊಡೈಕೆನಾಲ್​ ಬಸ್​ ನಿಲ್ದಾಣದಿಂದ 8 ಕಿಲೋಮೀಟರ್​ ದೂರದಲ್ಲಿದೆ.
  • ಮುಯಿರ್ ಪಾಯಿಂಟ್​  ಇಲ್ಲಿಂದ ಪಳನಿ ಬೆಟ್ಟಗಳ ಸಾಲುಗಳು ಮತ್ತು ಕಣಿವೆಗಳ ಅದ್ಭುತ ನೋಟಗಳನ್ನು ಇಲ್ಲಿಂದ ಕಣ್ತುಂಬಿಕೊಳ್ಳಬಹುದು. ಇದು ದಟ್ಟವಾದ ಅರಣ್ಯದ ನಡುವೆ ಇರುವ ಸುಂದರವಾದ ನೈಸರ್ಗಿಕ ವೀಕ್ಷಣಾ ತಾಣವಾಗಿದೆ. ಇದು ಕೊಡೈಕೆನಾಲ್​ ಬಸ್​ ನಿಲ್ದಾಣದಿಂದ 10 ಕಿ,ಮೀ ದೂರದಲ್ಲಿದೆ.  ಬೆಳಿಗ್ಗೆ 9ರೀಂದ ಸಂಜೆ 5ರವರೆಗೂ ಭೇಟಿ ನೀಡಲು ಅವಕಾಶವಿದೆ. 
  • ಬೆರಿಜಿನ್​ ಸರೋವರ ಇದು ಕೊಡೈಕೆನಾಲ್ ಬಸ್ ನಿಲ್ದಾಣದಿಂದ ಸುಮಾರು 25 ಕಿಲೋ ಮೀಟರ್​ ದೂರದಲ್ಲಿದೆ. ಬೆರಿಜಮ್ ಸರೋವರವು ದಟ್ಟವಾದ ಅರಣ್ಯ ಮತ್ತು ಹಚ್ಚ ಹಸಿರಿನಿಂದ ಆವೃತವಾಗಿರುವ ಸಿಹಿ ನೀರಿನ ಸರೋವರವಾಗಿದೆ.

ಇದನ್ನು ಪಾಲಿಸಿ

ಪ್ರವಾಸಕ್ಕೆ ತೆರಳುವವರು ನಿತ್ಯ ಪಾದರಕ್ಷೆ ಕ್ಯಾರಿ ಮಾಡಿ, ಧರಿಸಿ. ಮೇ.28ರಂದು ಕೇರಳಂಗೆ ಮುಗಾರು ಆಗಮನ ಹಿನ್ನೆಲೆ ಯಾವುದಕ್ಕೂ ಜೊತೆಯಲ್ಲಿ ಛತ್ರಿ ಇರಲಿ. ಮುಂಜಾನೆ 9ರಿಂದ ಸಂಜೆ 4ರವರೆಗೂ ಪ್ರವಾಸಿ ಸ್ಥಳ ವೀಕ್ಷಿಸಬಹುದು. ಸನ್​ ಗ್ಲಾಸ್​, ಕ್ರೀಂ ಮತ್ತು ಟೋಪಿ ಕ್ಯಾರಿ ಮಾಡಿ. 

ಕೊಡೈಕೆನಾಲ್​​​​ ಹೋಗೋದು ಹೇಗೆ

 ಬೆಂಗಳೂರು ಅಥವಾ ಕರ್ನಾಟಕದ ಇತರ ಭಾಗಗಳಿಂದ ರಸ್ತೆ, ರೈಲಿನ ಮುಖೇನ ಪ್ರಯಾಣಿಸಬಹುದು. ಬೆಂಗಳೂರು, ಮೈಸೂರು ಮತ್ತು ಚೆನ್ನೈನಿಂದ ನೇರ ಬಸ್​​ಗಳಿವೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net