ಈ ಉಚಿತ ಯೋಜನೆಯಿಂದಾಗಿ ಕೇರಳಂ ಕೆಎಸ್ಆರ್ಟಿಸಿಗೆ ಪ್ರತಿ ತಿಂಗಳು ಸುಮಾರು 60 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದ್ದು, ವಾರ್ಷಿಕವಾಗಿ ಅಂದಾಜು 800 ಕೋಟಿ ರೂಪಾಯಿ ಹೊರೆ ಬೀಳಲಿದೆ. ಈ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಈಗಾಗಲೇ ಸರ್ಕಾರವು ಕೆಎಸ್ಆರ್ಟಿಸಿ ನೌಕರರ ಸಂಬಳ ಮತ್ತು ಪೆನ್ಷನ್ಗಾಗಿ ವಾರ್ಷಿಕ 1,500 ಕೋಟಿ ರೂಪಾಯಿ ನೀಡುತ್ತಿದ್ದು, ಅದರ ಜೊತೆಗೆ ಈಗ ಈ 800 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.