ಅನಿಲ್ ಅಂಬಾನಿ ಪುತ್ರನ ವಿರುದ್ಧ ವಂಚನೆ ಪ್ರಕರಣ

Anil Ambani
Anil Ambani
Published on
ನವದೆಹಲಿ: ಉದ್ಯಮಿ ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ಅಂಬಾನಿ ವಿರುದ್ಧ ಸಿಬಿಐ ವಂಚನೆ ಪ್ರಕರಣ ದಾಖಲಿಸಿದೆ.
ಅನಿಲ್ ಧೀರೂಭಾಯಿ ಅಂಬಾನಿ(ಎಡಿಎ) ಗ್ರೂಪ್ ಕಂಪನೀಸ್​ನ ರಿಲಯನ್ಸ್ ಹೋಮ್ ಫೈನಾನ್ಸ್ ಲಿ.(ಆರ್​ಎಚ್​ಎಫ್​ಎಲ್), ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿ. (ಆರ್​ಸಿಎಫ್​ಎಲ್) ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಇದರಲ್ಲಿ ಜೈ ಅಂಬಾನಿ ಹೆಸರು ಕೂಡ ಇದೆ. ಈ ಹಿನ್ನೆಲೆಯಲ್ಲಿ ಸಿಬಿಐ ತಂಡ ಮುಂಬೈನ ಕಫೆ ಪರೇಡ್​ನಲ್ಲಿನ ಅನಿಲ್ ಅಂಬಾನಿ ಮನೆಯಲ್ಲಿ ಮಂಗಳವಾರ ಶೋಧ ನಡೆಸಿದೆ.
ಇವು ಒಟ್ಟು 14,852 ಕೋಟಿ ರೂ. ವಂಚನೆ ಪ್ರಕರಣಗಳಾಗಿವೆ. ಯೂನಿಯನ್ ಬ್ಯಾಂಕ್​ಗೆ 228 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಆರ್​ಎಚ್​ಎಫ್​ಎಲ್ ನಿರ್ದೇಶಕರಾಗಿದ್ದ ಜೈ ಅನ್ಮೋಲ್ ಅಂಬಾನಿ, ಮಾಜಿ ಸಿಇಒ ರವೀಂದ್ರ ಶರದ್ ಸುಧಾಕರ್ ಅವರ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿದೆ.
ಇನ್ನೊಂದು ಪ್ರಕರಣದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರಕ್ಕೆ 57 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಆರ್​ಸಿಎಫ್​ಎಲ್ ಹಾಗೂ ಅದರ ಮಾಜಿ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಜೈ ಹೆಸರಿಲ್ಲ. ಯೂನಿಯನ್ ಬ್ಯಾಂಕ್ ಸೇರಿದಂತೆ ಒಟ್ಟು 18 ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಆರ್​ಎಚ್​ಎಫ್​ಎಲ್ ಒಟ್ಟು 5572.35 ಕೋಟಿ ರೂ. ಸಾಲ ಪಡೆದಿದೆ. ಆರ್​ಸಿಎಫ್​ಎಲ್ 31 ಬ್ಯಾಂಕ್-ಹಣಕಾಸು ಸಂಸ್ಥೆಗಳಿಂದ 9,280 ಕೋಟಿ ರೂ. ಸಾಲ ಪಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net