Jaishankar | ಜೈವಿಕ ಅಸ್ತ್ರಗಳ ಸವಾಲನ್ನು ಎದುರಿಸಲು ಚೌಕಟ್ಟು ಬೇಕು; ಬಯೋಟೆರರಿಸಂ ಭೀತಿಯ ಬಗ್ಗೆ ಜೈಶಂಕರ್ ಎಚ್ಚರಿಕೆ

Jaishankar | ವಿದೇಶಾಂಗ ಸಚಿವ ಜೈಶಂಕರ್
Jaishankar | ವಿದೇಶಾಂಗ ಸಚಿವ ಜೈಶಂಕರ್
Published on
ನವದೆಹಲಿ: ಅಂತರಾಷ್ಟ್ರೀಯ ಭದ್ರತಾ ವಾತಾವರಣ ಅನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಜೈವಿಕ ಶಸ್ತ್ರಾಸ್ತ್ರಗಳ ದುರುಪಯೋಗವನ್ನು ಪರಿಶೀಲಿಸಲು ಜಾಗತಿಕ ವ್ಯವಸ್ಥೆಯೊಂದನ್ನು ಸ್ಥಾಪಿಸಬೇಕೆಂದು ವಿದೇಶಾಂಗ ಸಚಿವ ಜೈಶಂಕರ್(Jaishankar) ಸೋಮವಾರ (ಡಿ.01) ಒತ್ತಾಯಿಸಿದ್ದಾರೆ.
ಜೈವಿಕ ಶಸ್ತ್ರಾಸ್ತ್ರ ಸಮಾವೇಶದ (ಬಿಡಬ್ಲ್ಯೂಸಿ) 50 ವರ್ಷಗಳ ಸಮ್ಮೇಳನದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್, ಜೈವಿಕ ಶಸ್ತ್ರಾಸ್ತ್ರಗಳ ದುರುಪಯೋಗ ಇನ್ನು ಮುಂದೆ ದೂರದ ಸಾಧ್ಯತೆಯಾಗಿಲ್ಲ. ಅಲ್ಲದೆ, ಇಂತಹ ಸವಾಲನ್ನು ಎದುರಿಸಲು ಅಂತರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಜೈಶಂಕರ್, ಜೈವಿಕ ಭಯೋತ್ಪಾದನೆಯು ಅಂತರರಾಷ್ಟ್ರೀಯ ಸಮುದಾಯವು ಸಮರ್ಪಕವಾಗಿ ಸಿದ್ಧರಾಗಿರಬೇಕು. ಅಲ್ಲದೆ, ಬಿಡಬ್ಲ್ಯೂಸಿ ಇನ್ನೂ ಮೂಲಭೂತ ಸಾಂಸ್ಥಿಕ ರಚನೆಗಳನ್ನು ಹೊಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಂಸ್ಥೆಗೆ ಶಾಶ್ವತ ತಾಂತ್ರಿಕ ಸಂಸ್ಥೆ ಇಲ್ಲ ಮತ್ತು ಹೊಸ ವೈಜ್ಞಾನಿಕ ಬೆಳವಣಿಗೆಗಳನ್ನು ಪತ್ತೆಹಚ್ಚಲು ಯಾವುದೇ ಕಾರ್ಯವಿಧಾನವಿಲ್ಲ. ಅಲ್ಲದೆ, ವಿಶ್ವಾಸವನ್ನು ಬಲಪಡಿಸಲು ಈ ಅಂತರವನ್ನು ನಿವಾರಿಸಬೇಕು. ಇಂದಿನ ಜಗತ್ತಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಪರಿಶೀಲನೆ ಸೇರಿದಂತೆ ಬಿಡಬ್ಲ್ಯೂಸಿಯೊಳಗೆ ಬಲವಾದ ಅನುಸರಣಾ ಕ್ರಮಗಳಿಗೆ ಭಾರತ ನಿರಂತರವಾಗಿ ಕರೆ ನೀಡಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಶಸ್ತ್ರಾಸ್ತ್ರಗಳನ್ನು ಶಾಂತಿಯುತ ಬಳಕೆಗಾಗಿ ಮತ್ತು ಸಲಕರಣೆಗಳ ವಿನಿಮಯಕ್ಕೆ ಅನುವು ಮಾಡಿಕೊಡುವ ಅಂತರಾಷ್ಟ್ರೀಯ ಸಹಕಾರ ಭಾರತ ಬೆಂಬಲಿಸುತ್ತದೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net