ಪ್ರವಾಸಕ್ಕೆಂದು ಬಂದ ನಾಲ್ವರು ವಿದ್ಯಾರ್ಥಿಗಳು ಸಿಡಿಲ ಬಡಿತಕ್ಕೆ ದುರಂತ ಸಾವು: ಮೂವರ ಸ್ಥಿತಿ ಗಂಭೀರ! Lightning Strike

ಪ್ರವಾಸಕ್ಕೆಂದು ಬಂದ ನಾಲ್ವರು ವಿದ್ಯಾರ್ಥಿಗಳು ಸಿಡಿಲ ಬಡಿತಕ್ಕೆ ದುರಂತ ಸಾವು: ಮೂವರ ಸ್ಥಿತಿ ಗಂಭೀರ! Lightning Strike
ಪ್ರವಾಸಕ್ಕೆಂದು ಬಂದ ನಾಲ್ವರು ವಿದ್ಯಾರ್ಥಿಗಳು ಸಿಡಿಲ ಬಡಿತಕ್ಕೆ ದುರಂತ ಸಾವು: ಮೂವರ ಸ್ಥಿತಿ ಗಂಭೀರ! Lightning Strike
Published on

ಪ್ರಮುಖ ಮುಖ್ಯಾಂಶಗಳು

  • ಕೇರಳದಲ್ಲಿ ಸಿಡಿಲು ಬಡಿದು ದುರಂತ ಸಾವಿಗೀಡಾದ ನಾಲ್ವರು ವಿದ್ಯಾರ್ಥಿಗಳು
  • ಮಲಪ್ಪುರಂ ಜಿಲ್ಲೆಯ ಮಂಕಡದಲ್ಲಿ ನಡೆದ ದುರಂತ ಘಟನೆ
  • ಪಂಥಲ್ಲೂರು ಬೆಟ್ಟದ ವೀಕ್ಷಣಾ ಸ್ಥಳಕ್ಕೆ ಭೇಟಿ ನೀಡಿದ ವೇಳೆ ದುರ್ಘಟನೆ
  • ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲು
Lightning Strike :   ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳು ಸಾವಿಗೀಡಾದ ದುರಂತ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಮಂಕಡದಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 
ಮೃತರನ್ನು ಅಲಿ ಮತ್ತು ಮುಬೀನಾ ದಂಪತಿಯ ಪುತ್ರ ರಹೀಸ್ (20), ಸೈತಲವಿ ಮತ್ತು ದಿವಂಗತ ಸಜಿತಾ ದಂಪತಿಯ ಪುತ್ರ ಬಹಾಸ್ (18), ಅಜೀಜ್ ಮತ್ತು ಸುಲೈಖಾ ದಂಪತಿಯ ಪುತ್ರ ಸಿಯಾದ್ (18) ಮತ್ತು ನಿಸಾರ್ ಮತ್ತು ನಸೀಮಾ ದಂಪತಿಯ ಪುತ್ರ ಫಹಾದ್ (22) ಎಂದು ಗುರುತಿಸಲಾಗಿದೆ. 
ಸಿಡಿಲು ಬಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪಂಥಲ್ಲೂರು ಬೆಟ್ಟದ ವೀಕ್ಷಣಾ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ. ಸಿಡಿಲು ಬಡಿದು ಗಾಯಗೊಂಡ ಒಟ್ಟು ಏಳು ಜನರನ್ನು ಚಿಕಿತ್ಸೆಗಾಗಿ ಮಂಜೇರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರಿಗೆ ಅವರಲ್ಲಿ ನಾಲ್ವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಗಾಯಗೊಂಡವರಲ್ಲಿ ಮೃತ ಫಹಾದ್ ಅವರ ಅವಳಿ ಸಹೋದರ ರೋಷನ್, ಮೃತ ರಹೀಸ್ ಅವರ ಸಹೋದರ ಸಲ್ಮಾನುಲ್ ಫಾರಿಸ್ ಮತ್ತು ಮಲಯಿಲ್ ಹೌಸ್‌ನ ಮುಷ್ತಾಕ್ ಅವರ ಮಗ ಇಶ್ಹತ್ (16) ಸೇರಿದ್ದಾರೆ. ಸಲ್ಮಾನುಲ್ ಫಾರಿಸ್ ಮತ್ತು ಇಶ್ಹತ್ ಅವರನ್ನು ಚಿಕಿತ್ಸೆಗಾಗಿ ಮೌಲಾನಾ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ಸಿಡಿಲು ಬಡಿದ ತಕ್ಷಣ ವಿದ್ಯಾರ್ಥಿಗಳು ಕುಸಿದು ಬಿದ್ದರು. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯರು ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದರೆ, ಈ ನಾಲ್ಕು ಮಂದಿಯನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಮಂಕಡದ ವೆಲ್ಲಿಲಾ ಪ್ರದೇಶದ ಬಳಿ ಇರುವ ಪಂಥಲ್ಲೂರು ವೀಕ್ಷಣಾ ಸ್ಥಳವು ಸ್ಥಳೀಯರು ಮತ್ತು ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುವ ಜನಪ್ರಿಯ ತಾಣವಾಗಿದೆ.
ಮಧ್ಯಾಹ್ನದಿಂದ ಮಲಪ್ಪುರಂ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ವರದಿಯಾಗಿದ್ದು, ದುರಂತದ ಸಮಯದಲ್ಲಿ ಈ ಪ್ರದೇಶದಲ್ಲಿ ಅಸ್ಥಿರ ಹವಾಮಾನವಿತ್ತು, (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net