ಮಂಗಳವಾರ(ಫೆ. 10) ಸಂಸತ್ನಲ್ಲಿ ಸುದ್ದಿಗಾರರೊಂದಿಗೆ ಮೊಬೈಲ್ನಲ್ಲಿ ಎಕ್ಸ್ ಖಾತೆಯ ಪೋಸ್ಟ್ ತೋರಿಸುತ್ತಾ ಮಾತನಾಡಿರುವ ಅವರು, ಇಲ್ಲಿ ಮಿಸ್ಟರ್ ನರವಾಣೆ ಅವರ ಒಂದು ಟ್ವೀಟ್ ಇದೆ. ನನ್ನ ಪುಸ್ತಕದ ಲಿಂಕ್ ಅನ್ನು ಫಾಲೋ ಮಾಡಿ ಅಂತ ಹೇಳುತ್ತಿದೆ. ನಾನು ಏನು ಹೇಳ್ತಿದ್ದೇನೆ ಅಂದ್ರೆ, ಇಲ್ಲಿ ನರವಾಣೆ ಅವರು ಸುಳ್ಳು ಹೇಳ್ತೀರಬೇಕು, ಇಲ್ಲ ಪಬ್ಲಿಷರ್ ಸಂಸ್ಥೆ ಪೆಂಗ್ವಿನ್ ಸುಳ್ಳು ಹೇಳುತ್ತಿರಬೇಕು.