16 ದಿನದ ಮಗುವನ್ನು ತುಳಿದು ಕೊಂದ ನಾಲ್ವರು ಅತ್ತೆಯಂದಿರು! ಘಟನೆಗೆ ಕಾರಣ ಏನು?

Crime
Crime
Published on

ಪ್ರಮುಖ ಮುಖ್ಯಾಂಶಗಳು

  • ಮದುವೆ ಆಗಿಲ್ಲ ಎಂಬ ಹತಾಶೆಯಲ್ಲಿದ್ದ ಅತ್ತೆಯಂದಿರು ಮಗುವನ್ನು ಕೊಂದಿದ್ದಾರೆ
  • ರಾಜಸ್ಥಾನದ ಜೋಧ್‌ಪುರದಲ್ಲಿ ನಡೆದ ಆತಂಕಕಾರಿ ಘಟನೆ
ರಾಜಸ್ಥಾನ: ನಾಲ್ವರು ಮಹಿಳೆಯರು ತಮ್ಮ 16 ದಿನಗಳ ಸೋದರಳಿಯನನ್ನು( ಮಗು) ತುಳಿದು ಕೊಂದಿರುವ ಆತಂಕಕಾರಿ ಘಟನೆ ರಾಜಸ್ಥಾನದ ಜೋಧ್‌ಪುರದಲ್ಲಿ ಇತ್ತೀಚಿಗೆ ನಡೆದಿದೆ.
ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಒಬ್ಬ ಮಹಿಳೆ ಮಗುವನ್ನು ತನ್ನ ಮಡಿಲಲ್ಲಿ ಹಿಡಿದುಕೊಂಡು ಜಪ ಮಾಡುತ್ತಿರುವುದನ್ನು ತೋರಿಸಲಾಗಿದ್ದು, ಇತರರು ಜಾನಪದ ದೇವತೆಯಾದ ಭೇರುವಿಗೆ ಪ್ರಾರ್ಥನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಗುವನ್ನು ಕೊಲ್ಲಲು ಕಾರಣ

ಹುಡುಗನ ತಂದೆ ತನ್ನ ಅತ್ತಿಗೆಯರೇ ಈ ಕೊಲೆಗೆ ಕಾರಣ ಎಂದು ಬಹಿರಂಗಪಡಿಸಿದರು. ಅವರು ಕೆಲವು ವರ್ಷಗಳಿಂದ ಮದುವೆಯಾಗಲು ಹತಾಶರಾಗಿದ್ದರು ಮತ್ತು ತನ್ನ ಮಗನನ್ನು ಕೊಲ್ಲುವುದರಿಂದ ಅವರಿಗೆ ಮದುವೆ ಪ್ರಸ್ತಾಪಗಳು ಬರುತ್ತವೆ ಎಂದು ಭಾವಿಸಿದ್ದರು. ಮಗುವನ್ನು ಕೊಲೆ ಮಾಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
"ಕೊಲೆಗಾರರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕೆಂದು ನಾನು ಬಯಸುತ್ತೇನೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ಇಂತಹ ವೀಡಿಯೊಗಳನ್ನು ಮಾಡಲಾಗಿದೆ" ಮಗುವಿನ ತಂದೆ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇತ್ತ ಪ್ರಕರಣವು ಪ್ರಸ್ತುತ ತನಿಖೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net