ಉದ್ಯಮಿ ಮನೆಗೆ ನುಗ್ಗಿ, ಕುಟುಂಬಸ್ಥರ ಮೇಲೆ ಹಲ್ಲೆಗೈದು ನಾಲ್ವರು ದುಷ್ಕರ್ಮಿಗಳಿಂದ ದರೋಡೆ; ಕೃತ್ಯ ಸಿಸಿಟಿವಿಯಲ್ಲಿ ಸೆರೆ | Robbery

ಸಿಸಿಟಿವಿ ದೃಶ್ಯಾವಳಿ
ಸಿಸಿಟಿವಿ ದೃಶ್ಯಾವಳಿ
Published on
ಗುವಾಹಟಿ: ಅಸ್ಸಾಂನ ರಾಜಧಾನಿ ಗುವಾಹಟಿಯಲ್ಲಿ ಸೋಮವಾರ(ಜ. 19) ರಾತ್ರಿ ನಾಲ್ವರು ಮುಸುಕುಧಾರಿ ದುಷ್ಕರ್ಮಿಗಳು ಉದ್ಯಮಿಯೊಬ್ಬರ ಮನೆಗೆ ನುಗ್ಗಿ, ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ದರೋಡೆ ಮಾಡಿದ್ದು, ಘಟನೆಯ ಕೃತ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಉದ್ಯಮಿ ಅನಿಲ್ ದೇಕಾ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ಬಿಳಿ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ವರು ದರೋಡೆಕೋರರು ಸುಮಾರು 40 ನಿಮಿಷಗಳಲ್ಲಿ ಕುಟುಂಬಸ್ಥರಿಗೆ ಚಾಕು, ಬಂದೂಕು ತೋರಿಸಿ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ.
ಘಟನೆಯ ಕೃತ್ಯ ಮನೆ ಮತ್ತು ಅಪಾರ್ಟ್​ಮೆಂಟ್​ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ ದುಷ್ಕರ್ಮಿಗಳು ಡೆಕಾ ಅವರ ಪತ್ನಿ ಮತ್ತು ಕುಟುಂಬದ ಚಾಲಕನಿಗೆ ಲಿವಿಂಗ್ ರೂಮ್​ನಲ್ಲಿ ಬಂದೂಕು ತೋರಿಸಿ ಬೆದರಿಸುತ್ತಿದ್ದು, ಕಠಾರಿಯಿಂದ ಹಲ್ಲೆ ಮಾಡುತ್ತಿರುವುದನ್ನು ಮಾಡುವುದು ಸೆರೆಯಾಗಿದೆ.
ದರೋಡೆ ನಡೆದ ಸಮಯದಲ್ಲಿ ಉದ್ಯಮಿ ಡೆಕಾ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕಳ್ಳರು ನಗದು, ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net