ಮನೆ ಬೆಡ್​ರೂಮ್​ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ನಾಲ್ಕು ಮಕ್ಕಳ ಶವ ಪತ್ತೆ; ತಾಯಿ ನಾಪತ್ತೆ | Four children

ಘಟನೆಯ ಸ್ಥಳ
ಘಟನೆಯ ಸ್ಥಳ
Published on: 
ಲಖನೌ: ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಮನೆಯ ಬೆಡ್​ರೂಮ್​ನೊಳಗೆ ನಾಲ್ವರು ಅಪ್ರಾಪ್ತ ಮಕ್ಕಳು(Four children) ಕೊಲೆಯಾದ ರೀತಿಯಲ್ಲಿ ಅವರ ಶವಗಳು ಪತ್ತೆಯಾಗಿದ್ದು, ತಾಯಿ ನಾಪತ್ತೆಯಾಗಿದ್ದಾರೆ ಎಂದು ಶನಿವಾರ(ಮೇ 02) ವರದಿಯಾಗಿದೆ.
ಅಂಬೇಡ್ಕರ್ ಜಿಲ್ಲೆಯ ಅಕ್ಬರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಿರಾನ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶನಿವಾರ ಮಧ್ಯಾಹ್ನ 3 ಗಂಟೆಗೆ ಬೆಳಕಿಗೆ ಬಂದಿದೆ. ಬೆಳಗ್ಗೆಯಿಂದ ಮನೆಗೆ ಬೀಗ ಹಾಕಿದ್ದರಿಂದ ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮನೆ ತೆರೆದು ನೋಡಿದಾಗ ರಕ್ತಸಿಕ್ತವಾಗಿ ಬಿದ್ದಿದ್ದ ಮಕ್ಕಳ ಶವಗಳು ಪತ್ತೆಯಾಗಿವೆ ಎನ್ನಲಾಗಿದೆ.
ಮೃತ ಮಕ್ಕಳನ್ನು ಶಫೀಕ್(14), ಸೌದ್(10), ಉಮರ್(8) ಹಾಗೂ ಸಾದಿಯಾ (ಏಳು) ಎಂದು ಗುರುತಿಸಲಾಗಿದೆ. ಸೌದಿ ಅರೇಬಿಯಾದಲ್ಲಿ ವರ್ಷಗಳಿಂದ ಕೆಲಸ ಮಾಡುತ್ತಿರುವ ನಿಯಾಜ್ ಅವರ ಮಕ್ಕಳಾಗಿದ್ದು, ನಾಪತ್ತೆಯಾಗಿರುವ ತಮ್ಮ ತಾಯಿ ನಾಜಿಯಾ ಖತೂನ್(37) ಅವರೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಈ ಕುರಿತು ಮಾತನಾಡಿರುವ ಅಯೋಧ್ಯಾ ವಲಯದ ಉಪ ಮಹಾನಿರ್ದೇಶಕ ಸೋಮೆನ್ ಬರ್ಮಾ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಯಲ್ಲಿ ನಾಲ್ಕು ಮಕ್ಕಳ ಶವಗಳು ಬಿದ್ದಿವೆ ಎಂದು ನಮಗೆ ಮಾಹಿತಿ ಸಿಕ್ಕಿತು. ಪೊಲೀಸ್ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿವೆ ಎಂದು ಹೇಳಿದ್ದಾರೆ.
ಮನೆಯ ಮುಖ್ಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಮತ್ತು ಮಕ್ಕಳು ಮೊಂಡಾದ ವಸ್ತುವಿನಿಂದ, ಬಹುಶಃ ಇಟ್ಟಿಗೆಯಿಂದ ಹೊಡೆದ ನಂತರ ಸಾವನ್ನಪ್ಪಿರುವಂತೆ ಕಂಡುಬಂದಿದೆ. ವಿಧಿವಿಜ್ಞಾನ ಪರೀಕ್ಷೆ ನಡೆಯುತ್ತಿದ್ದು, ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ. ಮಕ್ಕಳ ತಾಯಿ ಕಾಣೆಯಾಗಿದ್ದಾರೆ. ಅವರನ್ನು ಅಪಹರಿಸಲಾಗಿದೆಯೇ ಅಥವಾ ಕಣ್ಮರೆಗೆ ಬೇರೆ ಯಾವುದೇ ಕೋನವಿದೆಯೇ ಎಂದು ತಿಳಿದುಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).