ಈ ವರ್ಷದ ಫಾರ್ಚೂನ್ ಇಂಡಿಯಾ ಪಟ್ಟಿಯಲ್ಲಿ ರಿಲಯನ್ಸ್ ಫೌಂಡೇಶನ್ನ ಅಧ್ಯಕ್ಷೆ ನೀತಾ ಅಂಬಾನಿ (Nita Ambani) ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ಬ್ಯುಸಿನೆಸ್ ಮಾಡುವುದು ಮಾತ್ರ ನಾಯಕತ್ವ ಅಲ್ಲ, ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ನಾಯಕತ್ವ ಇಂದಿನ ಅಗತ್ಯ ಎಂದಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಬೆಳವಣಿಗೆಯಲ್ಲಿ ನಾವು ಮಾಡುವ ಹೂಡಿಕೆಯೇ ಭಾರತದ ಭವಿಷ್ಯದ ಅಡಿಪಾಯ, ಎಂದು ಅವರು ಜಾಗತಿಕ ವೇದಿಕೆಯಲ್ಲಿ ನುಡಿದ್ದಿದ್ದಾರೆ.