ಅಮೇಠಿ ಮತದಾರರ ಪಟ್ಟಿಯಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರು ನಾಪತ್ತೆ! | Amethi

Amethi
Amethi
Published on
ಅಮೇಠಿ: ಉತ್ತರ ಪ್ರದೇಶದ ಅಮೇಠಿ(Amethi) ಜಿಲ್ಲೆಯ ಮದನ್​ ಮವಾಯ್​ ಗ್ರಾಮ ಪಂಚಾಯತಿಯ ಮತದಾರರ ಪಟ್ಟಿಯಿಂದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರು ನಾಪತ್ತೆಯಾಗಿದೆ. ಈ ಪ್ರದೇಶದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಮತದಾರರ ಯಾದಿಯಲ್ಲಿ ಇರಾನಿ ಹೆಸರಿದ್ದರೂ ಪಂಚಾಯತ್​ ಪಟ್ಟಿಯಿಂದ ಕಾಣೆ ಆಗಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಮೇಠಿ ಜಿಲ್ಲಾಧಿಕಾರಿ ಸಂಜಯ್​ ಚೌಹಾಣ್​ ತಿಳಿಸಿದ್ದಾರೆ. ಬಿಜೆಪಿ ನಾಯಕಿ ಇರಾನಿ, ಲೋಕಸಭೆಯಲ್ಲಿ 2019ರಿಂದ 2024ರ ವರೆಗೆ ಅಮೇಠಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಗೌರಿಗಂಜ್​ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಯ ಮದನ್​ ಮವಾಯ್​ ಗ್ರಾಮದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದರು.
ಸಾಮಾನ್ಯವಾಗಿ, ಸ್ಥಳೀಯ ಸಂಸ್ಥೆಗಳ (ಪಂಚಾಯತ್) ಚುನಾವಣೆ ಮತ್ತು ಲೋಕಸಭೆ/ವಿಧಾನಸಭಾ ಚುನಾವಣೆಗಳ ಮತದಾರರ ಪಟ್ಟಿಗಳನ್ನು ನಿರ್ವಹಿಸುವ ಪ್ರಕ್ರಿಯೆಗಳು ಮತ್ತು ಅವುಗಳ ಅಪ್‌ಡೇಟ್ ಆಗುವ ಕಾಲಮಿತಿ ಬೇರೆಬೇರೆಯಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ತಾಂತ್ರಿಕ ದೋಷ ಅಥವಾ ಹೆಸರು ನವೀಕರಣದ (Updation) ಸಮಯದಲ್ಲಿ ಆದ ಲೋಪದೋಷಗಳು ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗುತ್ತದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net