ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 'ಈ 24 ಎಸೆತಗಳೇ' ನಿರ್ಣಾಯಕ; ಏನಿದು ಕೈಫ್ ಲೆಕ್ಕಾಚಾರ..? | India vs England

India vs England |  ಟೀಮ್​ ಇಂಡಿಯಾ ಆಟಗಾರರು
India vs England | ಟೀಮ್​ ಇಂಡಿಯಾ ಆಟಗಾರರು
Published on
ಮುಂಬೈ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾರ್ಚ್ 5 ರಂದು ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ಮುಖಾಮುಖಿಯಾಗಲಿವೆ.
ಈ ಮಹತ್ವದ ಹಣಾಹಣಿಗೂ ಮುನ್ನ ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಬುಮ್ರಾ ಮಾಡುವ ನಾಲ್ಕು ಓವರ್‌ಗಳು ಪಂದ್ಯದ ಫಲಿತಾಂಶವನ್ನೇ ಬದಲಿಸಬಲ್ಲವು ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕೈಫ್, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಜಸ್ಪ್ರೀತ್ ಬುಮ್ರಾ ಭಾರತದ ಪಾಲಿಗೆ ಅತಿದೊಡ್ಡ ಅಂಶವಾಗಲಿದ್ದಾರೆ. ಅವರ ಅಂಕಿಅಂಶಗಳೇ ಇದನ್ನು ಸಾಬೀತುಪಡಿಸುತ್ತವೆ, ಎಂದಿದ್ದಾರೆ.
 ಬುಮ್ರಾ ಇಂಗ್ಲೆಂಡ್ ವಿರುದ್ಧ ಆಡಿರುವ 5 ಟಿ20 ಪಂದ್ಯಗಳಲ್ಲಿ ಕೇವಲ 5.34 ರ ಎಕಾನಮಿಯಲ್ಲಿ 9 ವಿಕೆಟ್ ಕಬಳಿಸುವ ಮೂಲಕ ಇಂಗ್ಲಿಷ್ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಮುಂಬೈನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಬುಮ್ರಾರ ನಿಖರ ಯಾರ್ಕರ್ ಮತ್ತು ಸ್ಲೋಯರ್ ಬಾಲ್‌ಗಳು ನಿರ್ಣಾಯಕವಾಗಲಿವೆ ಎಂದಿದ್ದಾರೆ ಕೈಫ್.

ಪಿಚ್​​ ಬಗ್ಗೆ ಹೇಳಿದ್ದೇನು..?

ಇದೇ ವೇಳೆ ವಾಂಖೆಡೆ ಕ್ರೀಡಾಂಗಣದ ಬದಲಾದ ಪಿಚ್ ಬಗ್ಗೆಯೂ ಕೈಫ್ ಎಚ್ಚರಿಕೆ ನೀಡಿದ್ದು, ಸಾಮಾನ್ಯವಾಗಿ ಇಲ್ಲಿ ಟಾಸ್ ಗೆದ್ದವರು ಇಬ್ಬನಿ (Dew) ಕಾರಣದಿಂದ ಮೊದಲು ಬೌಲಿಂಗ್ ಮಾಡಲು ಇಷ್ಟಪಡುತ್ತಾರೆ. ಆದರೆ, ವಾಂಖೆಡೆ ಪಿಚ್ ಈಗ ಈಡನ್ ಗಾರ್ಡನ್ಸ್‌ನಂತಿಲ್ಲ. ಇತ್ತೀಚಿನ ಪಂದ್ಯಗಳಲ್ಲಿ ಇಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿಯ ಪ್ರಭಾವ ಅಷ್ಟಾಗಿ ಕಂಡುಬರುತ್ತಿಲ್ಲ ಎಂದರು.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 180 ರನ್ ಚೇಸ್ ಮಾಡಲು ಇಂಗ್ಲೆಂಡ್ ಪರದಾಡಿದ್ದೇ ಇದಕ್ಕೆ ಸಾಕ್ಷಿ ಎಂದು ವಿವರಿಸಿರುವ ಕೈಫ್​, ಟಾಸ್ ಗೆದ್ದ ತಕ್ಷಣ ಕಣ್ಣು ಮುಚ್ಚಿ ಬೌಲಿಂಗ್ ಆರಿಸಿಕೊಳ್ಳುವ ಮೊದಲು ಹವಾಮಾನ ಮತ್ತು ಪಿಚ್‌ನ ಇತ್ತೀಚಿನ ವರ್ತನೆಯನ್ನು ಗಮನಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net