ನವದೆಹಲಿ: ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು ಮತ್ತು ದಿನಗೂಲಿ ನೌಕರರ ಪಾಲಿಗೆ ದೆಹಲಿಯ ದ್ವಾರಕಾದಲ್ಲಿರುವ ಬಾಲಾಜಿ ಪಾರ್ಕ್ (Delhi Park Classroom) ಕೇವಲ ಉದ್ಯಾನವನವಾಗಿ ಉಳಿದಿಲ್ಲ, ಬದಲಿಗೆ ಅವರ ಮಕ್ಕಳ ಭವಿಷ್ಯ ರೂಪಿಸುವ ಜ್ಞಾನ ದೇಗುಲವಾಗಿ ಬದಲಾಗಿದೆ. ಕಳೆದ 13 ವರ್ಷಗಳಿಂದ ಮುಕ್ತ ಶಾಲೆಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಪಾರ್ಕ್‌ನಲ್ಲಿ, ನಮಿತಾ ಚೌಧರಿ ಅವರು ಕೇವಲ ಐದು ಮಕ್ಕಳಿಂದ ಆರಂಭಿಸಿದ ಶಿಕ್ಷಣದ ಕಿಡಿ, ಇಂದಿಲ್ಲಿ 200ಕ್ಕೂ ಹೆಚ್ಚು ಬಡ ಮಕ್ಕಳ ಬಾಳಿಗೆ ಬೆಳಕಾಗಿದೆ. ಅಷ್ಟೇ ಅಲ್ಲ, 100ಕ್ಕೂ ಅಧಿಕ ಮಹಿಳೆಯರಿಗೆ ಸಬಲೀಕರಣ ಹಾಗೂ ಅಕ್ಷರ ಅಭ್ಯಾಸದ ಆಸರೆಯಾಗಿ ಈ ಪಾರ್ಕ್ ನೈಜ ಸಾಮಾಜಿಕ ಕ್ರಾಂತಿಗೆ ಸಾಕ್ಷಿಯಾಗಿದೆ.