ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ದಟ್ಟವಾದ ಮಂಜು ಆವರಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಪಗ್ರಹ ಚಿತ್ರಗಳ ಮೂಲಕ ಇದನ್ನು ಪತ್ತೆಹಚ್ಚಲಾಗಿದೆ. ಬೆಳಿಗ್ಗೆ 5.30 ರ ವೇಳೆಗೆ, ಉತ್ತರ ಪ್ರದೇಶದ ಆಗ್ರಾ, ಬರೇಲಿ, ಗೋರಖ್‌ಪುರ, ಸಹರಾನ್‌ಪುರ, ಪಂಜಾಬ್‌ನ ಅಮೃತಸರ, ಲುಧಿಯಾನ, ಅಂದಾಪುರ ಹಾಗೂ ದೆಹಲಿ, ಬಿಹಾರ ಮತ್ತು ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳು ಗೋಚರಿಸಲಿಲ್ಲ.