ಕೊಡಲಿಯಿಂದ ದಾಳಿಗೊಳಗಾದಾಗಲೂ ಹನುಮಾನ್ ಚಾಲೀಸಾ ಪಠಿಸಿದ್ದ ಸ್ಮಿತ್ ಮಚ್ಚಾರ್​: ಕಷ್ಟಕಾಲದಲ್ಲಿ ನಮಗೆ ಬಜರಂಗಬಲಿಯೇ ನೆನಪಾಗೋದೇಕೆ..? | Machchhar Recited Hanuman Chalisa

Machchhar Recited Hanuman Chalisa: ಕಾಕ್‌ಪಿಟ್ ಒಳಗಡೆ ತಮ್ಮ ಮೇಲೆ ದಾಳಿಯಾದಾಗ. ಪೈಲಟ್​ ಸ್ಮಿತ್ ಮಚ್ಚಾರ್ ಗಾಯಗೊಂಡಿದ್ದರು. ವಿಮಾನವು ಗಾಳಿಯಲ್ಲಿತ್ತು, ಮತ್ತು ಪ್ರತಿ ಸೆಕೆಂಡು ಕೂಡ ಅಮೂಲ್ಯವಾಗಿತ್ತು. ಆದರೆ ಈ ಸಂಪೂರ್ಣ ಸಂಕಷ್ಟದ ಸಮಯದಲ್ಲಿ, ಒಂದು ವಿಷಯ ಮಾತ್ರ ಅವರೊಂದಿಗೆ ನಿರಂತರವಾಗಿ ಜೊತೆಯಾಗಿತ್ತು.
ಕೊಡಲಿಯಿಂದ ದಾಳಿಗೊಳಗಾದಾಗಲೂ ಹನುಮಾನ್ ಚಾಲೀಸಾ ಪಠಿಸಿದ್ದ ಸ್ಮಿತ್ ಮಚ್ಚಾರ್​: ಕಷ್ಟಕಾಲದಲ್ಲಿ ನಮಗೆ ಬಜರಂಗಬಲಿಯೇ ನೆನಪಾಗೋದೇಕೆ..? | Machchhar Recited Hanuman Chalisa
Published on: 

Machchhar Recited Hanuman Chalisa: ಕಾಕ್‌ಪಿಟ್ ಒಳಗಡೆ ತಮ್ಮ ಮೇಲೆ ದಾಳಿಯಾದಾಗ. ಪೈಲಟ್​ ಸ್ಮಿತ್ ಮಚ್ಚಾರ್ ಗಾಯಗೊಂಡಿದ್ದರು. ವಿಮಾನವು ಗಾಳಿಯಲ್ಲಿತ್ತು, ಮತ್ತು ಪ್ರತಿ ಸೆಕೆಂಡು ಕೂಡ ಅಮೂಲ್ಯವಾಗಿತ್ತು. ಆದರೆ ಈ ಸಂಪೂರ್ಣ ಸಂಕಷ್ಟದ ಸಮಯದಲ್ಲಿ, ಒಂದು ವಿಷಯ ಮಾತ್ರ ಅವರೊಂದಿಗೆ ನಿರಂತರವಾಗಿ ಜೊತೆಯಾಗಿತ್ತು. ಅದೇ ಹನುಮಾನ್ ಚಾಲೀಸಾ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ಮಚ್ಚಾರ್​, ನೋವು ಮತ್ತು ಕಷ್ಟದ ಸಮಯದಲ್ಲಿ ತಾನು ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಬಹಿರಂಗಪಡಿಸಿದರು.

ಭಾರತದಲ್ಲಿ, ರಾತ್ರಿ ವೇಳೆ ಮಗುವಿಗೆ ಭಯವಾದರೆ, ಸಾಮಾನ್ಯವಾಗಿ ಹನುಮಂತನ ಹೆಸರನ್ನು ಸ್ಮರಿಸುವಂತೆ ಹೇಳಲಾಗುತ್ತದೆ. ಒಂದು ದೊಡ್ಡ ಪ್ರಯಾಣ ಆರಂಭವಾದಾಗ, ದೊಡ್ಡ ಸಮಸ್ಯೆ ಎದುರಾದಾಗ, ಅಥವಾ ಯಾವುದೋ ಅಜ್ಞಾತ ಭಯವು ಮನಸ್ಸನ್ನು ಆವರಿಸಿಕೊಂಡಾಗ, ಹನುಮಾನ್ ಚಾಲೀಸಾ ನೆನಪಿಗೆ ಬರುತ್ತದೆ. ಪ್ರತಿ ಮನೆಯಲ್ಲೂ ಕೃಷ್ಣ, ಶಿವ ಮತ್ತು ರಾಮನನ್ನು ಕೂಡ ಪೂಜಿಸಲಾಗುತ್ತದೆ. ಆದರೆ ಭಯ ಮತ್ತು ಸಂಕಷ್ಟದ ಸಮಯದಲ್ಲಿ ಹನುಮಂತನನ್ನೆ ನೆನೆಯುವುದೇಕೆ..? ಇದಕ್ಕೆ ಉತ್ತರ ಇಲ್ಲಿದೆ.

ಇದಕ್ಕೆ ಉತ್ತರವು ಸ್ವತಃ ಹನುಮಾನ್ ಚಾಲೀಸಾದಲ್ಲೇ ಅಡಗಿದೆ.

  • ಮಹಾವೀರನ (ಹನುಮಂತನ) ಹೆಸರನ್ನು ಪಠಿಸಿದರೆ ಭಯಗಳು ನಮ್ಮ ಹತ್ತಿರವೇ ಸುಳಿಯುವುದಿಲ್ಲ.

  • ರೋಗಗಳು ಗುಣಮುಖವಾಗುತ್ತವೆ ಮತ್ತು ಎಲ್ಲಾ ನೋವುಗಳು ಮಾಯವಾಗುತ್ತವೆ. ಹೀಗಾಗಿ ಹನುಮಂತನನ್ನು ಸದಾ ಜಪಿಸಬೇಕು ಎಂದು ಹೇಳಲಾಗಿದೆ.

  • ಇದರ ಮುಂದುವರಿದ ಭಾಗವಾಗಿ ತುಳಸೀದಾಸರು ಬರೆಯುತ್ತಾರೆ. ನಿಮ್ಮ ಮನಸ್ಸು, ಮಾತು ಮತ್ತು ಕ್ರಿಯೆಗಳನ್ನು ಶುದ್ಧವಾಗಿಟ್ಟುಕೊಂಡು ಹನುಮಂತನನ್ನು ಸ್ಮರಿಸಿದರೆ, ಆತ ನಿಮ್ಮ ಎಲ್ಲಾ ಕಷ್ಟ-ತೊಂದರೆಗಳನ್ನು ನಿವಾರಿಸುತ್ತಾನೆ.

ಇದರ ಅರ್ಥವೇನೆಂದರೆ, ಹನುಮಾನ್ ಚಾಲೀಸಾದಲ್ಲಿ ಹನುಮಂತನನ್ನು ಕೇವಲ ಒಬ್ಬ ಶಕ್ತಿಶಾಲಿ ದೇವತೆಯಾಗಿ ಮಾತ್ರ ಚಿತ್ರಿಸಿಲ್ಲ. ಬದಲಿಗೆ, ಭಯದಿಂದ ರಕ್ಷಣೆ ನೀಡುವ ಹಾಗೂ ನೋವು-ಸಂಕಷ್ಟಗಳಿಂದ ಪಾರು ಮಾಡುವ ದೇವರೆಂದೇ ಆತನನ್ನು ಸದಾ ಸ್ಮರಿಸಲಾಗುತ್ತದೆ. ಈ ನಂಬಿಕೆಯು ನಮ್ಮಲ್ಲಿ ತಲೆಮಾರುಗಳಿಂದಲೂ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿಹೋಗಿದೆ.

ರಾಮಾಯಣದಲ್ಲೂ ಕೂಡ, ಹಾದಿ ಕಷ್ಟವಾಗಿದ್ದಾಗ ಹನುಮಂತನು ಅದನ್ನು ಸುಲಭಗೊಳಿಸಿದ್ದಾನೆ. ಉದಾಹರಣೆಗೆ, ಸೀತೆಯನ್ನು ಹುಡುಕಲು ಹೋದಾಗ ವಿಶಾಲವಾದ ಸಮುದ್ರವೇ ಅಡ್ಡಿಯಾಯಿತು, ಆಗ ಹನುಮಂತ ಅದನ್ನು ಸುಲಭವಾಗಿ ದಾಟಿದರು. ಲಂಕಾದಲ್ಲಿ ಅವರು ಒಂಟಿಯಾಗಿದ್ದರೂ, ಧೈರ್ಯದಿಂದ ಸೀತೆಯ ಬಳಿಗೆ ತಲುಪಿದರು. ಹಾಗೆಯೇ, ಲಕ್ಷ್ಮಣನ ಪ್ರಾಣಕ್ಕೆ ಆಪತ್ತು ಬಂದಾಗ ಕೈಯಲ್ಲಿ ಅತಿ ಕಡಿಮೆ ಸಮಯವಿತ್ತು, ಅಂತಹ ಕಷ್ಟದ ಪರಿಸ್ಥಿತಿಯಲ್ಲೂ ಸಂಜೀವಿನಿ ಪರ್ವತವನ್ನು ತಂದುಕೊಡುವ ದೊಡ್ಡ ಜವಾಬ್ದಾರಿಯನ್ನು ಹನುಮಂತ ಯಶಸ್ವಿಯಾಗಿ ನಿರ್ವಹಿಸಿದರು.

ಈ ಎಲ್ಲಾ ಕಥೆಗಳಲ್ಲೂ ಒಂದು ಮುಖ್ಯವಾದ ಹೋಲಿಕೆ ಇದೆ. ಅದೇನೆಂದರೆ, ಜೀವನದಲ್ಲಿ ಯಾವುದೇ ದೊಡ್ಡ ಕಷ್ಟ ಅಥವಾ ಅತಿ ದೊಡ್ಡ ಸವಾಲು ಎದುರಾದಾಗ ಹನುಮಂತನು ಎಂದಿಗೂ ಹಿಂದೆ ಸರಿಯುವುದಿಲ್ಲ ಅಥವಾ ಧೃತಿಗೆಡುವುದಿಲ್ಲ. ಬದಲಿಗೆ, ಕ್ಷಣಮಾತ್ರದಲ್ಲೂ ಯೋಚಿಸದೆ ತಕ್ಷಣವೇ ಕಾರ್ಯಪ್ರವೃತ್ತರಾಗುತ್ತಾರೆ. ಬಹುಶಃ ಅದಕ್ಕಾಗಿಯೇ ಹನುಮಂತನ ಕಥೆಗಳು ಕೇವಲ ಮನೆಯಲ್ಲಿ ಪೂಜಿಸುವ ದೇವರ ಕಥೆಗಳಷ್ಟೇ ಅಲ್ಲದೆ, ಭಯದ ಸಮಯದಲ್ಲಿ ಹೇಗೆ ಧೈರ್ಯವಾಗಿರಬೇಕು ಎಂಬುದನ್ನು ಕಲಿಸುವ ದೊಡ್ಡ ಜೀವನ ಪಾಠವಾಗಿಯೂ ನಮ್ಮೆಲ್ಲರ ಮನಸ್ಸಿನಲ್ಲಿ ನೆಲೆಸಿವೆ.

ಚಾಲೀಸಾ ನೆನಪಿಲ್ಲದಿದ್ದರೂ!...

ಈ ವಿಷಯವು ಮತ್ತಷ್ಟು ಕುತೂಹಲಕಾರಿಯಾಗಿದೆ. ಅನೇಕ ಜನರಿಗೆ ಹನುಮಾನ್ ಚಾಲೀಸಾದ ಪ್ರತಿಯೊಂದು ಶ್ಲೋಕವೂ ಸಂಪೂರ್ಣವಾಗಿ ನೆನಪಿಲ್ಲದಿರಬಹುದು. ಆದರೆ, ಹಠಾತ್ತನೆ ತೀವ್ರವಾದ ಭಯ ಅಥವಾ ಆತಂಕ ಎದುರಾದಾಗ, ಜೈ ಬಜರಂಗಬಲಿ ಅಥವಾ ಹನುಮಾನ್ ಜಿ ರಕ್ಷಾ ಕರ್ಣ (ಓ ಹನುಮಂತ ದೇವರೇ, ನನ್ನನ್ನು ರಕ್ಷಿಸು) ಎಂಬ ಮಾತುಗಳು ನಮ್ಮ ಬಾಯಿಯಿಂದ ತಾನಾಗಿಯೇ ಬರುತ್ತವೆ.

ಏಕೆಂದರೆ, ಹನುಮಂತನೊಂದಿಗಿನ ಈ ವಿಶೇಷ ನಂಟನ್ನು ನಾವು ಕೇವಲ ಕಷ್ಟ ಬಂದಾಗ ಮಾತ್ರ ಹುಟ್ಟುಹಾಕಿಕೊಳ್ಳುವುದಿಲ್ಲ. ಈ ನಂಟು ನಮ್ಮ ಜೀವನದಲ್ಲಿ ಬಹಳ ಹಿಂದೆಯೇ ಆರಂಭವಾಗಿರುತ್ತದೆ. ಚಿಕ್ಕಂದಿನಲ್ಲಿ ಕೇಳಿದ ಕಥೆಗಳಿಂದ, ವಿಶೇಷ ಪ್ರಾರ್ಥನೆಗಳಿಂದ, ನಮ್ಮ ಮನೆಯಲ್ಲಿ ಹಿರಿಯರು ಹನುಮಾನ್ ಚಾಲೀಸಾ ಪಠಿಸುವುದನ್ನು ನೋಡುವುದರಿಂದ ಹಾಗೂ ನಮಗೆ ಭಯವಾದಾಗ ನಮ್ಮ ತಾಯಂದಿರು ಮತ್ತು ಅಜ್ಜಿಯರು ಧೈರ್ಯ ಹೇಳಿ ನೆನೆಯಲು ತಿಳಿಸಿದ್ದರಿಂದ ಇದು ಬೆಳೆದಿರುತ್ತದೆ. ಹೀಗಾಗಿ, ಬದುಕಿನಲ್ಲಿ ಕಷ್ಟದ ಸಮಯ ಬಂದಾಗ ಆ ಬಾಲ್ಯದ ನೆನಪುಗಳು ಮತ್ತು ನಂಬಿಕೆಗಳು ನಮ್ಮ ಮನಸ್ಸಿನಲ್ಲಿ ಮರುಕಳಿಸುತ್ತವೆ.

ಕ್ಯಾಪ್ಟನ್ ಸ್ಮಿತ್ ಅವರ ಪ್ರಕರಣವೂ ಕೂಡ ಇದರ ಸುಳಿವು ನೀಡುತ್ತದೆ. ಅವರ ತಂದೆಯು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಕುಟುಂಬದಲ್ಲಿ ಬಹಳ ಹಿಂದಿನಿಂದಲೂ ಹನುಮಾನ್ ಚಾಲೀಸಾ ಪಠಿಸುವ ಸಂಪ್ರದಾಯವಿರುವುದನ್ನು ಉಲ್ಲೇಖಿಸಿದ್ದಾರೆ.

ಅವರನ್ನು ರಕ್ಷಿಸಿದ್ದು ಹನುಮಾನ್ ಚಾಲೀಸಾ...?

ಇಲ್ಲಿ ಒಂದು ಮುಖ್ಯವಾದ ಸಂಗತಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಅದೇನೆಂದರೆ, ಕ್ಯಾಪ್ಟನ್ ಸ್ಮಿತ್ ಒಬ್ಬ ಅತ್ಯಂತ ಅನುಭವಿ ಪೈಲಟ್. ಆ ಅಪಾಯಕಾರಿ ಹಾಗೂ ಕಷ್ಟಕರ ಸಂದರ್ಭದಲ್ಲಿ ಅವರ ವೃತ್ತಿಪರ ತರಬೇತಿ ಮತ್ತು ಸಮಯೋಚಿತ ನಿರ್ಧಾರವೇ ಜೀವ ಉಳಿಸಲು ಮುಖ್ಯ ಕಾರಣವಾಗಿತ್ತು. ಆದರೆ, ಆ ಅತಿ ಕಷ್ಟದ ಸಮಯದಲ್ಲಿ ತನ್ನ ಅಚಲ ನಂಬಿಕೆ ಮತ್ತು ದೇವರ ಪ್ರಾರ್ಥನೆ ತನ್ನೊಂದಿಗೆ ಇತ್ತು ಎಂದು ಸ್ಮಿತ್ ಸ್ವತಃ ಹೇಳಿಕೊಂಡಿದ್ದಾರೆ.

ಬಹುಶಃ ಈ ಘಟನೆಯೇ, ನಮಗೆ ಯಾವುದೇ ದೊಡ್ಡ ಸಂಕಷ್ಟ ಎದುರಾದಾಗ ಯಾಕೆ ಮೊದಲು ಹನುಮಂತನನ್ನು ನೆನಪಿಸಿಕೊಳ್ಳುತ್ತೇವೆ ಎಂಬ ಪ್ರಶ್ನೆಗೆ ಉತ್ತರ ನೀಡುತ್ತದೆ. ಏಕೆಂದರೆ, ತಲೆಮಾರುಗಳಿಂದಲೂ ಹನುಮಂತನನ್ನು ಯಾವುದೇ ಕಷ್ಟ-ಸಂಕಷ್ಟ ಅಥವಾ ಅತಿ ದೊಡ್ಡ ಸವಾಲುಗಳು ಎದುರಾದಾಗಲೂ ಎಂದಿಗೂ ಹಿಂದೆ ಸರಿಯದ, ಧೈರ್ಯವಾಗಿ ಎದುರಿಸುವ ದೇವರೆಂದೇ ಭಾವಿಸುತ್ತಾ ಬಂದಿದ್ದೇವೆ.

ಕ್ಯಾಪ್ಟನ್ ಸ್ಮಿತ್ ಕೂಡ ಆ ಸಂದರ್ಭದಲ್ಲಿ ದೊಡ್ಡ ಸಂಕಷ್ಟವನ್ನು ಎದುರಿಸುತ್ತಿದ್ದರು ಮತ್ತು ಅವರ ಮನಸ್ಸಿನಲ್ಲಿ ಹನುಮಾನ್ ಚಾಲೀಸಾ ಇತ್ತು. ಆದರೆ ಅಂತಿಮವಾಗಿ, ಆ ನಿರ್ಣಾಯಕ ಕ್ಷಣದಲ್ಲಿ ಯಾವುದು ಅತ್ಯಂತ ಮುಖ್ಯವೋ ಅದನ್ನು ಅವರು ಮಾಡಬೇಕಾಗಿತ್ತು. ಅದೇ ಗೊಂದಲಕ್ಕೆ ಒಳಗಾಗದೆ ಧೈರ್ಯದಿಂದ ದೃಢವಾಗಿ ನಿಲ್ಲುವಂತೆ ಮಾಡಿತು(ಏಜೆನ್ಸೀಸ್​).

Disclaimer: ಇಲ್ಲಿ ಒದಗಿಸಲಾದ ಮಾಹಿತಿಯು ಸಂಪೂರ್ಣವಾಗಿ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ವಿಜಯವಾಣಿ ಯಾವುದೇ ನಂಬಿಕೆಗಳು ಅಥವಾ ಮಾಹಿತಿಯನ್ನು ಅನುಮೋದಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಯಾವುದೇ ಮಾಹಿತಿ ಅಥವಾ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸುವ ಮೊದಲು ಸಂಬಂಧಿಸಿದ ತಜ್ಞರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net