ಈ ಬಾರಿ ಬಿರು ಬೇಸಿಗೆಯ ಜತೆಗೆ ಚುನಾವಣೆಯ ಕಾವು ಕೂಡ ಹೆಚ್ಚಲಿದೆ! ಐದು ರಾಜ್ಯಗಳ 17.4 ಕೋಟಿ ಮತದಾರರು ರಾಜಕೀಯ ಪಕ್ಷಗಳ ಹಣೆಬರಹ ನಿರ್ಧರಿಸಲಿದ್ದಾರೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಭಾನುವಾರದಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಸ್ಪರ್ಧೆಗೆ ಬಿದ್ದವರಂತೆ ಹಲವು ಘೋಷಣೆಗಳನ್ನು ಮಾಡಿದ್ದು, ಪ್ರಚಾರವಂತೂ ಚುನಾವಣೆ ಘೋಷಣೆಯಾಗುವ ಮುಂಚೆಯಿಂದಲೂ ರಂಗೇರಿದೆ. ಮುಂಬರುವ ದಿನಗಳಲ್ಲಿ ಆಯಾ ಪಕ್ಷಗಳ ರಾಷ್ಟ್ರೀಯ ನಾಯಕರು ಪ್ರಚಾರದ ವೇಗವನ್ನು ಹೆಚ್ಚಿಸಲಿದ್ದಾರೆ. ಈ ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಸ್ತುತ ರಾಜಕೀಯ ಸ್ಥಿತಿಗತಿ ಹೇಗಿದೆ, ನೇರ ಸ್ಪರ್ಧೆ ಯಾರ ನಡುವೆ ನಡೆಯಲಿದೆ ಎಂಬುದರ ವಿವರ ಇಲ್ಲಿದೆ.