ಕ್ರೀಡಾಂಗಣಗಳಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಬಳಸಲಾಗುವ, ಸೌರಶಕ್ತಿಯಿಂದ ನಡೆಯುವ ಸಾಮಾನ್ಯ ಪೋರ್ಟಬಲ್ ಎಕ್ಸ್-ರೇ ಯಂತ್ರವನ್ನೇ ಈ ಪ್ರಯೋಗಕ್ಕೆ ಬಳಸಲಾಗಿತ್ತು. ಭೂಮಿಯ ಮೇಲಿನ ನಿಯಂತ್ರಣ ಕೊಠಡಿಯ ಯಾವುದೇ ಸಹಾಯವಿಲ್ಲದೆ, ಕೇವಲ 4 ಗಂಟೆಗಳ ತರಬೇತಿ ಪಡೆದ ವೈದ್ಯಕೀಯೇತರ ಮೂವರು ಗಗನಯಾತ್ರಿಗಳು ಈ ಸಾಧನೆ ಮಾಡಿದ್ದಾರೆ. ಗಗನಯಾತ್ರಿಗಳು ತಮ್ಮ ಕೈ, ಮುಂಗೈ, ಹೊಟ್ಟೆ, ಸೊಂಟ ಮತ್ತು ಎದೆಯ ಭಾಗದ ಎಕ್ಸ್-ರೇಗಳನ್ನು ಯಶಸ್ವಿಯಾಗಿ ತೆಗೆದಿದ್ದಾರೆ.