ಮೊದಲು ಬೆಂಬಲ ಪಡೆಯಿರಿ, ಆಮೇಲೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿ; ದಳಪತಿ ವಿಜಯ್ ವಿರುದ್ಧ ಡಿಎಂಕೆ ವಾಗ್ದಾಳಿ | DMK

ಎಂ.ಕೆ.ಸ್ಟಾಲಿನ್ ಮತ್ತು ದಳಪತಿ ವಿಜಯ್
ಎಂ.ಕೆ.ಸ್ಟಾಲಿನ್ ಮತ್ತು ದಳಪತಿ ವಿಜಯ್
Published on
ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಮೂರನೇ ಬಾರಿಯೂ ವಿಫಲವಾಗಿರುದ ಟಿವಿಕೆ ಮುಖ್ಯಸ್ಥ ನಟ ದಳಪತಿ ವಿಜಯ್ ವಿರುದ್ಧ ಡಿಎಂಕೆ(DMK) ವಾಗ್ದಾಳಿ ನಡೆಸಿದ್ದು, ಮೊದಲು ಪಕ್ಷಗಳ ಬೆಂಬಲ ಪಡೆಯಿರಿ, ಬಳಿಕ ರಾಜ್ಯಪಾಲರ ಬಳಿ ಸರ್ಕಾರ ರಚಿಸಲು ಹಕ್ಕು ಮಂಡಿಸಿ ಎಂದು ಕಿಡಿಕಾರಿದೆ.
ಈ ಕುರಿತು ಮಾತನಾಡಿರುವ ಡಿಎಂಕೆ ನಾಯಕ ಟಿಕೆಎಸ್ ಎಳಂಗೋವನ್, ಮೊದಲು ರಾಜಕೀಯ ಪಕ್ಷಗಳಿಂದ ಬೆಂಬಲ ಸಂಗ್ರಹಿಸಿ ನಂತರ ರಾಜ್ಯಪಾಲರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ. ವಿಜಯ್ ಮೊದಲು ಒಬ್ಬಂಟಿಯಾಗಿ ಹೋಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದರೆ, ರಾಜ್ಯಪಾಲರು ಒಪ್ಪಿಗೆ ಕೊಡುತ್ತಿದ್ದರು. ನಂತರ ಸದನದಲ್ಲಿ ಬಲವನ್ನು ಸಾಬೀತುಪಡಿಸುತ್ತಿದ್ದರು.
ಆದರೆ ವಿಜಯ್ ಕಾಂಗ್ರೆಸ್ ಬೆಂಬಲದೊಂದಿಗೆ 112 ಶಾಸಕರ ಪತ್ರವನ್ನು ಸಲ್ಲಿಸಿದಾಗ ರಾಜ್ಯಪಾಲರು ಬಹುಮತದ ಕೊರತೆಯಿದೆ ಎಂದು ಖಂಡಿತವಾಗಿ ಒಪ್ಪಿಗೆ ನೀಡುತ್ತಿರಲಿಲ್ಲ. ಕೆಲವು ಪಕ್ಷಗಳ ಟಿವಿಕೆ ಬೆಂಬಲ ನೀಡಿದ್ರೂ, ಸ್ಪಷ್ಟ ಬಹುಮತ ತೋರಿಸಲು ರಾಜ್ಯಪಾಲರು ಸೂಚಿಸುತ್ತಾರೆ ಎಂದು ಹೇಳಿದ್ದಾರೆ.
ಇನ್ನೂ ವಿಜಯ್ ರಾಜ್ಯಪಾಲರನ್ನು ಮೂರನೇ ಭಾರಿ ಭೇಟಿ ಮಾಡಿದ್ರೂ ಪ್ರಮಾಣವಚನಕ್ಕೆ ಅವಕಾಶ ಸಿಗಲಿಲ್ಲ. ಕಾಂಗ್ರೆಸ್ ಮತ್ತು ಸಿಪಿಎಂ ಬೆಂಬಲ ನೀಡಿವೆ. ಆದರೆ ಟಿವಿ ದಿನಕರನ್ ಅವರ ಎಎಂಎಂಕೆ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಟಿವಿಕೆಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದವು.
ಜೊತೆಗೆ ವಿಸಿಕೆ ಇಂದು ತನ್ನ ನಿಲುವನ್ನು ಸ್ಪಷ್ಟಪಡಿಸುವ ನಿರೀಕ್ಷೆಯಿದೆ. ಪಕ್ಷದ ಮುಖ್ಯಸ್ಥ ತೋಲ್ ತಿರುಮಾವಲವನ್ ಅವರನ್ನು ವಿಜಯ್ ಇಂದು ರಾತ್ರಿ ಭೇಟಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಇನ್ನೂ ತಮಿಳುನಾಡಿನಲ್ಲಿ ಸರ್ಕಾರ ರಚನೆ ಮಾಡುವವರು ಯಾರು ಎಂಬ ಬಗ್ಗೆ ಭಾರಿ ಕುತೂಹಲವಿದ್ದು, ಹಲವು ತಿರುವುಗಳು ಪಡೆಯುತ್ತಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net